ಬರ್ಮಿಂಗ್ಹ್ಯಾಮ್: ಎರಡನೇ ಸೆಮಿಫೈನಲ್ನಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆರಂಭಿಸಿರುವ ಆಸ್ಟ್ರೇಲಿಯಾ ತಂಡ 14 ರನ್ಗಳಿಸುವಷ್ಟರಲ್ಲಿ ಪ್ರಮುಖ 3 ವಿಕೆಟ್ ಕಳೆದುಕೊಂಡು ಆಘಾತ ಅನುಭವಿಸಿದೆ.
ವಾರ್ನರ್,ಫಿಂಚ್,ಹ್ಯಾಂಡ್ಸ್ಕಂಬ್ ಔಟ್... ಆಸೀಸ್ಗೆ ಆರಂಭಿಕ ಆಘಾತ ನೀಡಿದ ವೋಕ್ಸ್-ಅರ್ಚರ್ - ವೋಕ್ಸ್
ಐಸಿಸಿ ವಿಶ್ವಕಪ್ನ ಎರಡನೇ ಸೆಮಿಫೈನಲ್ನಲ್ಲಿ ಇಂಗ್ಲೆಂಡ್ ದಾಳಿಗೆ ಸಿಲುಕಿದ ಆಸೀಸ್ ಕಳಪೆ ಆರಂಭ ಪಡೆದಿದೆ.

World semi-final
ಆಸ್ಟ್ರೇಲಿಯಾ ಪರ ಆರಂಭಿಕರಾಗಿ ಕಣಕ್ಕಿಳಿದಿದ್ದ ಆ್ಯರೋನ್ ಫಿಂಚ್ ಶೂನ್ಯಕ್ಕೆ ಜೋಫ್ರಾ ಆರ್ಚರ್ಗೆ ವಿಕೆಟ್ ಒಪ್ಪಿಸಿದರೆ, ವಾರ್ನರ್ 9 ರನ್ ಹಾಗೂ ಇಂದೇ ವಿಶ್ವಕಪ್ನ ಚೊಚ್ಚಲ ಪಂದ್ಯವಾಡಿದ ಪೀಟರ್ ಹ್ಯಾಂಡ್ಸ್ಕಂಬ್ 4 ರನ್ಗಳಿಸಿ ಕ್ರಿಸ್ ವೋಕ್ಸ್ಗೆ ವಿಕೆಟ್ ಒಪ್ಪಿಸಿದರು.
ಸೆಮಿಫೈನಲ್ ಪಂದ್ಯದಲ್ಲಿ ಕಿವೀಸ್ ವಿರುದ್ಧ ಭಾರತೀಯರು ಅನುಭವಿಸಿದ ಬ್ಯಾಟಿಂಗ್ ವೈಫಲ್ಯವನ್ನೇ ಇಂದು ಅಸೀಸ್ ಕೂಡ ಅನುಭವಿಸಿದ್ದು, ಬಲಿಷ್ಠ ಬ್ಯಾಟಿಂಗ್ ಪಡೆಯನ್ನು ಹೊಂದಿರುವ ಇಂಗ್ಲೆಂಡ್ಗೆ ಎಷ್ಟು ಮೊತ್ತವನ್ನು ಟಾರ್ಗೆಟ್ ನೀಡಲಿದೆ ಎಂದು ಕಾದುನೋಡಬೇಕಿದೆ.