ಮುಂಬೈ:ಪ್ರಸಕ್ತ ವರ್ಷ ನಡೆದ ಐಸಿಸಿ ಏಕದಿನ ವಿಶ್ವಕಪ್ನಲ್ಲಿ ಟೀಂ ಇಂಡಿಯಾ ಸೆಮಿಫೈನಲ್ನಲ್ಲಿ ನ್ಯೂಜಿಲ್ಯಾಂಡ್ ವಿರುದ್ಧ ಸೋಲು ಕಾಣುವ ಮೂಲಕ ಟೂರ್ನಿಯಿಂದ ಹೊರಬಿದ್ದ ವಿಚಾರ ಎಲ್ಲರಿಗೂ ಗೊತ್ತಿದೆ. ಈ ಸೋಲಿಗೆ ಮುಖ್ಯ ಕಾರಣ ಏನು ಎಂಬುದನ್ನ ಇದೀಗ ಸಿಕ್ಸರ್ ಕಿಂಗ್ ಯುವರಾಜ್ ಸಿಂಗ್ ತಿಳಿಸಿದ್ದಾರೆ.
ಕೊಹ್ಲಿ ಪಡೆ ವಿಶ್ವಕಪ್ ಕೈಚೆಲ್ಲುವುದಕ್ಕೆ ಮುಖ್ಯ ಕಾರಣವಾಗಿದ್ದು, ನಂಬರ್ 4 ಕ್ರಮಾಂಕದಲ್ಲಿನ ಬ್ಯಾಟಿಂಗ್ ವೈಪಲ್ಯ ಎಂಬ ಮಾಹಿತಿಯನ್ನ ಯುವರಾಜ್ ಸಿಂಗ್ ತಿಳಿಸಿದ್ರು. ಈ ಹಿಂದಿನಿಂದಲೂ ಟೀಂ ಇಂಡಿಯಾ ಈ ಕ್ರಮಾಂಕದಲ್ಲಿ ಬ್ಯಾಟಿಂಗ್ ವೈಫಲ್ಯ ಅನುಭವಿಸುತ್ತಿದೆ. 2019ರ ಐಸಿಸಿ ವಿಶ್ವಕಪ್ನಲ್ಲೂ ಕೆಎಲ್ ರಾಹುಲ್,ರಿಷಭ್ ಪಂತ್,ವಿಜಯ್ ಶಂಕರ್ ಹಾಗೂ ದಿನೇಶ್ ಕಾರ್ತಿಕ್ ಈ ಸ್ಥಾನದಲ್ಲಿ ಬ್ಯಾಟ್ ಬೀಸಿದ್ರೂ ಯಾವೊಬ್ಬ ಪ್ಲೇಯರ್ ಹೇಳಿಕೊಳ್ಳುವಂತಹ ಪ್ರದರ್ಶನ ನೀಡಲಿಲ್ಲ. ಟೀಂ ಇಂಡಿಯಾ ಮ್ಯಾನೇಜ್ಮೆಂಟ್ ಈ ವಿಷಯವನ್ನ ಗಂಭೀರವಾಗಿ ಪರಿಗಣನೆ ಮಾಡಬೇಕು ಎಂದು ಅವರು ತಿಳಿಸಿದ್ದಾರೆ.