ಮುಂಬೈ:ಭಾರತ ಕಂಡ ಶ್ರೇಷ್ಠ ಫೀಲ್ಡರ್, ಎರಡು ದಶಕಗಳ ಕಾಲ ಭಾರತದ ಪಾಲಿಗೆ ಕನಸಾಗಿದ್ದ ವಿಶ್ವಕಪ್ ಟ್ರೋಫಿಯನ್ನು ಭಾರತದ ಪಾಲಿಗೆ ದೊರೆಕಿಸಿಕೊಟ್ಟಿದ್ದ ಯುವರಾಜ್ ಸಿಂಗ್ ಇಂದು ಅಂತಾರಾಷ್ಟ್ರೀಯ ಕ್ರಿಕೆಟ್ಗೆ ನಿವೃತ್ತಿ ಘೋಷಿಸಿದ್ದಾರೆ.
ಚಾಣಾಕ್ಷ್ಯ ಫೀಲ್ಡಿಂಗ್, ಸ್ಫೋಟಕ ಬ್ಯಾಟಿಂಗ್ಗೆ ಹೆಸರಾಗಿದ್ದ ಯುವರಾಜ್ ಸಿಂಗ್ ಕ್ಯಾನ್ಸರ್ ಎಂಬ ಮಾರಕ ರೋಗದ ನಡುವೆಯೂ 2011ರ ವಿಶ್ವಕಪ್ನಲ್ಲಿ ಅದ್ಭುತ ಪ್ರದರ್ಶನ ನೀಡಿ ಸರಣಿ ಶ್ರೇಷ್ಠ ಪ್ರಶಸ್ತಿ ಪಡೆದುಕೊಂಡಿದ್ದರು.
ಯುವಿಗೆ ಸಿಗಲಿಲ್ಲ ಬೀಳ್ಕೊಡುಗೆ ಭಾಗ್ಯ:
19 ವರ್ಷಗಳ ಕಾಲ ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಭಾರತವನ್ನು ಪ್ರತಿನಿಧಿಸಿದ ಯುವಿಯನ್ನು ಬಿಸಿಸಿಐ ಕೊನೆಯ ಅಂತಾರಾಷ್ಟ್ರೀಯ ಪಂದ್ಯವಾಡುವ ಅವಕಾಶ ಕಲ್ಲಪಿಸಲಿಲ್ಲ. ದ್ರಾವಿಡ್ ವಿವಿಎಸ್ ಲಕ್ಷ್ಮಣ್, ಗಂಗೂಲಿ, ಸೆಹ್ವಾಗ್ ಹಾಗೂ ಗಂಭೀರ್ರಂತಯೇ ಯುವಿ ಕೂಡ ಬೀಳ್ಕೊಡುಗೆ ಪಂದ್ಯವಾಡದೇ ನಿವೃತ್ತಿ ಘೋಷಿಸಿದ್ದಾರೆ. ಆದರೆ, ಯುವಿ ಬಿಸಿಸಿಐ ಯೋ ಯೋ ಟೆಸ್ಟ್ ಪಾಸ್ ಮಾಡಿದರೆ ಅವಕಾಶ ನೀಡುವುದಾಗಿ ತಿಳಿಸಿತ್ತು ಎಂದು ಯುವಿ ತಿಳಿಸಿದ್ದಾರೆ.
ಐಪಿಎಲ್ನಲ್ಲೂ ಯುವಿಯ ತಿರಸ್ಕಾರ:
ಐಪಿಎಲ್ನಲ್ಲಿ ಯುವರಾಜ್ಸಿಂಗ್ರನ್ನು ಒಂದು ಕೋಟಿಗೆ ಖರೀದಿಸಿದ್ದ ಯುವಿ ಮುಂಬೈ ಇಂಡಿಯನ್ಸ್ ಯುವಿಗೆ ಅವಕಾಶ ನೀಡಿದ್ದು ಮಾತ್ರ ಕೇವಲ 3 ಪಂದ್ಯ ಗಳಲ್ಲಿ. ಫೈನಲ್ನಲ್ಲಾದರೂ ಆಡುವ ಅವಕಾಶ ಪಡೆದು ನಿವೃತ್ತಿ ಘೋಷಿಸಲು ಅವಕಾಶ ನೀಡಬಹುದು ಎಂಬ ನಿರೀಕ್ಷಯಲ್ಲಿದ್ದ ಯುವಿ ಅಭಿಮಾನಿಗಳಿಗೆ ಅಲ್ಲೂ ನಿರಾಸೆಯಾಯಿತು.
2000ರಲ್ಲಿ ಅಂಡರ್ 19 ವಿಶ್ವಕಪ್, 2007ರಲ್ಲಿ ಟಿ20 ವಿಶ್ವಕಪ್, 2011ರಲ್ಲಿ ಏಕದಿನ ವಿಶ್ವಕಪ್ಗಳಲ್ಲಿ ಭಾರತ ವಿಜಯ ಸಾಧಿಸುವುದಕ್ಕೆ ಯುವಿಯ ಪಾತ್ರ ಪ್ರಮುಖವಾಗಿತ್ತು. ಆದರೆ, 19 ವರ್ಷಗಳ ಸೇವೆಗೆ ಬಿಸಿಸಿಐ ವಿದಾಯದ ಪಂದ್ಯಕ್ಕೆ ಅವಕಾಶ ನೀಡದಿರುವುದು ಮಾತ್ರ ಯುವಿ ಅಭಿಮಾನಿಗಳಿಗೆ ಬೇಸರ ಮತ್ತು ಆಕ್ರೋಶ ತಂದಿದೆ.