ಕರ್ನಾಟಕ

karnataka

ETV Bharat / sports

ಕ್ರಿಕೆಟ್​​ನಲ್ಲಿ ಮತ್ತೆ ದಾದಾಗಿರಿ: ಇಡೀ ಭಾರತ, ಬೆಂಗಾಲ್​​​ ಹೆಮ್ಮೆ ಪಡುವಂತೆ ಮಾಡಿದ್ದೀರಿ ಎಂದ ಬ್ಯಾನರ್ಜಿ! - ಮಾಜಿ ಕ್ಯಾಪ್ಟನ್​​ ಸೌರವ್​ ಗಂಗೂಲಿ

ಭಾರತೀಯ ಕ್ರಿಕೆಟ್​ ಮಂಡಳಿ ಅಧ್ಯಕ್ಷರಾಗಿ ಬೆಂಗಾಲ್​ ಹುಲಿ ಸೌರವ್​ ಗಂಗೂಲಿ ಆಯ್ಕೆ ಖಚಿತವಾಗುತ್ತಿದ್ದಂತೆ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅಭಿನಂದನೆ ಸಲ್ಲಿಸಿ ಟ್ವೀಟ್​ ಮಾಡಿದ್ದಾರೆ.

ಗಂಗೂಲಿ, ಮಮತಾ ಬ್ಯಾನರ್ಜಿ

By

Published : Oct 14, 2019, 4:48 PM IST

ಕೋಲ್ಕತ್ತಾ:ಭಾರತೀಯ ಕ್ರಿಕೆಟ್​​ನಲ್ಲಿ ಮತ್ತೆ ದಾದಾಗಿರಿ ಶುರುವಾಗಲಿದ್ದು, ಭಾರತೀಯ ಕ್ರಿಕೆಟ್​ ಮಂಡಳಿ(ಬಿಸಿಸಿಐ)ಅಧ್ಯಕ್ಷರಾಗಿ ಪಶ್ಚಿಮ ಬಂಗಾಳದ ಹುಲಿ, ಟೀಂ ಇಂಡಿಯಾ ಮಾಜಿ ಕ್ಯಾಪ್ಟನ್​​ ಸೌರವ್​ ಗಂಗೂಲಿ ಆಯ್ಕೆಯಾಗುವುದು ಬಹುತೇಕ ಖಚಿತವಾಗಿದೆ.

ಬಿಸಿಸಿಐ ಅಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಲು ಇಂದು ಕೊನೆಯ ದಿನವಾಗಿತ್ತು. ಬೇರೆ ಯಾರು ನಾಮಪತ್ರ ಸಲ್ಲಿಕೆ ಮಾಡದ ಕಾರಣ ಅವಿರೋಧವಾಗಿ ಸೌರವ್ ಗಂಗೂಲಿ ಅಧ್ಯಕ್ಷರಾಗಿ ಆಯ್ಕೆಯಾಗುವುದು ಬಹುತೇಕ ಖಚಿತವಾಗಿದೆ. ಇದೇ ವಿಷಯಕ್ಕೆ ಸಂಬಂಧಿಸಿದಂತೆ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರಿಗೆ ಅಭಿನಂದನೆ ಸಲ್ಲಿಕೆ ಮಾಡಿ ಟ್ವೀಟ್​ ಮಾಡಿದ್ದಾರೆ.

ಬಿಸಿಸಿಐ ಅಧ್ಯಕ್ಷರಾಗಿ ಸರ್ವಾನುಮತದಿಂದ ಆಯ್ಕೆಯಾಗುತ್ತಿರುವುದಕ್ಕೆ ಹೃದಯಪೂರಕ ಅಭಿನಂದನೆಗಳು. ಬಿಸಿಸಿಐ ಅಧ್ಯಕ್ಷರಾಗಿ ಕೆಲಸ ನಿರ್ವಹಿಸುವ ನಿಮ್ಮ ಅವಧಿಗೆ ನನ್ನ ಅಭಿನಂದನೆ. ಇಡೀ ಭಾರತ ಮತ್ತು ಬೆಂಗಾಲ್​ ಹೆಮ್ಮೆ ಪಡುವಂತಹ ಕೆಲಸ ನೀವು ಮಾಡಿದ್ದೀರಿ. ಕೋಲ್ಕತ್ತಾ ಕ್ರಿಕೆಟ್​ನ ಅಧ್ಯಕ್ಷರಾಗಿ ಅದ್ಭುತ ಕೆಲಸ ಮಾಡಿದ್ದೀರಿ. ಮುಂದಿನ ಹೊಸ ಇನ್ನಿಂಗ್ಸ್​ನಲ್ಲೂ ಇದೇ ರೀತಿ ಕಾರ್ಯನಿರ್ವಹಿಸಿ ಎಂದಿದ್ದಾರೆ.

ಇನ್ನು ಕೇಂದ್ರ ಗೃಹ ಮಂತ್ರಿ ಅಮಿತ್​ ಶಾ ಅವರ ಪುತ್ರ ಜಯ್​ ಶಾ ಬಿಸಿಸಿಐನ ನೂತನ ಕಾರ್ಯದರ್ಶಿಯಾಗಿದ್ದು, ಅರುಣ್​ ಧುಮಲ್​ ಖಜಾಂಚಿಯಾಗಲಿದ್ದಾರೆ.

ABOUT THE AUTHOR

...view details