ಕರ್ನಾಟಕ

karnataka

By

Published : Sep 21, 2019, 9:19 AM IST

ETV Bharat / sports

ಗೆಲುವಿನೊಂದಿಗೆ 18 ವರ್ಷಗಳ ವೃತ್ತಿ ಬದುಕಿಗೆ ಗುಡ್​ ಬೈ ಹೇಳಿದ ಹ್ಯಾಮಿಲ್ಟನ್​ ಮಸಕಡ್ಜಾ

ಅಫ್ಘಾನಿಸ್ತಾನದ ವಿರುದ್ಧ ಆಕರ್ಷಕ 71 ರನ್​ಗಳಿಸಿ ತಮ್ಮ ಕೊನೆಯ ಪಂದ್ಯದಲ್ಲಿ ತಂಡಕ್ಕೆ ಗೆಲುವು ತಂಡಕೊಡುವ ಮೂಲಕ ಜಿಂಬಾಬ್ವೆಯ ಹ್ಯಾಮಿಲ್ಟನ್​ ಮಸಕಡ್ಜಾ ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ನಿವೃತ್ತಿ ಹೇಳಿದ್ದಾರೆ.

Hamilton Masakadza

ಚಿತ್ತಗಾಂಗ್​: ವೃತ್ತಿ ಬದುಕಿನ ಕೊನೆಯ ಪಂದ್ಯವಾಡಿದ ಜಿಂಬಾಬ್ವೆ ತಂಡದ ನಾಯಕ ಹ್ಯಾಮಿಲ್ಟನ್​ ಮಸಕಡ್ಜಾ ಅಫ್ಘಾನಿಸ್ತಾನದ ವಿರುದ್ಧ 71 ರನ್​​ಗಳಿಸಿ ಗೆಲುವಿನ ರೂವಾರಿಯಾದರು.

ಅಫ್ಘಾನಿಸ್ತಾನ ನೀಡಿದ 155 ರನ್​ಗಳ ಗುರಿಯನ್ನು ಹ್ಯಾಮಿಲ್ಟನ್​ ಮಸಕಡ್ಜಾ ಅವರ ಸ್ಫೋಟಕ ಬ್ಯಾಟಿಂಗ್​ ನೆರವಿನಿಂದ ಇನ್ನು 3 ಎಸೆತಗಳಿರುವಂತೆ ತಲುಪಿ ಜಯ ಸಾಧಿಸಿತು. 42 ಎಸೆತಗಳನ್ನೆದುರಿಸಿದ ಮಸಕಡ್ಜಾ 5 ಭರ್ಜರಿ ಸಿಕ್ಸರ್​ ಹಾಗೂ 4 ಬೌಂಡರಿ ಸೇರಿದಂತೆ 71 ರನ್​ಗಳಿಸಿ ಕೊನೆಯ ಪಂದ್ಯವನ್ನು ಸ್ಮರಣೀಯವನ್ನಾಗಿಸಿಕೊಂಡರು.

ಹ್ಯಾಮಿಲ್ಟನ್​ ಮಸಕಡ್ಜಾ

2001ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ಪದಾರ್ಪಣೆ ಮಾಡಿದ ಹ್ಯಾಮಿಲ್ಟನ್​ ಮಸಕಡ್ಜಾ ಜಿಂಬಾಂಬ್ವೆ ಪರ 38 ಟೆಸ್ಟ್​, 209 ಏಕದಿನ ಹಾಗೂ 65 ಟಿ-20 ಪಂದ್ಯಗಳನ್ನಾಡಿದ್ದಾರೆ. ಏಕದಿನ ಕ್ರಿಕೆಟ್​ನಲ್ಲಿ ಅತಿ ಹೆಚ್ಚು ರನ್​ಗಳಿಸಿದ ಜಿಂಬಾಬ್ವೆಯ 4ನೇ ಬ್ಯಾಟ್ಸ್​ಮನ್​ ಎಂಬ ಹೆಗ್ಗಳಿಕೆಗೆ ಅವರು ಪಾತ್ರರಾಗಿದ್ದಾರೆ.

ವಿಶ್ವದಾಖಲೆಯೊಡನೆ ವಿದಾಯ

ಅಫ್ಘಾನಿಸ್ತಾನದ ಬೌಲರ್​ಗಳನ್ನು ಬೆಂಡೆತ್ತಿದ ಹ್ಯಾಮಿಲ್ಟನ್​ ಮಸಕಡ್ಜಾ 41 ಎಸೆತಗಳಲ್ಲಿ 71 ರನ್​ಗಳಿಸುವ ಮೂಲಕ ನಿವೃತ್ತಿಯ ಪಂದ್ಯದಲ್ಲಿ ಗರಿಷ್ಠ ರನ್​ ಬಾರಿಸಿ ವಿಶ್ವದಾಖಲೆಗೆ ಪಾತ್ರರಾದರು.

ABOUT THE AUTHOR

...view details