ರಾವಲ್ಪಿಂಡಿ: ಪಾಕಿಸ್ತಾನ ವಿರುದ್ಧ ಆತಿಥೇಯ ಜಿಂಬಾಬ್ವೆ ತಂಡ ಕೊನೆಯ ಏಕದಿನ ಪಂದ್ಯದಲ್ಲಿ ಸೂಪರ್ ಓವರ್ನಲ್ಲಿ ಜಯ ಸಾಧಿಸಿದೆ. ಈ ಮೂಲಕ ಸರಣಿಯಲ್ಲಿ ವೈಟ್ವಾಷ್ ಮುಖಭಂಗವನ್ನು ತಪ್ಪಿಸಿಕೊಂಡಿದೆ.
ರಾವಲ್ಪಿಂಡಿಯಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಜಿಂಬಾಬ್ವೆ ಸೀನ್ ವಿಲಿಯಮ್ಸ್ 118(135 ಎಸೆತ), ಬ್ರೆಂಡನ್ ಟೇಲರ್ 56(68), ಮಾಧೆವರ್ 33(31) ಹಾಗೂ ಸಿಕಂದರ್ ರಾಝಾ 45(36) ರನ್ಗಳ ನೆರವಿನಿಂದ 50 ಓವರ್ಗಳಲ್ಲಿ 6 ವಿಕೆಟ್ ನಷ್ಟಕ್ಕೆ 278 ರನ್ ಗಳಿಸಿತ್ತು.
ಪಾಕ್ ಪರ ಮೊಹಮ್ಮದ್ ಹಸ್ನೈನ್ 26ಕ್ಕೆ 5 ವಿಕೆಟ್ ಪಡೆದು ಮಿಂಚಿದರು.
279 ರನ್ಗಳ ಗುರಿ ಪಡೆದ ಪಾಕಿಸ್ತಾನ ಬಾಬರ್ ಅಜಮ್ ಶತಕ(125) ಹಾಗೂ ವಹಾಬ್ ರಿಯಾಜ್ ಅರ್ಧಶತಕ(52) ಹಾಗೂ ಕೊನೆಯ ಓವರ್ನಲ್ಲಿ ಮೊಹಮ್ಮದ್ ಮೂಸ(3 ಎಸೆತಗಳಲ್ಲಿ 9) ಅವರ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ ಟೈ ಸಾಧಿಸಿತ್ತು.
ಆದರೆ ಸೂಪರ್ ಓವರ್ನಲ್ಲಿ ಪಾಕಿಸ್ತಾನ 4 ಎಸೆತಗಳಲ್ಲಿ 2 ವಿಕೆಟ್ ಕಳೆದುಕೊಂಡು 2 ರನ್ ಗಳಿಸಿತ್ತು. 3 ರನ್ಗಳ ಗುರಿಯನ್ನ ಜಿಂಬಾಬ್ವೆ 3 ಎಸೆತಗಳಲ್ಲಿ 5 ರನ್ ಗಳಿಸಿ ಗೆಲುವಿನ ನಗೆ ಬೀರಿತು.
ಜಿಂಬಾಬ್ವೆ ಪರ ಅದ್ಭುತ ಬೌಲಿಂಗ್ ಪ್ರದರ್ಶನ ತೋರಿದ ಬ್ಲೆಸಿಂಗ್ ಮುಜರಬನಿ 5 ವಿಕೆಟ್ ಮತ್ತು ಸೂಪರ್ ಓವರ್ನಲ್ಲಿ 2 ವಿಕೆಟ್ ಪಡೆದು ಮಿಂಚಿದರು. ರಿಚರ್ಡ್ ಎನ್ಗರವ 2 ಹಾಗೂ ಟ್ರಿಪಾನೋ 2 ವಿಕೆಟ್ ಪಡೆದರು.