ಕರ್ನಾಟಕ

karnataka

ETV Bharat / sports

ಎದುರಾಳಿಗಳಿಗೆ ಬುಮ್ರಾ ಭಯವೇ ಅವರ ವೈಫಲ್ಯಕ್ಕೆ ಕಾರಣ: ಯಾರ್ಕರ್​ ಕಿಂಗ್​ಗೆ ಜಹೀರ್​ ಸಲಹೆ ಏನು? - ಬುಮ್ರಾಗೆ ಜಹೀರ್​ ಖಾನ್​ ಸಲಹೆ

3 ಪಂದ್ಯಗಳ ಏಕದಿನ ಸರಣಿಯಲ್ಲಿ ಬುಮ್ರಾ 30 ಓವರ್​ ಬೌಲಿಂಗ್​ ಮಾಡಿ ಒಂದು ವಿಕೆಟ್ ಪಡೆಯದೇ ಇದ್ದಿದ್ದೇ ಭಾರತ 31 ವರ್ಷದ ಬಳಿಕ ಸರಣಿ ಕ್ಲೀನ್ ಸ್ವೀಪ್ ಸೋಲು​ ಅನುಭವಿಸಬೇಕಾಯಿತು. ಆದರೆ ಇದರಲ್ಲಿ ಬುಮ್ರಾ ಅವರ ಬೌಲಿಂಗ್​ನ ಸಮಸ್ಯೆಗಿಂತ ಅವರ ಮೇಲೆ ಎದುರಾಳಿ ಬ್ಯಾಟ್ಸ್​ಮನ್​ಗಳು ಇಟ್ಟಿರುವ ಭಯವೇ ಬುಮ್ರಾರಿಗೆ ವಿಕೆಟ್​ ದಕ್ಕದಂತೆ ಮಾಡುತ್ತಿದೆ ಎಂದು ಜಹೀರ್​ ಅಭಿಪ್ರಾಯಪಟ್ಟರು.

Jusprit Bumrah
ಜಸ್ಪ್ರೀತ್​ ಬುಮ್ರಾ

By

Published : Feb 13, 2020, 6:41 PM IST

ಮುಂಬೈ: ನ್ಯೂಜಿಲ್ಯಾಂಡ್​ ವಿರುದ್ಧ ಬುಮ್ರಾ ವಿಕೆಟ್​ ಪಡೆಯದಿರುವುದಕ್ಕೆ ಅವರ ಬೌಲಿಂಗ್ ಕಾರಣವಲ್ಲ, ಬದಲಾಗಿ ಅವರ ಮೇಲಿರುವ ಎದುರಾಳಿ ಬ್ಯಾಟ್ಸ್​ಮನ್​ಗಳಿಗಿರುವ ಭಯವೇ ಕಾರಣ ಎಂದು ಟೀಮ್ ಇಂಡಿಯಾ ಮಾಜಿ ಬೌಲರ್​ ಜಹೀರ್​ ಖಾನ್​ ತಿಳಿಸಿದ್ದಾರೆ.

ಜಸ್ಪ್ರೀತ್​ ಬುಮ್ರಾ

ಕಳೆದ ಎರಡು ವರ್ಷಗಳಿಂದ ಎಲ್ಲಾ ಮಾದರಿಯ ಕ್ರಿಕೆಟ್​ನಲ್ಲಿ ಬುಮ್ರಾ ತಮ್ಮ ಬೌಲಿಂಗ್​ ಮೂಲಕ ಅಪಾಯಕಾರಿ ಎಂದೆನಿಸಿಕೊಂಡಿದ್ದಾರೆ. ಆದರೀಗ ಅದನ್ನು ಉಳಿಸಿಕೊಳ್ಳಲು ಅವರು ಫೈಟ್ ಮಾಡಬೇಕಿದೆ. ಕೆಲವು ಆಟಗಾರರು ಬುಮ್ರಾ ಎದುರು 10 ಓವರ್‌ಗಳಲ್ಲಿ 35 ರನ್‌ ಗಳಿಸಿದರೆ ಸಾಕು, ವಿಕೆಟ್​ ಮಾತ್ರ ನೀಡದೆ, ಉಳಿದ ಬೌಲರ್​ಗಳನ್ನು ಟಾರ್ಗೆಟ್​ ಮಾಡಿ ಸುಲಭವಾಗಿ ರನ್​ಗಳಿಸುವ ತಂತ್ರಕ್ಕೆ ಮುಂದಾಗಿದ್ದಾರೆ.

ಈ ಮಾರ್ಗವನ್ನು ನ್ಯೂಜಿಲ್ಯಾಂಡ್​ ತಂಡದ ಬ್ಯಾಟ್ಸ್​ಮನ್​ಗಳು ಅನುಸರಿಸಿದರು. ಆದ್ದರಿಂದ 30 ಓವರ್​ಗಳಲ್ಲಿ 167 ರನ್ ಬಿಟ್ಟುಕೊಟ್ಟು ವಿಕೆಟ್​ರಹಿತವಾಗಿ ಸರಣಿ ಮುಗಿಸಿಬೇಕಾಯಿತು.

ಬುಮ್ರಾ ಎದರಾಳಿಗಳ ಈ ಯೋಜನೆಯನ್ನು ಅರಿತುಕೊಳ್ಳಬೇಕು. ಮತ್ತೆ ತಮ್ಮ ಆಕ್ರಮಣಕಾರಿ ಬೌಲಿಂಗ್‌ ದಾಳಿ ನಡೆಸಿ ಬ್ಯಾಟ್ಸ್​ಮನ್​ಗಳ ಮೇಲೆ ಒತ್ತಡ ಹೇರಿ ವಿಕೆಟ್​ ಪಡೆಯಲು ಪ್ರಯತ್ನಿಸಬೇಕು. ತಮ್ಮ ಹಳೆಯ ತಂತ್ರಗಳನ್ನು ಕೈಬಿಟ್ಟು ಹೊಸ ತಂತ್ರಗಳನ್ನು ಮೈಗೂಡಿಸಿಕೊಳ್ಳಬೇಕು. ಆಗ ಬ್ಯಾಟ್ಸ್​ಮನ್​ಗಳು ತಪ್ಪೆಸಗಿ ವಿಕೆಟ್​ ಕೈಚೆಲ್ಲುತ್ತಾರೆ ಎಂದು ಜಹೀರ್​ ಬುಮ್ರಾಗೆ ಸಲಹೆ ನೀಡಿದ್ದಾರೆ.

ABOUT THE AUTHOR

...view details