ಹೈದರಾಬಾದ್: ಸಾಮಾಜಿಕ ಜಾಲತಾಣದಲ್ಲಿ ಒಂದಿಲ್ಲೋಂದು ವಿಷಯಕ್ಕೆ ಸದ್ದು ಮಾಡುವ ಯಜುವೇಂದ್ರ ಚಹಲ್, ಸಹ ಆಟಗಾರ ರೋಹಿತ್ ಶರ್ಮಾ ಅವರನ್ನು ಮಹಿಳೆಯಂತೆ ಮಾರ್ಪಡು ಮಾಡಿದ ಫೋಟೋವನ್ನು ಟ್ವೀಟ್ ಮಾಡಿದ್ದು, ಸಖತ್ ವೈರಲ್ ಆಗಿದೆ.
ತುಂಬಾ ಮುದ್ದಾಗಿದ್ದೀರ 'ರೋಹಿತಾ ಭಯ್ಯಾ'... ಹಿಟ್ ಮ್ಯಾನ್ ಕಾಲೆಳೆದ ಚಹಾಲ್
ರೋಹಿತ್ ಶರ್ಮಾ ಅವರನ್ನು ಮಹಿಳೆಯಂತೆ ಮಾರ್ಪಡು ಮಾಡಿದ ಫೋಟೋವನ್ನು ಚಹಾಲ್ ಟ್ವೀಟ್ ಮಾಡಿದ್ದು, ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.
ಟೀಂ ಇಂಡಿಯಾ ಆರಂಭಿಕ ರೋಹಿತ್ ಶರ್ಮಾ ಮತ್ತು ಯಜುವೇಂದ್ರ ಚಾಹಲ್ ಆಗಾಗ ಸಾಮಾಜಿಕ ಜಾಲತಾಣದಲ್ಲಿ ಪರಸ್ಪರ ಕಾಲೆಳೆದುಕೊಳ್ಳುತ್ತಿರುತ್ತಾರೆ. ಚಹಾಲ್ ವರ್ಕೌಟ್ ವಿಡಿಯೋ ಒಂದನ್ನು ಅಪ್ ಲೋಡ್ ಮಾಡಿದ್ದ ರೋಹಿತ್, ಮೈದಾನದಲ್ಲಿ ಚಾಹಲ್ ಫೀಲ್ಡಿಂಗ್ ತಾಕತ್ತಿನ ಬಗ್ಗೆ ಪ್ರಾತ್ಯಕ್ಷಿಕೆ ತೋರಿಸಿ ಟ್ರೋಲ್ ಮಾಡಿದ್ದರು.
ಇದೀಗ ಹಿಟ್ ಮ್ಯಾನ್ ಕಾಲೆಳೆದಿರುವ ಚಹಾಲ್, ರೋಹಿತ್ ಶರ್ಮಾ ಅವರ ಚಿತ್ರವನ್ನು ಹುಡುಗಿಯಂತೆ ಮಾರ್ಪಾಡು ಮಾಡಿದ್ದಾರೆ. ಈ ಫೋಟೋವನ್ನು ಟ್ವೀಟ್ ಮಾಡಿದ್ದು 'ತುಂಬಾ ಮುದ್ದಾಗಿ ಕಾಣುತ್ತಿದ್ದೀರ ರೋಹಿತಾ ಶರ್ಮಾ... ಭಯ್ಯಾ' ಎಂದಿದ್ದಾರೆ. ಸದ್ಯ ಜಾಲತಾಣದಲ್ಲಿ ಈ ಪೋಟೋ ವೈರಲ್ ಆಗಿದೆ.