ಕರ್ನಾಟಕ

karnataka

ETV Bharat / sports

ಗೆಲುವಿನ ಉತ್ಸಾಹದಲ್ಲಿ ಗಾಯಗೊಂಡ ವೃದ್ಧಿಮಾನ್​... ಸಾಹಾ ಬದಲಿಗೆ ಮೈದಾನಕ್ಕಿಳಿದ ರಿಷಭ್​! - ರಿಷಭ್​ ಪಂತ್​​

ದಕ್ಷಿಣ ಆಫ್ರಿಕಾ ವಿರುದ್ಧ ನಡೆಯುತ್ತಿರುವ ಫೈನಲ್​ ಟೆಸ್ಟ್​ ಪಂದ್ಯದ ಮೂರನೇ ದಿನ ವಿಕೆಟ್​ ಕೀಪರ್​ ವೃದ್ಧಿಮಾನ್​ ಸಾಹಾ ಗಾಯಗೊಂಡಿದ್ದಾರೆ.

ವೃದ್ಧಿಮಾನ್​ ಸಾಹಾ ಗಾಯ

By

Published : Oct 21, 2019, 4:57 PM IST

ರಾಂಚಿ:ದಕ್ಷಿಣ ಆಫ್ರಿಕಾ ವಿರುದ್ಧ ನಡೆಯುತ್ತಿರುವ ಫೈನಲ್ ಟೆಸ್ಟ್​​ ಪಂದ್ಯದ ಮೂರನೇ ದಿನವಾದ ಇಂದು ಕೊಹ್ಲಿ ಪಡೆ ಹರಿಣಗಳ ಮೇಲೆ ಸಖತ್​ ಸವಾರಿ ಮಾಡಿದ್ದು, ಕೊನೆ ಟೆಸ್ಟ್​​ ಪಂದ್ಯದಲ್ಲೂ ಗೆಲುವಿನ ನಗೆ ಬೀರುವುದು ಬಹುತೇಕ ಖಚಿತವಾಗಿದೆ.

ಇದರ ಮಧ್ಯೆ ಅದ್ಭುತವಾಗಿ ವಿಕೆಟ್​ ಕೀಪಿಂಗ್​ ಮಾಡುತ್ತಿದ್ದ ವೃದ್ಧಿಮಾನ್​ ಸಾಹಾ ಗಾಯಗೊಂಡು ಮೈದಾನದಿಂದ ಹೊರನಡೆದಿದ್ದು, ಮತ್ತೋರ್ವ ವಿಕೆಟ್​ ಕೀಪರ್​ ರಿಷಭ್​ ಪಂತ್ ಅವರ ಸ್ಥಾನ ಅಲಂಕರಿಸಿದ್ದಾರೆ. ​ ಕೊನೆ ಟೆಸ್ಟ್​ ಪಂದ್ಯದ ಎರಡನೇ ಇನ್ನಿಂಗ್ಸ್​​ನಲ್ಲೂ ಅದ್ಭುತವಾಗಿ ಎರಡು ಕ್ಯಾಚ್​ ಹಿಡಿದಿರುವ ಸಾಹಾ ಎಲ್ಲರ ಮೆಚ್ಚುಗೆಗೆ ಕಾರಣವಾಗಿದ್ದರು. ಆದರೆ ಪಂದ್ಯದ ಮಧ್ಯದಲ್ಲೇ ಕೈಬೆರಳಿಗೆ ಗಾಯಗೊಂಡ ಕಾರಣ ಮೈದಾನದಿಂದ ಹೊರ ನಡೆಯಬೇಕಾಯಿತು.

ವೃದ್ಧಿಮಾನ್​ ಸಾಹಾ ಗಾಯ

ಮೂರು ಟೆಸ್ಟ್​​ ಪಂದ್ಯಗಳಲ್ಲಿ ಅದ್ಭುತವಾಗಿ ವಿಕೆಟ್​ ಕೀಪಿಂಗ್​ ಮಾಡಿರುವ ವೃದ್ಧಿಮಾನ್​​ ಸಾಹಾ ಈಗಾಗಲೇ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದು, ಓರ್ವ ಅದ್ಭುತ ವಿಕೆಟ್​ ಕೀಪರ್​ ಎಂಬ ಗೌರವಕ್ಕೆ ಪಾತ್ರರಾಗಿದ್ದಾರೆ. ಕಳೆದ ಕೆಲ ದಿನಗಳ ಹಿಂದೆ ಗಾಯಕ್ಕೊಳಗಾಗಿದ್ದ ವೃದ್ಧಿಮಾನ್​ ಇದೀಗ ತಂಡಕ್ಕೆ ಕಮ್​ಬ್ಯಾಕ್​ ಮಾಡಿದ್ದು, ಇದೀಗ ಮತ್ತೆ ಗಾಯಗೊಂಡಿದ್ದಾರೆ.

ABOUT THE AUTHOR

...view details