ಕರ್ನಾಟಕ

karnataka

ETV Bharat / sports

ಈ ರೀತಿಯ ಪಿಚ್​ನಲ್ಲಿ ಕುಂಬ್ಳೆ 1000, ಭಜ್ಜಿ 800 ವಿಕೆಟ್​ ಪಡೆಯುತ್ತಿದ್ದರು: ಯುವರಾಜ್​ ಸಿಂಗ್​ - ಯುವರಾಜ್ ಸಿಂಗ್​

ಭಾರತಕ್ಕೆ 2 ವಿಶ್ವಕಪ್​ ಗೆದ್ದು ಕೊಟ್ಟ ಆಲ್​ರೌಂಡರ್​ ಯುವಿ ಟ್ವೀಟ್​ಗೆ ಕೆಲವು ಅಭಿಮಾನಿಗಳು ಕಿಡಿಕಾರಿದ್ದು, ನೀವು ಅಶ್ವಿನ್ ಮತ್ತು ಅಕ್ಷರ್ ಪಟೇಲ್ ಅವರ ಶ್ರಮವನ್ನು ಕಡೆಗಣಿಸುತ್ತಿದ್ದೀರಿ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಯುವರಾಜ್ ಸಿಂಗ್
ಯುವರಾಜ್ ಸಿಂಗ್

By

Published : Feb 25, 2021, 10:22 PM IST

ಅಹ್ಮದಾಬಾದ್​: ಇಂಗ್ಲೆಂಡ್​ ವಿರುದ್ಧ ಭಾರತ 3ನೇ ಟೆಸ್ಟ್ ಪಂದ್ಯ ಗೆದ್ದರಿವುದಕ್ಕೆ ಅಭಿನಂದನೆ ಸಲ್ಲಿರುವ ಭಾರತ ತಂಡದ ಮಾಜಿ ಆಲ್​ರೌಂಡರ್​ ಯುವರಾಜ್​ ಸಿಂಗ್​, ಅಹರ್ನಿಶಿ ಟೆಸ್ಟ್​ ಪಂದ್ಯ ಕೇವಲ 2 ದಿನಗಳಲ್ಲಿ ಅಂತ್ಯಗೊಂಡಿದ್ದಕ್ಕೆ ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.

"ಭಾರತ ತಂಡ ಇಂಗ್ಲೆಂಡ್​ ವಿರುದ್ಧ 10 ವಿಕೆಟ್​ಗಳಿಂದ ಗೆಲ್ಲುತ್ತಿದ್ದಂತೆ ಟ್ವೀಟ್ ಮಾಡಿರುವ ಯುವರಾಜ್​ ಸಿಂಗ್, "ಕೇವಲ 2 ದಿನಕ್ಕೆ ಟೆಸ್ಟ್​ ಪಂದ್ಯ ಕೊನೆಗೊಳ್ಳುವುದು ಎಷ್ಟರಮಟ್ಟಿಗೆ ಒಳ್ಳೆಯದೋ ಗೊತ್ತಿಲ್ಲ. ಇಂತಹ ಪಿಚ್​ನಲ್ಲಿ ಅನಿಲ್ ಕುಂಬ್ಳೆ ಮತ್ತು ಹರ್ಭಜನ್​ ಸಿಂಗ್​ 1000 ಮತ್ತು 800 ವಿಕೆಟ್​ ಪಡೆದಿರುತ್ತಿರುತ್ತಿದ್ದರೇನೋ?, ಆದೇನಾದರಾಗಲಿ ಟಸ್ಟ್​ ಪಂದ್ಯ ಗೆದ್ದಿದ್ದಕ್ಕೆ ಭಾರತ ತಂಡಕ್ಕೆ ಅಭಿನಂದನೆಗಳು. ಅಕ್ಷರ್ ಪಟೇಲ್​ ಅದ್ಭುತ ಬೌಲಿಂಗ್​​, ಅಶ್ವಿನ್(400 ವಿಕೆಟ್) ಮತ್ತು ಇಶಾಂತ್​ ಶರ್ಮಾ(100 ಪಂದ್ಯ)ರಿಗೆ ಅಭಿನಂದನೆಗಳು" ಎಂದು ಟ್ವೀಟ್ ಮಾಡಿದ್ದಾರೆ.

ಭಾರತಕ್ಕೆ 2 ವಿಶ್ವಕಪ್​ ಗೆದ್ದು ಕೊಟ್ಟ ಆಲ್​ರೌಂಡರ್​ ಯುವಿ ಟ್ವೀಟ್​ಗೆ ಕೆಲವು ಅಭಿಮಾನಿಗಳು ಕಿಡಿಕಾರಿದ್ದು, ನೀವು ಅಶ್ವಿನ್ ಮತ್ತು ಅಕ್ಷರ್ ಪಟೇಲ್ ಅವರ ಶ್ರಮವನ್ನು ಕಡೆಗಣಿಸುತ್ತಿದ್ದೀರಿ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಇದನ್ನು ಓದಿ: ಡೇ ಅಂಡ್​ ನೈಟ್​ ಟೆಸ್ಟ್​: ಭಾರತಕ್ಕೆ 10 ವಿಕೆಟ್​ಗಳ ಭರ್ಜರಿ ಜಯ

ABOUT THE AUTHOR

...view details