ದುಬೈ: 13ನೇ ಐಪಿಎಲ್ಗೆ ದಿನಗಣನೆ ಆರಂಭವಾಗಿದೆ. ಈ ನಿಟ್ಟಿನಲ್ಲಿ ಆಟಗಾರರಿಗೆ ತರಬೇತಿ ಶಿಬಿರ ಆರಂಭಿಸುವ ಮುನ್ನವೇ ಸಿಎಸ್ಕೆ ಆಧಾರಸ್ಥಂಭವಾಗಿದ್ದ ಸುರೇಶ್ ರೈನಾ ವೈಯಕ್ತಿಕ ಕಾರಣಗಳಿಂದ ಆವೃತ್ತಿಯಿಂದಲೇ ಹೊರಬಿದ್ದಿದ್ದಾರೆ.
'ಮಿಸ್ಟರ್ ಐಪಿಎಲ್' ಖ್ಯಾತಿಯ ರೈನಾ ತಂಡದಿಂದ ಹೊರಬರುತ್ತಿದ್ದಂತೆ ಸಿಎಸ್ಕೆ ತಂಡದ ಆರಂಭಿಕ ಬ್ಯಾಟ್ಸ್ಮನ್ ಶೇನ್ ವಾಟ್ಸನ್ ಭಾವುಕ ಸಂದೇಶ ರವಾನಿಸಿದ್ದಾರೆ.
" ನಾನು ಬೆಳಿಗ್ಗೆ ಏಳುತ್ತಿದ್ದಂತೆ ಸುರೇಶ್ ರೈನಾ ವೈಯಕ್ತಿಕ ಕಾರಣಗಳಿಗಾಗಿ ಭಾರತಕ್ಕೆ ಹಿಂತಿರುಗುತ್ತಿದ್ದಾರೆ ಎಂಬ ಕೆಟ್ಟ ಸುದ್ದಿಯನ್ನು ಕೇಳಿದ್ದೇನೆ. ಗೆಳೆಯ, ನೀವು ಸರಿಯಾದ ನಿರ್ಧಾರ ತೆಗೆದುಕೊಂಡಿದ್ದೀರೆಂದು ನಾನು ಭಾವಿಸುತ್ತೇನೆ ”ಎಂದು ವ್ಯಾಟ್ಸನ್ ಬರೆದುಕೊಂಡಿದ್ದಾರೆ.
"ನೀವು ಸಿಎಸ್ಕೆ ತಂಡವನ್ನು ತುಂಬಾ ಮಿಸ್ ಮಾಡಿಕೊಳ್ಳಲಿದ್ದೀರಿ. ಆರಂಭದಿಂದಲೂ ತಂಡದ ಜೊತೆಯಾಗಿರುವ ನೀವು ತಂಡದ ಹೃದಯ ಬಡಿತ. ನೀವು ಹೆಮ್ಮೆಪಡುವ ಎಲ್ಲ ಕೆಲಸವನ್ನು ನಾವು ಮಾಡಲಿದ್ದೇವೆ" ಎಂದು ಅವರು ಇನ್ಸ್ಟಾಗ್ರಾಮ್ ವಿಡಿಯೋದಲ್ಲಿ ತಿಳಿಸಿದ್ದಾರೆ.