ನವದೆಹಲಿ: ಭಾರತದ ಸ್ಟಾರ್ ಸ್ಪಿನ್ ಬೌಲರ್ ತಮ್ಮ ಗೆಳತಿ ಧನಶ್ರೀ ವರ್ಮಾ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿರುವ ವಿಚಾರವನ್ನು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
ಗೆಳತಿಯೊಂದಿಗೆ ನಿಶ್ಚಿತಾರ್ಥ: ಸಾಮಾಜಿಕ ಜಾಲತಾಣದಲ್ಲಿ ಚಹಾಲ್ ಸಿಹಿಸುದ್ದಿ - ಚಹಾಲ್ ನಿಶ್ಚಿತಾರ್ತ
ಇತ್ತೀಚಿಗೆ ಟೀಮ್ ಇಂಡಿಯಾ ಆಲ್ರೌಂಡರ್ ತಂದೆಯಾಗುವ ಮೂಲಕ ಕ್ರಿಕೆಟ್ ಅಭಿಮಾನಿಗಳಿಗೆ ಸಿಹಿಸುದ್ದಿ ನೀಡಿದ್ದರು. ಇದೀಗ ಮತ್ತೊಬ್ಬ ಟೀಮ್ ಇಂಡಿಯಾ ಸ್ಟಾರ್ ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾಗುತ್ತಿದ್ದಾರೆ.
ಯಜುವೇಂಧ್ರ ಚಹಾಲ್ ನಿಶ್ಚಿತಾರ್ಥ
ಟ್ವಿಟರ್ನಲ್ಲಿ ತಮ್ಮ ಎಂಗೇಜ್ಮೆಂಟ್ ವಿಷಯವನ್ನು ಹಂಚಿಕೊಂಡಿರುವ ಚಹಾಲ್ ಎರಡು ಮನೆಯವರ ಸಮ್ಮುಖದಲ್ಲಿ ತಾವೂ ನಿಶ್ಚಿತಾರ್ಥ ಮಾಡಿಕೊಂಡಿದ್ದೇವೆ ಎಂದು ಟ್ವೀಟ್ ಮಾಡಿದ್ದಾರೆ.
ಕಳೆದ ಕೆಲವು ದಿನಗಳಿಂದ ಧನಶ್ರೀ ವರ್ಮಾರೊಂದಿಗೆ ಶಾಪಿಂಗ್ ಕಾಂಪ್ಲೆಕ್ಸ್ಗಳಲ್ಲಿ ಸುತ್ತಾಡಿದ್ದ ಫೋಟೋಗಳನ್ನು ಚಹಾಲ್ ತಮ್ಮ ಇನ್ಸ್ಟಾಗ್ರಾಮ್ನ ಸ್ಟೇಟಸ್ಗಳನ್ನು ಹಂಚಿಕೊಂಡಿದ್ದರು. ಧನಶ್ರೀ ಅವರ ಇನ್ಸ್ಟಾಗ್ರಾಮ್ ಬಯೋಡೇಟ ಪ್ರಕಾರ ಅವರು ವೃತ್ತಿಯಲ್ಲಿ ವೈದ್ಯರಾಗಿದ್ದಾರೆ. ಜೊತೆಗೆ ಕೊರಿಯೋಗ್ರಾಫರ್ ಎಂದು ತಿಳಿದುಬಂದಿದೆ.