ನವದೆಹಲಿ:ಭಾರತ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಭಾರತ ತಂಡದ ಶ್ರೇಷ್ಠ ಕ್ರಿಕೆಟಿಗ ಎಂದು ಟೀಮ್ ಇಂಡಿಯಾ ಲೆಗ್ ಸ್ಪಿನ್ನರ್ ಯಜುವೇಂದ್ರ ಚಹಾಲ್ ತಿಳಿಸಿದ್ದಾರೆ. ಧೋನಿ ತಮಗೆ ಮೈದಾನದ ಹೊರಗೆ ಮತ್ತು ಒಳಗೆ ಸಾಕಷ್ಟು ಬಾರಿ ಸಹಾಯ ಮಾಡಿದ್ದಾರೆ ಎಂದು ಅವರು ಹೇಳಿದ್ದಾರೆ.
ಯಜುವೇಂದ್ರ ಚಹಾಲ್ ಮತ್ತು ಧೋನಿ ಮಹಿ ಭಾಯ್ ಭಾರತ ಸೃಷ್ಠಿಸಿರುವ ಕ್ರಿಕೆಟಿಗರಲ್ಲಿ ಅತ್ಯುತ್ತಮ ಹಾಗೂ ಶ್ರೇಷ್ಠ ಕ್ರಿಕೆಟಿಗ. ಪಂದ್ಯ ನಡೆಯುವ ವೇಳೆ ಅವರು ನನಗೆ ಮತ್ತು ಕುಲ್ದೀಪ್ಗೆ ಸಾಕಷ್ಟು ಸಹಾಯ ಮಾಡಿದ್ದಾರೆ. ಕೆಲವೊಮ್ಮ ಬ್ಯಾಟ್ಸ್ಮನ್ಗಳ ಬೌಂಡರಿ, ಸಿಕ್ಸರ್ ಬಾರಿಸಿದಾಗ ಮಹಿ ಬಾಯ್ ನನ್ನ ಬಳಿ ಹೆಗಲ ಮೆಲೆ ಕೈಯಿಟ್ಟು ‘ ಇವನಿಗೆ ಗೂಗ್ಲಿ ಮಾಡು, ಆಡುವುದಕ್ಕೆ ಆಗುವುದಿಲ್ಲ‘ (isko googly daal, ye nahi khel payega) ಎಂದು ಸಲಹೆ ನೀಡುತ್ತಿದ್ದರು. ಅವರು ನೀಡಿದ ಸಲಹೆ ತಂಡಕ್ಕೆ ಸದಾ ನೆರವಾಗುತ್ತಿತ್ತು ಎಂದು ಚಹಾಲ್ ಸಂದರ್ಶನದಲ್ಲಿ ತಿಳಿಸಿದ್ದಾರೆ.
ದಕ್ಷಿಣ ಆಫ್ರಿಕಾದಲ್ಲಿ ನಾನು ಮೊದಲ ಬಾರಿಗೆ 5 ವಿಕೆಟ್ ತೆಗೆದುಕೊಂಡಿದ್ದೆ. ಆ ಸಂದರ್ಭದಲ್ಲಿ ಜೆ.ಪಿ.ಡುಮಿನಿ ಬ್ಯಾಟಿಂಗ್ ನಡೆಸುತ್ತಿದ್ದರು. ಮಹಿ ಭಾಯ್ ನನ್ನ ಬಳಿ ಬಂದು ‘ ಇವನಿಗೆ ಸ್ಟಂಪ್ ಟು ಸ್ಟಂಪ್ ಬೌಲಿಂಗ್ ಮಾಡು‘ ಎಂದು ಹೇಳಿದ್ದರು. ನಾನು ಹಾಗೆಯೇ ಮಾಡಿದೆ, ಡುಮಿನಿ ಸ್ವೀಪ್ ಮಾಡಲು ಹೋಗಿ ಎಲ್ಬಿಡಬ್ಲ್ಯೂ ಆದರು.
ಇದೇ ರೀತಿ ನ್ಯೂಜಿಲ್ಯಾಂಡ್ನಲ್ಲಿ ಲಾಥಮ್ ನನಗೆ ಬೌಂಡರಿ ಸಿಡಿಸುವ ಮೂಲಕ ನನಗೆ ಬೇಸರ ತಂದಿದ್ದರು. ಆ ವೇಳೆ ಧೋನಿ ನಿನ್ನ ಲೈನ್ ಚೇಂಜ್ ಮಾಡಬೇಡ, ಸ್ಟಂಪ್ ನೇರಕ್ಕೆ ಅವನ ಬಳಿ ಬಾಲ್ ಪಿಚ್ ಮಾಡು ಎಂದರು. ನಂತರದ ಎಸೆತದಲ್ಲಿ ಲಾಥಮ್ ಔಟ್ ಆದರು. ಇಂತಹ ಸಾಕಷ್ಟು ಉದಾಹರಣೆ ಸಿಗುತ್ತವೆ ಎಂದು ಚಹಾಲ್ ನೆನಪಿಸಿಕೊಂಡರು.
ಧೋನಿ 2019ರ ವಿಶ್ವಕಪ್ ಸೆಮಿಫೈನಲ್ ನಂತರ ಕ್ರಿಕೆಟ್ನಿಂದ ದೂರ ಉಳಿದಿದ್ದಾರೆ. ಕೊರೊನಾ ವೈರಸ್ ಭೀತಿಯಿಂದ ಮುಂದೂಡಲ್ಪಟ್ಟಿರುವ ಐಪಿಎಲ್ ಸೆಪ್ಟೆಂಬರ್-ಅಕ್ಟೋಬರ್ನಲ್ಲಿ ಆಯೋಜಿಸುವ ಸಾಧ್ಯತೆಯಿದ್ದು, ಧೋನಿ ಬ್ಯಾಟಿಂಗ್ ನೋಡಲು ಸಾಕಷ್ಟು ಅಭಿಮಾನಿಗಳು ತುದಿಗಾಲಲ್ಲಿ ಕಾಯುತ್ತಿದ್ದಾರೆ.