ಕರ್ನಾಟಕ

karnataka

ETV Bharat / sports

ಕ್ಯಾನ್ಸರ್​ನಿಂದ ಬಳಲುತ್ತಿರುವ ಸಂಜಯ್​ ದತ್​ಗೆ ಯುವರಾಜ್​ ಸಿಂಗ್​ ಹೃದಯಸ್ಪರ್ಶಿ ಸಂದೇಶ -

ವರದಿಗಳ ಪ್ರಕಾರ ಸಂಜಯ್​ ದತ್​ ಚಿಕಿತ್ಸೆಗಾಗಿ ಅಮರಿಕಕ್ಕೆ ತೆರಳಬಹುದೆಂದು ನಿರೀಕ್ಷಿಸಲಾಗಿದೆ. ಇದೇ ರೋಗದ ವಿರುದ್ಧ ಹೋರಾಡಿ ಗುಣಮುಖರಾಗಿರುವ ಯುವರಾಜ್​ ಸಿಂಗ್​ ಬಾಲಿವುಡ್​ ನಟನಿಗೆ ಟ್ವಿಟ್ಟರ್​ ಮೂಲಕ ವಿಶೇಷ ಸಂದೇಶ ಕಳುಹಿಸಿದ್ದಾರೆ.

ಯುವರಾಜ್​ ಸಿಂಗ್
ಯುವರಾಜ್​ ಸಿಂಗ್

By

Published : Aug 12, 2020, 4:41 PM IST

ಮುಂಬೈ: 2011ರಲ್ಲಿ ಶ್ವಾಸಕೋಶ ಕ್ಯಾನ್ಸರ್​ ಹೋರಾಟದಲ್ಲಿ ಗೆದ್ದುಬಂದಿದ್ದ ಭಾರತದ ಮಾಜಿ ಆಲ್​ರೌಂಡರ್​ ಯುವರಾಜ್​ ಸಿಂಗ್​ ಅವರು ಬಾಲಿವುಡ್​ ಹಿರಿಯ ನಟ ಸಂಜಯ್​ ದತ್​ಗೆ ಶ್ವಾಸಕೋಶದ ಕ್ಯಾನ್ಸರ್​ ಇರುವುದು ಪತ್ತೆಯಾದ ಬೆನ್ನಲ್ಲೇ ಬೇಗ ಗುಣಮುಖರಾಗುವಂತೆ ಹೃದಯಸ್ಪರ್ಶಿ ಸಂದೇಶ ರವಾನಿಸಿದ್ದಾರೆ.

ಸಂಜಯ್​ ದತ್​

ವರದಿಗಳ ಪ್ರಕಾರ ಸಂಜಯ್​ ದತ್,​ ಚಿಕಿತ್ಸೆಗಾಗಿ ಅಮರಿಕಕ್ಕೆ ತೆರಳಬಹುದೆಂದು ನಿರೀಕ್ಷಿಸಲಾಗಿದೆ. ಇದೇ ರೋಗದ ವಿರುದ್ಧ ಹೋರಾಡಿ ಗುಣಮುಖರಾಗಿರುವ ಯುವರಾಜ್​ ಸಿಂಗ್​ ಅವರು ಬಾಲಿವುಡ್ ಹಿರಿಯ​ ನಟನಿಗೆ ಟ್ವಿಟ್ಟರ್​ ಮೂಲಕ ವಿಶೇಷ ಸಂದೇಶ ಕಳುಹಿಸಿದ್ದಾರೆ.

"ನೀವೊಬ್ಬ ಫೈಟರ್​ ಸಂಜಯ್​ ದತ್​, ಸದಾ ಹೋರಾಡುವ ಗುಣ ಹೊಂದಿದ್ದೀರಿ. ನನಗೆ ಆ ನೋವು ಏನೆಂದು ಚೆನ್ನಾಗಿ ತಿಳಿದಿದೆ. ಆದರೆ ನೀವು ತುಂಬಾ ಬಲಶಾಲಿಯಾಗಿದ್ದೀರಿ, ಅದನ್ನು ನಾವು ಈ ಕಠಿಣ ಸಂದರ್ಭದಲ್ಲಿ ನೋಡ ಬಯಸಿದ್ದೇವೆ. ನೀವು ಬೇಗ ಗುಣಮುಖರಾಗಿ ಎಂದು ನಾನು ಪ್ರಾರ್ಥಿಸುತ್ತೇನೆ" ಎಂದು ಯುವರಾಜ್​ ಟ್ವೀಟ್​ ಮೂಲಕ ತಿಳಿಸಿದ್ದಾರೆ.

61 ವರ್ಷದ ಸಂಜಯ್​ದತ್​ಗೆ ಕ್ಯಾನ್ಸರ್​ ಇರಬಹುದು ಎಂಬ ಸುದ್ದಿ ಹರಡುತ್ತಿದ್ದಂತೆ, ದತ್ ಸಾಮಾಜಿಕ ಜಾಲತಾಣದ ಮೂಲಕ, ತಾನು ಅನಾರೋಗ್ಯದ ಸಮಸ್ಯೆಯಿಂದ ಕೆಲವು ಸಮಯ ತಮ್ಮ ಕೆಲಸದಿಂದ ಬ್ರೇಕ್​ ತೆಗೆದುಕೊಳ್ಳುತ್ತಿರುವುದಾಗಿ ತಿಳಿಸಿದ್ದರು. ಈ ಸಂದರ್ಭದಲ್ಲಿ ತಮ್ಮ ಕುಟುಂಬ ಹಾಗೂ ಸ್ನೇಹಿತರು ನನ್ನ ಜೊತೆಯಿದ್ದಾರೆ. ಸುಖಾಸುಮ್ಮನೆ ಹಬ್ಬುವ ಊಹಾಪೋಹಗಳಿಂದ ಚಿಂತಿಸಬೇಡಿ ಎಂದು ತಮ್ಮ ಅಭಿಮಾನಿಗಳಿಗೆ ಹಾಗೂ ಹಿತೈಷಿಗಳಿಗೆ ಮನವಿ ಮಾಡಿಕೊಂಡಿದ್ದರು.

ABOUT THE AUTHOR

...view details