ಕರ್ನಾಟಕ

karnataka

ETV Bharat / sports

ಕೋವಿಡ್​ ಭೀತಿ: ಅಫ್ಘಾನಿಸ್ತಾನ​-ಜಿಂಬಾಬ್ವೆ ಟಿ20 ಸರಣಿ ರದ್ದು - ಕೋವಿಡ್​ 19 ಭೀತಿಗೆ ಅಫ್ಘಾನಿಸ್ತಾನ ವಿರುದ್ಧ ಸರಣಿ ರದ್ದು

ದೇಶದಲ್ಲಿ ಕೊರೊನಾ ವೈರಸ್ ಪ್ರಕರಣಗಳು ದಿಢೀರ್​ ಏರಿಕೆ ಕಾಣುತ್ತಿರುವ ಹಿನ್ನೆಲೆಯಲ್ಲಿ ಇಲ್ಲಿನ ಸರ್ಕಾರ ಮಾರಕ ಕಾಯಿಲೆಯ ಹರಡುವಿಕೆ ತಡೆಯಲು ಕಠಿಣವಾದ ನಿಯಮಗಳನ್ನು ಜಾರಿಗೊಳಿಸುತ್ತಿದೆ. ಈ ನಿಟ್ಟಿನಲ್ಲಿ ಜಿಂಬಾಬ್ವೆ ಕ್ರಿಕೆಟ್​ ಮಂಡಳಿ ಈ ನಿರ್ಧಾರ ತೆಗೆದುಕೊಂಡಿದೆ.

ಅಫ್ಘಾನಿಸ್ತಾನ್​-ಜಿಂಬಾಬ್ವೆ
ಅಫ್ಘಾನಿಸ್ತಾನ್​-ಜಿಂಬಾಬ್ವೆ

By

Published : Aug 8, 2020, 6:45 PM IST

ಹರಾರೆ: ಜಿಂಬಾಂಬ್ವೆ ಕ್ರಿಕೆಟ್​ ಮಂಡಳಿ ಅಫ್ಘಾನಿಸ್ತಾನದ ವಿರುದ್ಧ ಇದೇ ತಿಂಗಳು ನಡೆಯಬೇಕಿದ್ದ 5 ಪಂದ್ಯಗಳ ಟಿ20 ಸರಣಿಯನ್ನು ರದ್ದು ಪಡಿಸಿರುವುದಾಗಿ ಶನಿವಾರ ತಿಳಿಸಿದೆ.

ದೇಶದಲ್ಲಿ ಕೊರೊನಾ ವೈರಸ್ ಪ್ರಕರಣಗಳು ದಿಢೀರ್​ ಏರಿಕೆ ಕಾಣುತ್ತಿರುವ ಹಿನ್ನೆಲೆಯಲ್ಲಿ ಇಲ್ಲಿನ ಸರ್ಕಾರ ಮಾರಕ ಕಾಯಿಲೆಯ ಹರಡುವಿಕೆ ತಡೆಯಲು ಕಠಿಣವಾದ ನಿಯಮಗಳನ್ನು ಜಾರಿಗೊಳಿಸುತ್ತಿದೆ. ಈ ನಿಟ್ಟಿನಲ್ಲಿ ಜಿಂಬಾಬ್ವೆ ಕ್ರಿಕೆಟ್​ ಮಂಡಳಿ ಈ ನಿರ್ಧಾರ ತೆಗೆದುಕೊಂಡಿದೆ.

ಅಫ್ಘಾನಿಸ್ತಾನ​-ಜಿಂಬಾಬ್ವೆ

ಇದಕ್ಕೂ ಮುನ್ನ ಭಾರತ ತಂಡವೂ ಕೂಡ ಜಿಂಬಾಬ್ವೆ ವಿರುದ್ಧ ಆಗಸ್ಟ್​ನಲ್ಲಿ ನಡೆಯಬೇಕಿದ್ದ 3 ಪಂದ್ಯಗಳ ಏಕದಿನ ಸರಣಿಯನ್ನು ರದ್ದುಗೊಳಿಸಿತ್ತು. ನಂತರ ಕ್ರಿಕೆಟ್​ ಆಸ್ಟ್ರೇಲಿಯಾವೂ ಜಿಂಬಾಬ್ವೆ ವಿರುದ್ಧ ಆಗಸ್ಟ್​ನಲ್ಲಿ ನಡೆಯಬೇಕಿದ್ದ 3 ಪಂದ್ಯಗಳ ಏಕದಿನ ಸರಣಿಯನ್ನು ರದ್ದು ಮಾಡಿದೆ.

ABOUT THE AUTHOR

...view details