ಕರ್ನಾಟಕ

karnataka

ETV Bharat / sports

ಇಂಡಿಯಾ vs​ ಇಂಗ್ಲೆಂಡ್ 4ನೇ ಟೆಸ್ಟ್‌​: ಹೊಸ ದಾಖಲೆ ಬರೆದ ಹಿಟ್​ಮ್ಯಾನ್ ರೋಹಿತ್​!

ಐಸಿಸಿ ಟೆಸ್ಟ್​ ಚಾಂಪಿಯನ್​ಶಿಪ್​ನಲ್ಲಿ ಟೀಂ ಇಂಡಿಯಾ ಆರಂಭಿಕ ರೋಹಿತ್​ ಶರ್ಮಾ ಹೊಸದೊಂದು ದಾಖಲೆ ನಿರ್ಮಾಣ ಮಾಡಿದ್ದಾರೆ.

Rohit Sharma
Rohit Sharma

By

Published : Mar 5, 2021, 3:49 PM IST

ಅಹಮದಾಬಾದ್​:ಇಂಗ್ಲೆಂಡ್​ ವಿರುದ್ಧದ 4ನೇ ಟೆಸ್ಟ್​ ಪಂದ್ಯದಲ್ಲಿ 49 ರನ್​ಗಳಿಕೆ ಮಾಡಿ ವಿಕೆಟ್​ ಒಪ್ಪಿಸಿರುವ ಟೀಂ ಇಂಡಿಯಾ ಆರಂಭಿಕ ಆಟಗಾರ ರೋಹಿತ್ ಶರ್ಮಾ ಹೊಸದೊಂದು ದಾಖಲೆ ನಿರ್ಮಾಣ ಮಾಡಿದ್ದು, ಈ ರೆಕಾರ್ಡ್​ ಬರೆದ ಮೊದಲ ಏಷ್ಯಾ ಪ್ಲೇಯರ್ ಎಂಬ ಶ್ರೇಯಕ್ಕೆ ಪಾತ್ರರಾಗಿದ್ದಾರೆ.

ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​ನಲ್ಲಿ ಅತಿ ವೇಗವಾಗಿ 1000 ರನ್​ಗಳಿಕೆ ಮಾಡಿರುವ ಏಷ್ಯಾದ ಮೊದಲ ಓಪನರ್​ ಎಂಬ ಗೌರವ ಇದೀಗ ರೋಹಿತ್ ಪಾಲಾಗಿದೆ. ಟೆಸ್ಟ್​ ಕ್ರಿಕೆಟ್​ನ 17 ಇನ್ನಿಂಗ್ಸ್​​ಗಳಿಂದ ಅವರು ಈ ಸಾಧನೆ ನಿರ್ಮಾಣ ಮಾಡಿದ್ದಾರೆ. ಜತೆಗೆ ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​ನಲ್ಲಿ ಅತಿ ಹೆಚ್ಚು ರನ್​ಗಳಿಕೆ ಮಾಡಿರುವ ಆರಂಭಿಕ ಪ್ಲೇಯರ್​ ಆಗಿ ಹೊರಹೊಮ್ಮಿದ್ದಾರೆ.

ಇದನ್ನೂ ಓದಿ: ಟಿ-20 ಕ್ರಿಕೆಟ್​ನಲ್ಲಿ ಸಿಕ್ಸರ್‌ಗಳ ಸೆಂಚುರಿ: ಕಾಂಗರೂ ಪರ ಈ ದಾಖಲೆ ಬರೆದ ಮೊದಲ ಪ್ಲೇಯರ್​

ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​​ನಲ್ಲಿ ಆಸ್ಟ್ರೇಲಿಯಾದ ಆರಂಭಿಕ ಡೇವಿಡ್​ ವಾರ್ನರ್​​ 948 ರನ್​ ಹಾಗೂ ದಕ್ಷಿಣ ಆಫ್ರಿಕಾದ ಡೀನ್ ಎಲ್ಗರ್​​ 848 ರನ್​ಗಳಿಕೆ ಮಾಡಿ ನಂತರದ ಸ್ಥಾನದಲ್ಲಿದ್ದಾರೆ. ವಿಶೇಷವೆಂದರೆ, ಟೀಂ ಇಂಡಿಯಾ ಟೆಸ್ಟ್​ ಉಪನಾಯಕ ರಹಾನೆ 1068 ರನ್​ಗಳಿಕೆ ಮಾಡಿರುವ ಪ್ಲೇಯರ್​ ಆಗಿದ್ದು, ಉಳಿದಂತೆ ಭಾರತದ ಯಾವುದೇ ಪ್ಲೇಯರ್​ ಸಾವಿರ ರನ್​ ಗಡಿ ದಾಟಿಲ್ಲ.

ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​ನಲ್ಲಿ ಅತಿ ಹೆಚ್ಚು ರನ್​ಗಳಿಕೆ

  • ಲಾಬುಶೇನ್ 1675 ರನ್​
  • ಸ್ಟೀವ್​ ಸ್ಮಿತ್​​ 1341 ರನ್​
  • ಜೊ ರೂಟ್​ 1630 ರನ್​
  • ಬೆನ್​ ಸ್ಟೋಕ್ಸ್​​​ 1301 ರನ್​ ಗಳಿಕೆ

ಈ ಹಿಂದೆ ಕನ್ನಡಿಗ ಮಯಾಂಕ್ ಅಗರವಾಲ್​ 19 ಇನ್ನಿಂಗ್ಸ್​ಗಳಲ್ಲಿ ಸಾಧನೆ ಮಾಡಿದ್ದರು. ಜತೆಗೆ ವಿನೋದ್ ಕಾಂಬ್ಳೆ 14 ಇನ್ನಿಂಗ್ಸ್​​​ ಹಾಗೂ ಚೇತೇಶ್ವರ್​ ಪೂಜಾರಾ 18 ಇನ್ನಿಂಗ್ಸ್​​ಗಳಲ್ಲಿ ಈ ರೆಕಾರ್ಡ್​​​ ನಿರ್ಮಾಣ ಮಾಡಿದ್ದಾರೆ.

ABOUT THE AUTHOR

...view details