ಕರ್ನಾಟಕ

karnataka

ETV Bharat / sports

ಟೆಸ್ಟ್​ ಚಾಂಪಿಯನ್​ಶಿಪ್ ಫೈನಲ್ ಲಾರ್ಡ್ಸ್​ ಬದಲು ಸೌತಾಂಪ್ಟನ್​ನಲ್ಲಿ ನಡೆಯಲಿದೆ: ಗಂಗೂಲಿ - ಸೌರವ್​ ಗಂಗೂಲಿ

ಮೂಲ ವೇಳಾಪಟ್ಟಿಯ ಪ್ರಕಾರ, ಐಸಿಸಿ ಟೆಸ್ಟ್ ಚಾಂಪಿಯನ್​ಶಿಪ್​ ಫೈನಲ್ ಪಂದ್ಯ ಲಾರ್ಡ್ಸ್​ನಲ್ಲಿ ನಡೆಯಬೇಕಿತ್ತು. ಆದರೆ ಐತಿಹಾಸಿಕ ಸ್ಟೇಡಿಯಂನಿಂದ ಸೌತಾಂಪ್ಟನ್​ಗೆ ಚೊಚ್ಚಲ ಟೆಸ್ಟ್​ ಚಾಂಪಿಯನ್​ಶಿಪ್​ ಫೈನಲ್ ಪಂದ್ಯ ಶಿಫ್ಟ್‌ ಆಗಿದೆ ಎಂದು ಗಂಗೂಲಿ ತಿಳಿಸಿದ್ದಾರೆ.

ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​ ಫೈನಲ್ ಪಂದ್ಯ
ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​ ಫೈನಲ್ ಪಂದ್ಯ

By

Published : Mar 8, 2021, 6:34 PM IST

Updated : Mar 10, 2021, 4:41 PM IST

ಮುಂಬೈ: ಭಾರತ ಮತ್ತು ನ್ಯೂಜಿಲ್ಯಾಂಡ್​ ನಡುವಿನ ಅಂತಿಮ ಹಣಾಹಣಿ ಲಾರ್ಡ್ಸ್ ಮೈದಾನದ ಬದಲು ಸೌತಾಂಪ್ಟನ್​ನ ಏಜಸ್​ ಬೌಲ್​ನಲ್ಲಿ ಜೂನ್ 18ರಿಂದ 22ರ ವರೆಗೆ ನಡೆಯಲಿದೆ ಎಂದು ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಖಚಿತಪಡಿಸಿದ್ದಾರೆ.

ಸೌತಾಂಪ್ಟನ್​ನಲ್ಲಿ ಭಾರತ ಮತ್ತು ನ್ಯೂಜಿಲ್ಯಾಂಡ್​ ನಡುವಿನ ಐಸಿಸಿ ಟೆಸ್ಟ್​ ಚಾಂಪಿಯನ್​ಶಿಪ್​ ಫೈನಲ್​ ಪಂದ್ಯಕ್ಕೆ ಹಾಜರಾಗುವುದಕ್ಕಾಗಿ ಎದುರು ನೋಡುತ್ತಿದ್ದೇನೆ ಎಂದು ಅವರು ವೆಬ್​ಸೈಟ್​ಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದರು.

ಫೈನಲ್ ಪಂದ್ಯವನ್ನು ಸೌತಾಂಪ್ಟನ್​ನಲ್ಲಿ​ ನಡೆಸುವುದು ತುಂಬಾ ದಿನಗಳ ಹಿಂದಿನ ನಿರ್ಧಾರವಾಗಿದೆ. ಕೋವಿಡ್​ 19 ಪರಿಸ್ಥಿತಿಯಲ್ಲಿ ಅಲ್ಲಿನ ಹೋಟೆಲ್​ಗಳು ಮುಚ್ಚಿದ್ದವು. ಈ ಕಾರಣದಿಂದ ಪಂದ್ಯವನ್ನು ಅಲ್ಲಿ ನಡೆಸಲು ತೀರ್ಮಾನಿಸಲಾಗಿದೆ. ಈಗಾಗಲೇ ಸೌತಾಂಪ್ಟನ್​ನಲ್ಲಿ ಇಂಗ್ಲೆಂಡ್​ನ ಹಲವು ದೇಶಿ ಟೂರ್ನಮೆಂಟ್​ಗಳನ್ನು ನಡೆಸಲಾಗಿದೆ. ಅಲ್ಲದೇ ಬಯೋಬಬಲ್ ನಿರ್ಮಿಸಲು ಈ ಸ್ಥಳ ತುಂಬಾ ಅನುಕೂಲ ಎಂದು ಗಂಗೂಲಿ ವಿವರಿಸಿದರು.

ಇದನ್ನೂ ಓದಿ: ಎಲ್ಲಾ 3 ಮಾದರಿ ಕ್ರಿಕೆಟ್​ ಟೂರ್ನಿಗಳಲ್ಲಿ ಫೈನಲ್ ತಲುಪಿದ ಏಕೈಕ ತಂಡ ಭಾರತ

Last Updated : Mar 10, 2021, 4:41 PM IST

ABOUT THE AUTHOR

...view details