ಕರ್ನಾಟಕ

karnataka

ETV Bharat / sports

3 ಎಸೆತಗಳಲ್ಲಿ 3 ಸಿಕ್ಸರ್​​.. ಓವರ್​​ನ ಎಲ್ಲ ಎಸೆತ ಸಿಕ್ಸರ್​ಗಟ್ಟಲು ಮುಂದಾಗಿದ್ದ ಶ್ರೇಯಸ್​ ಪ್ಲಾನ್​ ಜಸ್ಟ್​​​ ಮಿಸ್​!

ಬಾಂಗ್ಲಾದೇಶದ ವಿರುದ್ಧ ನಡೆದ ಕೊನೆ ಟಿ-20 ಪಂದ್ಯದಲ್ಲಿ ಟೀಂ ಇಂಡಿಯಾ ಅದ್ಭುತ ಪ್ರದರ್ಶನ ನೀಡಿದ್ದು, ಈ ಮೂಲಕ ಸರಣಿ ಕೈವಶ ಮಾಡಿಕೊಂಡಿದೆ.

ಚಹರ್​,ಶ್ರೇಯಸ್​ ಜತೆ ಚಹಾಲ್​ ಮಾತು

By

Published : Nov 11, 2019, 1:46 PM IST

ನಾಗ್ಪುರ್​​: ಬಾಂಗ್ಲಾ ವಿರುದ್ಧ ನಾಗ್ಪುರ್​ನಲ್ಲಿ ನಡೆದ ಕೊನೆ ಟಿ-20 ಪಂದ್ಯದಲ್ಲಿ ಯಂಗ್​ ಇಂಡಿಯಾ ಅದ್ಭುತ ಪ್ರದರ್ಶನ ಮೂಲಕ ಮತ್ತೊಂದು ಸರಣಿ ಕೈವಶ ಮಾಡಿಕೊಂಡಿದೆ. ಬ್ಯಾಟಿಂಗ್​​ನಲ್ಲಿ ಶ್ರೇಯಸ್​ ಅಯ್ಯರ್​,ರಾಹುಲ್​ ಅಬ್ಬರಿಸಿದ್ರೆ, ಬೌಲಿಂಗ್​​ನಲ್ಲಿ ದೀಪಕ್​ ಚಹಾರ್​, ಶಿವಂ ದುಬೆ ಮೂಡಿ ಮಾಡಿದ್ದಾರೆ.

3.2 ಓವರ್​ ಎಸೆದ ದೀಪಕ್​ ಚಹಾರ್​ ಕೇವಲ 7 ರನ್​ ನೀಡಿ ಪ್ರಮುಖ 6 ವಿಕೆಟ್​ ಪಡೆದುಕೊಂಡರೆ, ಬ್ಯಾಟಿಂಗ್​​ನಲ್ಲಿ ಶ್ರೇಯಸ್​ ಅಯ್ಯರ್​​ ಕೇವಲ 33 ಎಸೆತಗಳಲ್ಲಿ 5 ಸಿಕ್ಸರ್​, 3 ಬೌಂಡರಿ ಸೇರಿ 62ರನ್​ಗಳಿಸಿದರು. ಇನ್ನು 15ನೇ ಓವರ್​​ನ ಮೊದಲ ಮೂರು ಎಸೆತ ಸಿಕ್ಸರ್​ ಸಿಡಿಸಿ ಮುಂಚಿರುವ ಅಯ್ಯರ್​ ಒಂದೇ ಓವರ್​ನ ಎಲ್ಲ ಎಸೆತ ಸಿಕ್ಸರ್​ ಗೆರೆ ದಾಟಿಸಲು ನಿರ್ಧರಿಸಿದ್ದ ಪ್ಲಾನ್ ಬಿಚ್ಚಿಟ್ಟಿದ್ದಾರೆ.

  • Chahal TV with Hat-trick heroes Shreyas Iyer and Deepak Chahar https://www.bcci.tv/videos/137119/chahal-tv-with-hat-trick-heroes-shreyas-iyer-and-deepak-chahar via @bcci

ಪಂದ್ಯ ಮುಕ್ತಾಯಗೊಂಡ ಬಳಿಕ ಸ್ಪಿನ್ನರ್​ ಯಜುವೇಂದ್ರ ಚಹಾಲ್​ ಜತೆ ಚಹಾಲ್​ ಟಿವಿಯಲ್ಲಿ ಮಾತನಾಡಿರುವ ಶ್ರೇಯಸ್ ಹಾಗೂ ದೀಪಕ್​ ಚಹಾರ್ ತಮ್ಮ ಮನದಾಳದ ಮಾತು ಹೊರಹಾಕಿದರು. ಈ ವೇಳೆ ಮಾತನಾಡಿರುವ ಚಹರ್​ ಪಂದ್ಯವೊಂದರಲ್ಲಿ ಹ್ಯಾಟ್ರಿಕ್​ ವಿಕೆಟ್​ ಸಾಧನೆ ಮಾಡುತ್ತೇನೆ ಎಂಬ ಅಂದುಕೊಡರಲಿಲ್ಲ. ಆದರೆ ಈ ಪಂದ್ಯದಲ್ಲಿ ಆ ಸಾಧನೆ ಮಾಡಿದ್ದು ನಿಜಕ್ಕೂ ಹೆಮ್ಮೆ ಎಂದು ಅನಿಸುತ್ತಿದೆ ಎಂದರು.

ಇದೇ ವೇಳೆ ಮಾತನಾಡಿರುವ ಶ್ರೇಯಸ್​ 15ನೇ ಓವರ್​ನ ಎಲ್ಲ ಎಸೆತ ಸಿಕ್ಸರ್​ ಗೆರೆ ದಾಟಿಸಲು ನಾನು ನಿರ್ಧರಿಸಿದೆ. ಅದೇ ರೀತಿಯಲ್ಲಿ ಮೊದಲ ಮೂರು ಎಸೆತ ಸಿಕ್ಸರ್​ ಅಟ್ಟಿದ್ದು, ನಾಲ್ಕನೇ ಎಸೆತ ಹಾಕಿದ ಬೌಲರ್​ ಸ್ವಲ್ಪ ಯಾರ್ಕರ್​ ಹಾಕಿದ ಕಾರಣ ಅದನ್ನು ಸಿಕ್ಸರ್​ಗೆ ಅಟ್ಟಲು ಸಾಧ್ಯವಾಗಲಿಲ್ಲ ಎಂದು ಅವರು ಹೇಳಿದರು. ಹಿಂದಿನ ಪಂದ್ಯದಲ್ಲೂ ರೋಹಿತ್​ ಶರ್ಮಾ ಇದೇ ರೀತಿಯ ಪ್ಲಾನ್​ ಹಾಕಿಕೊಂಡಿದ್ದರ ಬಗ್ಗೆ ಹೇಳಿದರು.

ABOUT THE AUTHOR

...view details