ಕರ್ನಾಟಕ

karnataka

ETV Bharat / sports

ದ್ವಿಶತಕ ಸಿಡಿಸಿದ ಜಾಕ್​ ಕ್ರಾಲಿ: ಚಿಕ್ಕ ವಯಸ್ಸಲ್ಲಿ ಮೇರು ಸಾಧನೆಗೈದ 3ನೇ ಕ್ರಿಕೆಟಿಗ! - ಜಾಕ್​ ಕ್ರಾಲಿ

ಪಾಕ್​ ವಿರುದ್ಧ ನಡೆಯುತ್ತಿರುವ ಅಂತಿಮ ಕ್ರಿಕೆಟ್​​ ಪಂದ್ಯದಲ್ಲಿ ಇಂಗ್ಲೆಂಡ್​​ ತಂಡದ ಯಂಗ್​ ಪ್ಲೇಯರ್​​ ಜಾಕ್​ ಕ್ರಾಲಿ ರನ್​ ಮಳೆ ಹರಿಸಿದ್ದಾರೆ.

Zak Crawley
Zak Crawley

By

Published : Aug 22, 2020, 9:22 PM IST

Updated : Aug 22, 2020, 9:40 PM IST

ಸೌತಾಂಪ್ಟನ್​: ಪಾಕ್​ ವಿರುದ್ಧದ ಮೂರನೇ ಹಾಗೂ ಅಂತಿಮ ಟೆಸ್ಟ್​​ ಪಂದ್ಯದಲ್ಲಿ ಇಂಗ್ಲೆಂಡ್​​ ಬೃಹತ್​ ರನ್​ಗಳಿಸುವತ್ತ ದಾಪುಗಾಲು ಹಾಕಿದೆ. ಇದರ ಮಧ್ಯೆ ಇಂಗ್ಲೆಂಡ್​ನ ಉದಯೋನ್ಮುಖ ಬ್ಯಾಟ್ಸ್​ಮನ್​​ ಜಾಕ್​ ಕ್ರಾಲಿ ದ್ವಿಶತಕ ಸಿಡಿಸಿ ಮಿಂಚಿದ್ದಾರೆ.

ಮೂರನೇ ಕ್ರಮಾಂಕದಲ್ಲಿ ಬ್ಯಾಟ್​ ಮಾಡಲು ಕಣಕ್ಕಿಳಿದ 22 ವರ್ಷದ ಜಾಕ್​ ಕ್ರಾಲಿ ಅದ್ಭುತ ಬ್ಯಾಟಿಂಗ್​ ಪ್ರದರ್ಶನ ನೀಡಿದರು. ಇದರ ಜತೆಗೆ ತಾವು ಸಿಡಿಸಿದ ಶತಕವನ್ನು ದ್ವಿಶತಕವಾಗಿ ಪರಿವರ್ತಿಸಿರುವ ಇಂಗ್ಲೆಂಡ್​ನ 7ನೇ ಬ್ಯಾಟ್ಸ್​ಮನ್​​ ಆಗಿದ್ದಾರೆ. ಹಾಗೆಯೇ ಚಿಕ್ಕ ವಯಸ್ಸಿನಲ್ಲಿ ಡಬಲ್​ ಸೆಂಚುರಿ ಬಾರಿಸಿರುವ ಇಂಗ್ಲೆಂಡ್​ನ ಮೂರನೇ ಪ್ಲೇಯರ್​ ಎಂಬ ಸಾಧನೆ ಮಾಡಿದ್ದಾರೆ.

ಈಗಾಗಲೇ ಇಂಗ್ಲೆಂಡ್​ ತಂಡದ ಎಲ್.ಹಟ್ಟನ್​ 22 ವರ್ಷ 58 ದಿನಕ್ಕೆ ಈ ಸಾಧನೆ ಮಾಡಿದ್ರೆ, ಡೇವಿಡ್​ ಗೋವರ್​​ 22 ವರ್ಷ 102ನೇ ದಿನ ಹಾಗೂ ಕ್ರಾಲಿ 22 ವರ್ಷ 201ನೇ ದಿನಕ್ಕೆ ಈ ರೆಕಾರ್ಡ್​ ಬರೆದಿದ್ದಾರೆ.

ಇದರ ಜತೆಗೆ ಪಾಕ್​ ವಿರುದ್ಧ ದ್ವಿಶತಕ ಸಿಡಿಸಿರುವ ನಾಲ್ಕನೇ ಯುವ​ ಆಟಗಾರ ಎಂಬ ಹೆಗ್ಗಳಿಕೆಗೂ ಇವರು ಪಾತ್ರರಾಗಿದ್ದಾರೆ. ಈಗಾಗಲೇ ಟೆಡ್​​ ಡೆಕ್ಸ್ಟರ್​​, ಕುಕ್​, ಜೋ ರೂಟ್​ ಈ ಸಾಧನೆ ಮಾಡಿದ್ದಾರೆ. 267ರನ್​ಗಳಿಕೆ ಮಾಡಿದ್ದ ವೇಳೆ ಜಾಕ್​ ಕ್ರಾಲಿ ವಿಕೆಟ್​ ಒಪ್ಪಿಸಿದರು.

Last Updated : Aug 22, 2020, 9:40 PM IST

ABOUT THE AUTHOR

...view details