ಕರ್ನಾಟಕ

karnataka

ETV Bharat / sports

ವಿನಯ್​ ಕುಮಾರ್​ ಬೆನ್ನಲ್ಲೇ ಎಲ್ಲ ಮಾದರಿ ಕ್ರಿಕೆಟ್​ಗೂ ಯುಸೂಫ್ ಪಠಾಣ್ ವಿದಾಯ ಘೋಷಣೆ - ‘ವಿನಯ್​ ಕುಮಾರ್​

ಎಲ್ಲ ಮಾದರಿಯ ಕ್ರಿಕೆಟ್​ಗೂ ನಾನು ವಿದಾಯ ಘೋಷಿಸುತ್ತಿದ್ದೇನೆ. ಇದಕ್ಕಾಗಿ ನನ್ನ ಕುಟುಂಬ, ಸ್ನೇಹಿತರು, ಅಭಿಮಾನಿಗಳು, ಕೋಚ್​​, ತಂಡ ಹಾಗೂ ಇಡೀ ದೇಶಕ್ಕೆ ಧನ್ಯವಾದ ಅರ್ಪಿಸುತ್ತೇನೆ ಎಂದು ಬರೆದುಕೊಂಡಿದ್ದಾರೆ.

yusuf-pathan
ಯೂಸುಫ್ ಪಠಾಣ್

By

Published : Feb 26, 2021, 5:49 PM IST

Updated : Feb 26, 2021, 6:10 PM IST

ಬರೋಡಾ (ಗುಜರಾತ್​):ಭಾರತ ಕ್ರಿಕೆಟ್ ತಂಡದ ವೇಗಿ ವಿನಯ್ ಕುಮಾರ್​ ವಿದಾಯ ಘೋಷಿಸಿದ ಬೆನ್ನಲ್ಲೇ ಇನ್ನೋರ್ವ ಹಿರಿಯ ಆಲ್​​ರೌಂಡರ್ ಯುಸೂಫ್ ಪಠಾಣ್​ ವಿದಾಯ ಘೋಷಿಸಿದ್ದಾರೆ.

ಎಲ್ಲ ಮಾದರಿಯ ಕ್ರಿಕೆಟ್​​ಗಳಿಗೂ ವಿದಾಯ ಘೋಷಿಸಿ ಟ್ವಿಟರ್​​​ನಲ್ಲಿ ಮಾಹಿತಿ ನೀಡಿದ್ದಾರೆ. ಈ ವಿದಾಯ ಕುರಿತು ಸುದೀರ್ಘ ಪತ್ರ ಬರೆದಿರುವ ಯುಸೂಫ್​​​, ಹಳೆಯ ನೆನಪುಗಳ ಮೆಲುಕು ಹಾಕಿದ್ದಾರೆ.

ಮೊದಲ ಬಾರಿಗೆ ಭಾರತ ತಂಡದ ಜೆರ್ಸಿ ತೊಟ್ಟಿದ್ದು, ನನಗೆ ಈಗಲೂ ನೆನಪಿದೆ. ನಾನೊಬ್ಬನೇ ಆ ಬಟ್ಟೆ ತೊಡಲಿಲ್ಲ, ನನ್ನ ಕುಟುಂಬ, ನನ್ನ ಸ್ನೇಹಿತರು, ಕೋಚ್​​​ ಎಲ್ಲರೂ ಸೇರಿ ಬಹುದೊಡ್ಡ ಜವಾಬ್ದಾರಿ ನನ್ನ ಮೇಲೆ ಹೊತ್ತುಕೊಂಡೆ. ನಾನು ಚಿಕ್ಕವನಾಗಿದ್ದಾಗಿನಿಂದಲೂ ನನ್ನ ಸುತ್ತಲೂ ಇದ್ದದ್ದೂ ಕ್ರಿಕೆಟ್​, ನಾನು ಅಂತಾರಾಷ್ಟ್ರೀಯ, ದೇಶೀಯ ಐಪಿಎಲ್​​ ಸಹ ಆಡಿದ್ದೇನೆ ಎಂದಿದ್ದಾರೆ.

ಆದರೆ, ಇಂದು ಸ್ವಲ್ಪ ಬದಲಾವಣೆ ಇದೆ. ಆದರೆ ಇಂದು ಯಾವುದೇ ವಿಶ್ವಕಪ್ ಅಥವಾ ಐಪಿಎಲ್ ಫೈನಲ್ ಇಲ್ಲ ಆದರೂ ಈ ದಿನ ಬಹುಮುಖ್ಯವಾಗಿದೆ. ನನ್ನ ಜೀವನದ ಇನ್ನಿಂಗ್ಸ್ ಕೊನೆಯಾಗಿಸುವ ಕಾಲ ಸನ್ನಿಹಿತವಾಗಿದೆ. ಎಲ್ಲ ಮಾದರಿಯ ಕ್ರಿಕೆಟ್​ಗೂ ನಾನು ವಿದಾಯ ಘೋಷಿಸುತ್ತಿದ್ದೇನೆ. ಇದಕ್ಕಾಗಿ ನನ್ನ ಕುಟುಂಬ, ಸ್ನೇಹಿತರು, ಅಭಿಮಾನಿಗಳು, ಕೋಚ್​​, ತಂಡ ಹಾಗೂ ಇಡೀ ದೇಶಕ್ಕೆ ಧನ್ಯವಾದ ಅರ್ಪಿಸುತ್ತೇನೆ ಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ:ಎಲ್ಲಾ ಮಾದರಿಯ ಕ್ರಿಕೆಟ್​ಗೆ ವಿದಾಯ ಹೇಳಿದ 'ದಾವಣಗೆರೆ ಎಕ್ಸ್​ಪ್ರೆಸ್​' ವಿನಯ್​ ಕುಮಾರ್​!

Last Updated : Feb 26, 2021, 6:10 PM IST

ABOUT THE AUTHOR

...view details