ಫಿರೋಜ್ಪುರ್(ಪಂಜಾಬ್):ಭಾರತಕ್ಕೆ ತನ್ನ ಸ್ಫೋಟಕ ಆಟದ ಮೂಲಕ ಟಿ20 ವಿಶ್ವಕಪ್ ತಂದುಕೊಟ್ಟ ಹಾಗೂ ಕ್ಯಾನ್ಸರ್ ನೋವಿನಲ್ಲೂ ಏಕದಿನ ವಿಶ್ವಕಪ್ ಗೆಲ್ಲಿಸಿಕೊಟ್ಟಿದ್ದ ಯುವರಾಜ್ ಸಿಂಗ್ಗೆ ಗೌರವ ಸೂಚಕವಾಗಿ ಪಂಜಾಬ್ ಕ್ರಿಕೆಟ್ ಸಂಸ್ಥೆ ಪ್ರತಿಮೆ ನಿರ್ಮಿಸಿದೆ.
ಕ್ಯಾನ್ಸರ್ಗೆ ಸವಾಲೆಸೆದು ವಿಶ್ವಕಪ್ ತಂದುಕೊಟ್ಟ ಯುವಿಗೆ ಪ್ರತಿಮೆ ಮೂಲಕ ಗೌರವ - ಪಂಜಾಬ್ ಕ್ರಿಕೆಟ್ ಸಂಸ್ಥೆ
ಭಾರತ ತಂಡಕ್ಕೆ 18ಕ್ಕೂ ಹೆಚ್ಚು ವರ್ಷಗಳ ಕಾಲ ಸೇವೆ ಸಲ್ಲಿಸಿರುವ ಯುವರಾಜ್ ಸಿಂಗ್ ಅವರ ಪ್ರತಿಮೆಯನ್ನು ಅವರ ತವರೂರಾದ ಪಂಜಾಬ್ನ ಫಿರೋಜ್ಪುರ್ ಕ್ರಿಕೆಟ್ ಸ್ಟೇಡಿಯಂನಲ್ಲಿ ನಿರ್ಮಿಸಲಾಗಿದೆ.

Yuvraj Singh
ಭಾರತ ತಂಡಕ್ಕೆ 18 ಕ್ಕೂ ಹೆಚ್ಚು ವರ್ಷಗಳ ಕಾಲ ಸೇವೆ ಸಲ್ಲಿಸಿರುವ ಯುವರಾಜ್ ಸಿಂಗ್ ಅವರ ಪ್ರತಿಮೆಯನ್ನು ತವರೂರಾದ ಪಂಜಾಬ್ನ ಫಿರೋಜ್ಪುರ್ ಕ್ರಿಕೆಟ್ ಸ್ಟೇಡಿಯಂನಲ್ಲಿ ನಿರ್ಮಿಸಲಾಗಿದೆ.
ಯುವರಾಜ್ ಸಿಂಗ್ ಶತಕ ಸಿಡಿಸಿ ಸಂಭ್ರಮಿಸುತ್ತಿರುವ ಸಂದರ್ಭದ ಪ್ರತಿಮೆಯನ್ನು 7 ಲಕ್ಷ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾಗಿದೆ. ಕ್ರಿಕೆಟ್ ಕಲಿಯಲು ಬರುವ ಯುವ ಕ್ರಿಕೆಟಿಗರಿಗೆ ಸ್ಫೂರ್ತಿಯಾಗಲೆಂದು ಈ ಪ್ರತಿಮೆಯನ್ನು ಸ್ಥಾಪಿಸಲಾಗಿದೆ ಎಂದು ಕ್ರೀಡಾಂಗಣದ ಅಧಿಕಾರಿ ತಿಳಿಸಿದ್ದಾರೆ.