ಕರ್ನಾಟಕ

karnataka

ETV Bharat / sports

ಸಿನಿಮಾದಲ್ಲಿ ನಟನೆ, ರೋಲರ್​​​​ ಸ್ಕೇಟಿಂಗ್​​​ ಚಾಂಪಿಯನ್​​... ಮೈದಾನದಲ್ಲಿ ವಾರಿಯರ್ ಈ 'ಪಂಜಾಬ್​​​​ ಕಾ ಪುತ್ತರ್' - ಯುವರಾಜ್ ಸಿಂಗ್ ಹುಟ್ಟುಹಬ್ಬದ ಸುದ್ದಿ

ಟೀಂ ಇಂಡಿಯಾದ ಶ್ರೇಷ್ಠ ಆಲ್​ರೌಂಡರ್ ಯುವರಾಜ್​ ಸಿಂಗ್​ಗೆ ಇಂದು 38ನೇ ವರ್ಷದ ಹುಟ್ಟುಹಬ್ಬದ ಸಂಭ್ರಮ. ಈ ಕುರಿತ ವಿಶೇಷ ವರದಿ ಇಲ್ಲಿದೆ.

Yuvraj Singh Birthday
ಯುವರಾಜ್​ ಸಿಂಗ್​

By

Published : Dec 12, 2019, 9:23 AM IST

ಹೈದರಾಬಾದ್:ಮೈದಾನದಲ್ಲಿ ಅತ್ಯಂತ ಚುರುಕಿನ ಫೀಲ್ಡಿಂಗ್, ಬ್ಯಾಟ್ ಹಿಡಿದು ಬಂದರೆ ಸಿಕ್ಸರ್​​ ಮೇಲೆ ಸಿಕ್ಸರ್, ಪಾರ್ಟ್ ​ಟೈಂ ಬೌಲರ್​ ಆಗಿಯೂ ವಿಕೆಟ್ ಕೀಳುವ ಚಾಕಚಕ್ಯತೆ... ಈ ಆಲ್​ರೌಂಡರ್ ಹೆಸರು ಯುವರಾಜ್ ಸಿಂಗ್. ಕ್ರಿಕೆಟ್ ಪ್ರೇಮಿಗಳ ಪ್ರೀತಿಯ ಯುವಿಗೆ ಇಂದು 38ನೇ ವರ್ಷದ ಹುಟ್ಟುಹಬ್ಬದ ಸಂಭ್ರಮ.

ಟೀಂ ಇಂಡಿಯಾ ಪಾಲಿಗೆ ದೊರೆತ ಪರಿಪೂರ್ಣ ಹಾಗೂ ಪರಿಪಕ್ವ ಆಲ್​ರೌಂಡರ್​​ಗಳ ಸಾಲಿನಲ್ಲಿ ಅಗ್ರಸ್ಥಾನದಲ್ಲಿ ಕಂಡುಬರುವ ಹೆಸರು ಯುವರಾಜ್ ಸಿಂಗ್​. ಯಾವುದೇ ಮೈದಾನವಾದರೂ ನಿರ್ಭೀತಿಯಿಂದ ಬ್ಯಾಟ್ ಬೀಸಬಲ್ಲ ಯುವಿ, ಫೀಲ್ಡಿಂಗ್​​ನಲ್ಲಿ ಟೀಂ ಇಂಡಿಯಾದ ಹಲವು ಹಾಲಿ ಆಟಗಾರರಿಗೆ ಮಾದರಿ.

ಟೀಂ ಇಂಡಿಯಾದಲ್ಲಿ ಅಕ್ಷರಶಃ ಅಬ್ಬರಿಸಿದ್ದ ಯುವರಾಜ್ ಸಿಂಗ್, ಮಿಲಿಯನ್ ಡಾಲರ್ ಟೂರ್ನಿ ಐಪಿಎಲ್​​ನಲ್ಲಿ ಮಾತ್ರ ಅಷ್ಟೊಂದು ಮಿಂಚು ಹರಿಸಿಲ್ಲ. 2019ರ ವಿಶ್ವಕಪ್ ಆಡುವ ಮಹದಾಸೆ ಹೊಂದಿದ್ದ 'ಪಂಜಾಬ್​​ ಕಾ ಪುತ್ತರ್'​​, ಅದು ಈಡೇರದೆ ಎಲ್ಲ ಮಾದರಿಗೂ ವಿದಾಯ ಘೋಷಿಸಿದರು. ಮಹಾಮಾರಿ ಕ್ಯಾನ್ಸರ್​​ ಹಿಮ್ಮೆಟ್ಟಿಸಿ ಮರು ಹುಟ್ಟು ಪಡೆದ ಯುವಿ ನಂತರ ಮೈದಾನದಲ್ಲಿ ಕೊಂಚ ಮಂಕಾಗಿದ್ದರು. ಇದೇ ಕಾರಣದಿಂದ ತಂಡಕ್ಕೂ ಬೇಡವಾದರು.

ಭಾರತದ ಪರ ಯುವರಾಜ್ ಸಿಂಗ್ 304 ಏಕದಿನ(8701 ರನ್), 58 ಟಿ-20(1177 ರನ್) ಹಾಗೂ 40 ಟೆಸ್ಟ್(1900 ರನ್) ಪಂದ್ಯವನ್ನಾಡಿದ್ದಾರೆ. ಭಾರತ ತಂಡಕ್ಕೆ 2011ರ ವಿಶ್ವಕಪ್​ ಗೆಲುವು ಸೇರಿದಂತೆ ಹಲವು ಟೂರ್ನಿಗಳಲ್ಲಿ ಅದ್ಭುತ ಪ್ರದರ್ಶನ ನೀಡಿದ ಯುವಿ ಬಗ್ಗೆ ಒಂದಷ್ಟು ಕುತೂಹಲಕಾರಿ ಅಂಶಗಳು ಇಲ್ಲಿವೆ...

ಯುವರಾಜ್ ಸಿಂಗ್ ಬ್ಯಾಟಿಂಗ್ ಶೈಲಿ
  • ಯುವರಾಜ್ ಸಿಂಗ್ ತಂದೆ ಯೋಗರಾಜ್ ಸಿಂಗ್ ಭಾರತ ಕ್ರಿಕೆಟ್ ತಂಡವನ್ನು ಪ್ರತಿನಿಧಿಸಿದ್ದರು. ವೇಗದ ಬೌಲರ್ ಆಗಿದ್ದ ಯುವಿ ತಂದೆ ಟೀಂ ಇಂಡಿಯಾ ಪರ ಏಕೈಕ ಟೆಸ್ಟ್ ಹಾಗೂ 6 ಏಕದಿನ ಪಂದ್ಯ ಆಡಿದ್ದರು.
  • ಬಾಲ್ಯದ ದಿನದಲ್ಲಿ ಯುವರಾಜ್​ ಕ್ರಿಕೆಟ್​ನಲ್ಲಿ ಅಷ್ಟಾಗಿ ಆಸಕ್ತಿ ಹೊಂದಿರಲಿಲ್ಲ. ರೋಲರ್​ ಸ್ಕೇಟಿಂಗ್​​ನಲ್ಲಿ U-14 ವಿಭಾಗದಲ್ಲಿ ಯುವರಾಜ್ ಭಾರತನ್ನು ಪ್ರತಿನಿಧಿಸಿದ್ದರು. ಆದರೆ ತಂದೆಯ ಒತ್ತಾಸೆಗೆ ಕ್ರಿಕೆಟ್​​ ಬ್ಯಾಟ್ ಹಿಡಿದರು.
    ಸತತ ಆರು ಸಿಕ್ಸರ್ ಸಿಡಿಸಿದ ಕ್ಷಣ
  • ಯುವರಾಜ್ ಸಿಂಗ್ ತಂದೆ ಸ್ವತಃ ಓರ್ವ ಕ್ರಿಕೆಟಿಗರಾಗಿದ್ದರಿಂದ ತಮ್ಮ ಮಗನಿಗೆ ನವಜೋತ್ ಸಿಂಗ್ ಸಿಧು ಬಳಿ ತರಬೇತಿ ಕೊಡಿಸಿದ್ದರು. ಬ್ಯಾಟಿಂಗ್​ನಲ್ಲಿ ಕಳಪೆಯಾಗಿದ್ದ ಯುವಿಯನ್ನು ಬಿಗ್ ಹಿಟ್ಟರ್ ಮಾಡಿದ್ದೇ ಸಿಧು..!
  • U-19 ವಿಭಾಗದಲ್ಲಿ ಕೂಚ್​-ಬೇಹರ್​​ ಟ್ರೋಫಿಯಲ್ಲಿ 358 ರನ್ ಸಿಡಿಸುವ ಮೂಲಕ ಯುವಿ ಮುನ್ನೆಲೆಗೆ ಬಂದಿದ್ದರು.
    ಅದ್ಭುತ ಫೀಲ್ಡರ್ ಯುವರಾಜ್ ಸಿಂಗ್
  • ಕ್ರಿಕೆಟ್ ಇತಿಹಾಸದಲ್ಲಿ ಮೂರು ವಿವಿಧ ವಿಶ್ವಕಪ್ ಗೆದ್ದ ವಿಶೇಷ ದಾಖಲೆ ಯುವಿ ಹೆಸರಲ್ಲಿದೆ. 2000ದಲ್ಲಿ ಐಸಿಸಿ U-19, 2007ರಲ್ಲಿ ಟಿ-20 ವಿಶ್ವಕಪ್​ ಹಾಗೂ 2011ರಲ್ಲಿ ಏಕದಿನ ವಿಶ್ವಕಪ್​​ ಭಾರತ ಗೆದ್ದಾಗ ಯುವರಾಜ್ ಸಿಂಗ್ ಟೀಂ ಇಂಡಿಯಾದಲ್ಲಿ ನಿರ್ಣಾಯಕ ಪಾತ್ರ ವಹಿಸಿದ್ದರು.
  • 2007ರ ಟಿ-20 ವಿಶ್ವಕಪ್​ನಲ್ಲಿ ಇಂಗ್ಲೆಂಡ್ ವಿರುದ್ಧ ಸ್ಟುವರ್ಟ್​ ಬ್ರಾಡ್ ಓವರ್​ನಲ್ಲಿ ಎಲ್ಲ ಆರು ಎಸೆತಗಳನ್ನು ಸಿಕ್ಸರ್​​ಗಟ್ಟಿದ್ದು ಇಂದಿಗೂ ವಿಶ್ವದಾಖಲೆ.
    ಕೂಲ್​ ಕ್ಯಾಪ್ಟನ್​ ಧೋನಿ ಜತೆಗೆ ಯುವರಾಜ್ ಸಿಂಗ್
  • 2011ರ ಏಕದಿನ ವಿಶ್ವಕಪ್​​ನಲ್ಲಿ 300ಕ್ಕೂ ಅಧಿಕ ರನ್ ಹಾಗೂ 15 ವಿಕೆಟ್ ಕಿತ್ತು ಆಲ್​ರೌಂಡ್ ಪ್ರದರ್ಶನ ನೀಡಿದ್ದರು. ಇದರ ಪರಿಣಾಮವೇ ಭಾರತಕ್ಕೆ ವಿಶ್ವಕಪ್ ಗೆಲುವು ಸುಗಮವಾಗಿತ್ತು.
  • 2014 ಐಪಿಎಲ್​​ನಲ್ಲಿ ಆರ್​ಸಿಬಿ ₹14 ಕೋಟಿ ಹಾಗೂ 2015ರಲ್ಲಿ ಡೆಲ್ಲಿ ಡೇರ್​ಡೆವಿಲ್ಸ್ ₹16 ಕೋಟಿಗೆ ಯುವರಾಜ್ ಸಿಂಗ್ ಖರೀದಿ ಮಾಡಿತ್ತು.
    ಗಂಗೂಲಿ ಜೊತೆ ಯುವರಾಜ್ ಸಿಂಗ್

ABOUT THE AUTHOR

...view details