ಮುಂಬೈ:ಟೀಂ ಇಂಡಿಯಾ ಆಲ್ರೌಂಡರ್ ಯುವರಾಜ್ ಸಿಂಗ್ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ವಿದಾಯ ಘೋಷಿಸಿದ್ದು, 19 ವರ್ಷಗಳ ಚೆಂಡಿನಾಟಕ್ಕೆ ಇಂದು ತೆರೆ ಗುಡ್ಬೈ ಹೇಳಿದ್ದಾರೆ. ಮುಂಬೈನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಿಕ್ಸರ್ಗಳ ಸರದಾರ ತಮ್ಮ ಭವಿಷ್ಯದ ಪ್ಲಾನ್ ಬಗ್ಗೆ ಮಾತನಾಡಿದ್ದಾರೆ.
ಜೀವನದ ಹೆಚ್ಚು ಸಮಯವನ್ನ ಕ್ರಿಕೆಟ್ ಆಡುವುದರಲ್ಲಿ ನಾನು ಕಳೆದಿದ್ದು, ಮುಂದಿನ ದಿನಗಳಲ್ಲಿ ಕ್ಯಾನ್ಸರ್ನಿಂದ ಬಳಲುತ್ತಿರುವ ಹಾಗೂ ಜನಸಾಮಾನ್ಯರ ಶ್ರೇಯಸ್ಸಿಗಾಗಿ ಸಮಯ ಮೀಸಲಿಡುವುದಾಗಿ ಹೇಳಿದ್ದಾರೆ. 2011ರ ವಿಶ್ವಕಪ್ನಲ್ಲಿ ಮಿಂಚಿ ಭಾರತ ಟ್ರೋಫಿ ಗೆಲುವಲ್ಲಿ ಮಹತ್ವದ ಪಾತ್ರ ನಿರ್ವಹಿಸಿದ್ದ ಯುವಿ ತದನಂತರ ಕ್ಯಾನ್ಸರ್ ಚಿಕಿತ್ಸೆಗೊಳಗಾಗಿ ಅದರ ವಿರುದ್ಧ ಬರೋಬ್ಬರಿ ಎರಡು ವರ್ಷಗಳ ಕಾಲ ಹೋರಾಡಿದ್ದಾರೆ.
ಈಗಾಗಲೇ ಕ್ಯಾನ್ಸರ್ನಿಂದ ಬಳಲುತ್ತಿರುವವರಿಗಾಗಿ ’You We Can’ ಎಂಬ ಹೆಸರಿನಲ್ಲಿ ಪೌಂಡೇಶನ್ ನಡೆಸುತ್ತಿರುವ ಯುವಿ, ಮುಂದಿನ ದಿನಗಳಲ್ಲೂ ಅದನ್ನ ಮುಂದುವರೆಸುವುದಾಗಿ ಹೇಳಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಯುವರಾಜ್ ಸಿಂಗ್ ತಂಡದ ಸಹ ಆಟಗಾರರು,ಬಿಸಿಸಿಐ, ಬಾಲ್ಯದ ಕೋಚ್ ಹಾಗೂ ಅಭಿಮಾನಿಗಳಿಗೆ ಧನ್ಯವಾದ ತಿಳಿಸಿದ್ದಾರೆ.
ಕಳೆದ ಕೆಲ ವರ್ಷಗಳಿಂದ ಟೀಂ ಇಂಡಿಯಾದಿಂದ ಹೊರಗುಳಿದಿದ್ದ ಯುವಿ, ಸದ್ಯ ನಡೆಯುತ್ತಿರುವ ವಿಶ್ವಕಪ್ನಲ್ಲಿ ಟೀಂ ಇಂಡಿಯಾ ಪರ ಕಣಕ್ಕಿಳಿಯುವ ವಿಶ್ವಾಸ ಕೂಡ ವ್ಯಕ್ತಪಡಿಸಿದ್ದರು. ಆದರೆ, ಅವರಿಗೆ ಆಯ್ಕೆ ಸಮಿತಿ ಮನ್ನಣೆ ನೀಡಿರಲಿಲ್ಲ. ಇದರ ಮಧ್ಯೆ ಕಳೆದ ಕೆಲ ವಾರಗಳ ಹಿಂದೆ ಮುಕ್ತಾಯಗೊಂಡ ಐಪಿಎಲ್ನಲ್ಲೂ ಮುಂಬೈ ಇಂಡಿಯನ್ಸ್ ಪರ ಕಣಕ್ಕಿಳಿದಿದ್ದ ಯುವಿ ಹೇಳಿಕೊಳ್ಳುವಂತಹ ಪ್ರದರ್ಶನ ಏನು ನೀಡಿರಲಿಲ್ಲ.