ದೆಹಲಿ : ಎಂ.ಎಸ್. ಧೋನಿ ಚಾಂಪಿಯನ್ ಕ್ರಿಕೆಟಿಗ, ಆತನನ್ನು ಕಡೆಗಣಿಸಬಾರದು. ಈಗಿನ ವಿರಾಮದಲ್ಲಿ ಆತ್ಮಾವಲೋಕನ ಮಾಡಿಕೊಂಡು ಮತ್ತೆ ಭಾರತ ತಂಡಕ್ಕೆ ಮರಳುತ್ತಾರೆ ಎಂದು ಆಸ್ಟ್ರೇಲಿಯಾದ ಮಾಜಿ ಬ್ಯಾಟ್ಸ್‌ಮನ್ ಮೈಕೆಲ್ ಹಸ್ಸಿ ಹೇಳಿದರು.
ನಾನು ಭಾರತೀಯ ತಂಡದ ಆಯ್ಕೆಗಾರನಲ್ಲ, ಆದರೆ ಒಬ್ಬ ಚಾಂಪಿಯನ್ ಆಟಗಾರನನ್ನು ಕಡೆಗಣಿಸಬಾರದು ಎಂಬುದು ನನ್ನ ಅಭಿಪ್ರಾಯ ಎಂದರು. ಎಂಎಸ್‌ಡಿ ಆಟಗಾರನಾಗಿ ಮತ್ತು ನಾಯಕರಾಗಿ ದೇಶಕ್ಕೆ ತುಂಬಾ ಕೊಡುಗೆ ನೀಡಿದ್ದಾರೆ. ಹಾಗಾಗಿ ಅವರನ್ನು ಕೊನೆಯ ಹಂತದಲ್ಲಿ ಸರಿಯಾಗಿ ನಡೆಸಿಕೊಳ್ಳಬೇಕೆಂದು ಹಸ್ಸಿ ಒತ್ತಿ ಹೇಳಿದ್ದಾರೆ.
ಧೋನಿಯವರು ತನ್ನನ್ನು ತಾನು ಸದಾ ಫಿಟ್ ಆಗಿರಿಸಿಕೊಳ್ಳಲು ಇಚ್ಚಿಸುತ್ತಾರೆ ಮತ್ತು ಅವರ ಈ ವಿಶ್ರಾಂತಿ ಭೌತಿಕವಾಗಿ ವೃದ್ದಿಸಿಕೊಳ್ಳಲು ಸಹಕಾರಿಯಾಗಿದೆ. ಅವರು ತುಂಬಾ ಅನುಭವವಿಕ ಆಟಗಾರ ಎಂದು ಹಸ್ಸಿ ತಿಳಿಸಿದ್ದಾರೆ.