ಮ್ಯಾಂಚೆಸ್ಟರ್:ಐಪಿಎಲ್ನಲ್ಲಿ ಬೌಂಡರಿ, ಸಿಕ್ಸರ್ಗಳ ಸುರಿಮಳೆ ಸುರಿಸಿದ್ದ ಆ್ಯಂಡ್ರೆ ರಸೆಲ್ ತಮ್ಮ ಬಿರುಸಿನ ಆಟವನ್ನು ವಿಶ್ವಕಪ್ನಲ್ಲೂ ಮುಂದುವರಿಸುತ್ತಾರೆಂಬ ಮುನ್ಸೂಚನೆ ನೀಡಿದ್ದರು. ಆದರೆ, ಆ ಗೇಮ್ ಸದ್ಯ ಅವರಿಂದ ಮೂಡಿ ಬರುತ್ತಿಲ್ಲ. ಈ ಮಧ್ಯೆ ಟೀಂ ಇಂಡಿಯಾ ಸ್ಪಿನ್ ಮಾಂತ್ರಿಕ ಯುಜುವೇಂದ್ರ ಚಹಲ್ ಕೂಡ ಇದೇ ವಿಷಯವಾಗಿ ಮಾತನಾಡಿದ್ದಾರೆ.
ವಿಶ್ವಕಪ್ನಲ್ಲಿ ಬರುವ 27ರಂದು(ಗುರುವಾರ) ಭಾರತ-ವೆಸ್ಟ್ ಇಂಡೀಸ್ ತಂಡಗಳು ಮುಖಾಮುಖಿಯಾಗುತ್ತಿವೆ. ಈಗಾಗಲೇ ಸೋಲಿಲ್ಲದ ಸರದಾರನಾಗಿ ಮುನ್ನುಗುತ್ತಿರುವ ಕೊಹ್ಲಿ ಪಡೆ ಮತ್ತೊಂದು ಗೆಲುವಿನ ತವಕದಲ್ಲಿದೆ. ಪಂದ್ಯ ಆರಂಭಗೊಳ್ಳುವುದಕ್ಕೆ ಇನ್ನೂ ಮೂರು ದಿನಗಳ ಬಾಕಿ ಇರುವಾಗಲೇ ಯುಜುವೇಂದ್ರ ಚಹಲ್, ಎದುರಾಳಿ ತಂಡದ ಆಟಗಾರ ಆಂಡ್ರೆ ರಸೆಲ್ಗೆ ಟಾಂಗ್ ನೀಡಿದ್ದು, ಅಬ್ಬರಿಸಲು ಇದು ಐಪಿಎಲ್ ಅಲ್ಲ. ಅವರ ಮೇಲೆ ಸದ್ಯ ತುಂಬಾ ಒತ್ತಡವಿದೆ. ಹೀಗಾಗಿ ಅವರ ವಿಕೆಟ್ ಪಡೆದುಕೊಳ್ಳುವುದು ಹೇಗೆ ಎಂಬುದು ನನಗೆ ಗೊತ್ತಿದೆ ಎಂದಿದ್ದಾರೆ.