ಲಂಡನ್:ಭಾರತ ತಂಡದ ಯಶಸ್ವಿ ನಾಯಕ ಧೋನಿ 38ನೇ ವಸಂತಕ್ಕೆ ಕಾಲಿಟ್ಟಿದ್ದು, ಪ್ರಸ್ತುತ ಭಾರತ ತಂಡದ ನಾಯಕ ಕೊಹ್ಲಿ ಕೂಲ್ ಕ್ಯಾಪ್ಟನ್ಗೆ ತಡವಾಗಿ ಶುಭ ಕೋರಿದ್ದಾರೆ.
ಧೋನಿ ಕುರಿತು ತಮ್ಮ ಟ್ವಿಟರ್ ಖಾತೆಯಲ್ಲಿ"ಮಹಿ ಭಾಯ್ ಜನುದಿನದ ಶುಭಾಶಯಗಳು, ಕೆಲವೇ ಜನರು ಮಾತ್ರ ಗೌರವ ಹಾಗೂ ನಂಬಿಕೆಯನ್ನು ಅರ್ಥ ಮಾಡಿಕೊಂಡಿರುತ್ತಾರೆ. ಹಲವು ವರ್ಷಗಳಿಂದ ನಿಮ್ಮ ಸ್ನೇಹವನ್ನು ಕಾಪಾಡಿಕೊಂಡಿರುವುದಕ್ಕೆ ನನಗೆ ತುಂಬಾ ಸಂತೋಷವಾಗಿದೆ. ನೀವು ನಮ್ಮೆಲ್ಲರಿಗೂ ದೊಡ್ಡ ಅಣ್ಣನಾಗಿದ್ದೀರಾ ಹಾಗೂ ನಾನು ಯಾವಾಗಲೂ ಹೇಳುವಂತೆ ಎಂದಿಂದಿಗೂ ನೀವೇ ನನ್ನ ನಾಯಕ" ಎಂದು ಬರೆದುಕೊಂಡಿದ್ದಾರೆ.
ಇಂದು ಭಾರತ ತಂಡದ ಆಧಾರ ಸ್ಥಂಭವಾಗಿರುವ ಕೊಹ್ಲಿ ಹಾಗೂ ರೋಹಿತ್ ಶರ್ಮಾರಿಗೆ ಸೂಕ್ತ ಕ್ರಮಾಂಕವನ್ನು ಧೋನಿ ತಮ್ಮ ನಾಯಕತ್ವದಲ್ಲಿ ನೀಡಿದ್ದರಿಂದ ಕಳೆದ 5 ವರ್ಷಗಳಲ್ಲಿ ಇವರಿಬ್ಬರು ದಾಖಲೆಗಳ ಮೇಲೆ ದಾಖಲೆ ಬರೆದರು. ಇದನ್ನು ಸ್ವತಃ ರೋಹಿತ್-ಕೊಹ್ಲಿ ಹಲವು ಸಂದರ್ಶನಗಳಲ್ಲಿ ಹೇಳಿಕೊಂಡಿದ್ದಾರೆ.
ಇದೀಗ ಧೋನಿ ವೃತ್ತಿ ಜೀವನದ ಅಂತ್ಯದಲ್ಲಿದ್ದು, ಇವರಿಬ್ಬರು ಧೋನಿಯ ಕಠಿಣ ಪರಿಸ್ಥಿಯಲ್ಲೂ ಜೊತೆಯಾಗಿ ನಿಲ್ಲುತ್ತಿದ್ದಾರೆ. ಇದೀಗ ವಿಶ್ವಕಪ್ನಲ್ಲಿ ಸೆಮಿಫೈನಲ್ ತಲುಪಿದ್ದು, ಸಚಿನ್ಗೆ ಧೋನಿ ವಿಶ್ವಕಪ್ ಉಡುಗೊರೆ ನೀಡಿದ ಹಾಗೆ ಈ ಯುವ ಜೋಡಿ ಧೋನಿಗೆ 2019ರ ವಿಶ್ವಕಪ್ ಉಡುಗೊರೆ ನೀಡುವಂತಾಗಲಿ ಎಂಬುದು ಭಾರತೀಯ ಕ್ರಿಕೆಟ್ ಅಭಿಮಾನಿಗಳ ಆಶಯವಾಗಿದೆ.