ಅಬುಧಾಬಿ: ಈಗಾಗಲೇ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ನಿವೃತ್ತಿ ಘೋಷಿಸಿರುವ ಸಿಕ್ಸರ್ ಕಿಂಗ್ ಯುವರಾಜ್ ಸಿಂಗ್ ಮತ್ತೊಮ್ಮೆ ಬ್ಯಾಟ್ ಹಿಡಿದು ಘರ್ಜಿಸಲಿದ್ದಾರೆ ಎಂಬ ಮಾತು ಕೇಳಿಬರುತ್ತಿದೆ.
ಮತ್ತೆ ಮೈದಾನದಲ್ಲಿ ಘರ್ಜಿಸಲಿದ್ದಾರೆ ಸಿಕ್ಸರ್ ಕಿಂಗ್ ಯುವರಾಜ್!.. ಯಾವ ಟೂರ್ನಿ ಗೊತ್ತಾ? - T10 Chairman Shaji Ul Mulk
ಅಬುಧಾಬಿಯಲ್ಲಿ ನಡೆಯಲಿರುವ ಟಿ-10 ಲೀಗ್ನಲ್ಲಿ ಭಾಗವಹಿಸಲು ಯುವರಾಜ್ ಸಿಂಗ್ ಜೊತೆ ಮಾತುಕತೆ ನಡೆದಿದ್ದು, ಇನ್ನೊಂದೆರಡು ದಿನಗಳಲ್ಲಿ ಅವರು ಟೂರ್ನಿಯಲ್ಲಿ ಭಾಗವಹಿಸುವುದರ ಬಗ್ಗೆ ನಿರ್ಧಾರ ತಿಳಿಸಲಿದ್ದಾರೆ ಎಂದು ಲೀಗ್ ಅಧ್ಯಕ್ಷ ಶಾಜಿ ಉಲ್ ಮುಲ್ಕ್ ತಿಳಿಸಿದ್ದಾರೆ.
ಯುವರಾಜ್ ಸಿಂಗ್ ಅಂತಾರಾಷ್ಟ್ರೀಯ ಕ್ರಿಕೆಟ್ನಿಂದ ನಿವೃತ್ತಿಯಾದ ಬಳಿಕ ಕೆನಡಾದಲ್ಲಿ ನಡೆದ ಗ್ಲೋಬಲ್ ಟಿ-20 ಟೂರ್ನಿಯಲ್ಲಿ ಭಾಗವಹಿಸಿದ್ದರು. ಆದರೆ, ಆ ಟೂರ್ನಿಯ ಬಳಿಕ ಯುವರಾಜ್ ಬ್ಯಾಟ್ ಹಿಡಿದಿರಲಿಲ್ಲ. ಆದರೆ, ಮುಂದಿನ ತಿಂಗಳಿಂದ ಅಬುಧಾಬಿಯಲ್ಲಿ ನಡೆಯುವ ಟಿ10 ಲೀಗ್ನಲ್ಲಿ ಆಡಲು ಯುವರಾಜ್ ಸಿಂಗ್ಗೆ ಮತ್ತೊಂದು ಆಫರ್ ಬಂದಿದೆ.
ಅಬುಧಾಬಿಯಲ್ಲಿ ನಡೆಯಲಿರುವ ಟಿ-10 ಲೀಗ್ನಲ್ಲಿ ಭಾಗವಹಿಸಲು ಯುವರಾಜ್ ಜೊತೆ ಮಾತುಕತೆ ನಡೆದಿದ್ದು, ಇನ್ನೊಂದೆರಡು ದಿನಗಳಲ್ಲಿ ಅವರು ಟೂರ್ನಿಯಲ್ಲಿ ಭಾಗವಹಿಸುವುದರ ಬಗ್ಗೆ ನಿರ್ಧಾರ ತಿಳಿಸಲಿದ್ದಾರೆ ಎಂದು ಲೀಗ್ ಅಧ್ಯಕ್ಷ ಶಾಜಿ ಉಲ್ ಮುಲ್ಕ್ ತಿಳಿಸಿದ್ದಾರೆ.
ಈಗಾಗಲೆ ಭಾರತದ ಜಹೀರ್ ಖಾನ್, ಮುನಾಫ್ ಪಟೇಲ್, ಪ್ರವೀಣ್ ಕುಮಾರ್, ಪ್ರವೀಣ್ ತಾಂಬೆ ಸೇರಿ 6-7 ಭಾರತೀಯ ಆಟಗಾರರು ಈಗಾಗಲೇ ಈ ಟೂರ್ನಿಯಲ್ಲಿ ಭಾಗವಹಿಸುತ್ತಿದ್ದಾರೆ. ವಿಂಡೀಸ್ ಆಟಗಾರರು, ಆಸ್ಟ್ರೇಲಿಯಾ ಹಾಗೂ ಪಾಕಿಸ್ತಾನದ ಕೆಲವು ಸ್ಟಾರ್ ಆಟಗಾರರು ಈ ಲೀಗ್ನಲ್ಲಿ ಪಾಲ್ಗೊಳ್ಳಲಿದ್ದಾರೆ.