ಲಂಡನ್:ಇಂಗ್ಲೆಂಡ್ ವೇಗಿ ಜೋಫ್ರಾ ಆರ್ಚರ್ ಎಸೆದ ಬೌನ್ಸರ್ ಆಸ್ಟ್ರೇಲಿಯಾದ ಸ್ಟಿವ್ ಸ್ಮಿತ್ಗೆ ಕುತ್ತಿಗೆಗೆ ಬಿದ್ದು ಗಾಯಗೊಂಡಿದ್ದರು. ಈ ವೇಳೆ ಆರ್ಚರ್ ಸ್ಮಿತ್ರನ್ನು ನೋಡಿ ನಗುತ್ತಾ ನಿಂತಿದ್ದನ್ನು ಪಾಕಿಸ್ತಾನ ಮಾಜಿ ವೇಗಿ ಶೋಯಬ್ ಅಖ್ತರ್ ಖಂಡಿಸಿದ್ದಾರೆ.
ಬೌನ್ಸರ್ ಆಟದ ಒಂದು ಭಾಗ. ಆದರೆ, ಒಬ್ಬ ಬೌಲರ್ ಎಸೆದ ಬೌನ್ಸರ್ ಬ್ಯಾಟ್ಸ್ಮನ್ ತಲೆಗೆ ಅಪ್ಪಳಿಸಿ ಆತ ಕೆಳಗೆ ಬಿದ್ದರೆ, ಮೊದಲು ಬೌಲರ್ ಆತನ ಬಳಿ ಹೋಗಿ ವಿಚಾರಿಸಬೇಕು. ನಾನು ನನ್ನ ಸಮಯದಲ್ಲಿ ಅದನ್ನೇ ಮಾಡುತ್ತಿದ್ದೆ. ಆದರೆ, ನಾನು ನೋಡಿದಂತೆ ಆರ್ಚರ್ ಸ್ಮಿತ್ರಿಂದ ದೂರ ಹೋಗಿ ನಿಂತಿದ್ದರು ಎಂದು ಟ್ವೀಟ್ ಮಾಡಿ ತಮ್ಮ ಆಕ್ರೋಶ ಹೊರಹಾಕಿದ್ದರು.