ಮುಂಬೈ:ಎರಡನೇ ಅವಧಿಗೆ ಟೀಂ ಇಂಡಿಯಾದ ಮುಖ್ಯ ತರಭೇತುದಾರನಾಗಿ ಪುನರಾಯ್ಕೆಯಾಗಿರುವ ರವಿ ಶಾಸ್ತ್ರಿ ವಿಶ್ವಕಪ್ ಸೋಲಿನ ಬಗ್ಗೆ ಮಾತನಾಡಿದ್ದಾರೆ.
ಟೀಂ ಇಂಡಿಯಾ ಕೋಚ್ ಆಗಿ ರವಿ ಶಾಸ್ತ್ರಿ ಪುನರಾಯ್ಕೆ... ಕೊಹ್ಲಿ ಫೇವರಿಟ್ ಗುರುವಿಗೆ ಮಣೆ
ಮುಂಬೈ:ಎರಡನೇ ಅವಧಿಗೆ ಟೀಂ ಇಂಡಿಯಾದ ಮುಖ್ಯ ತರಭೇತುದಾರನಾಗಿ ಪುನರಾಯ್ಕೆಯಾಗಿರುವ ರವಿ ಶಾಸ್ತ್ರಿ ವಿಶ್ವಕಪ್ ಸೋಲಿನ ಬಗ್ಗೆ ಮಾತನಾಡಿದ್ದಾರೆ.
ಟೀಂ ಇಂಡಿಯಾ ಕೋಚ್ ಆಗಿ ರವಿ ಶಾಸ್ತ್ರಿ ಪುನರಾಯ್ಕೆ... ಕೊಹ್ಲಿ ಫೇವರಿಟ್ ಗುರುವಿಗೆ ಮಣೆ
ಕೋಟ್ಯಂತರ ಕ್ರೀಡಾಭಿಮಾನಿಗಳ ನಿರಾಸೆ ಕಾರಣವಾದ ಫಲಿತಾಂಶದ ಬಗ್ಗೆ ಕೋಚ್ ರವಿ ಶಾಸ್ತ್ರಿ ಮಾತನಾಡಿದ್ದು, ಕಳೆದ ಎರಡು ವರ್ಷದ ಕೋಚಿಂಗ್ ಸೇವೆಯಲ್ಲಿ ಅತಿ ದೊಡ್ಡ ನಿರಾಸೆ ಎಂದು ಬಣ್ಣಿಸಿದ್ದಾರೆ.
ಆರಂಭದ 30 ನಿಮಿಷ ಎಲ್ಲವನ್ನೂ ಬದಲಿಸಿಬಿಟ್ಟಿತ್ತು. ಟೂರ್ನಿಯುದ್ದಕ್ಕೂ ನಾವು ಅದ್ಭುತ ಪ್ರದರ್ಶನವನ್ನೇ ನೀಡಿದ್ದೆವು. ಎಲ್ಲ ತಂಡಗಳಗಿಂತಲೂ ಹೆಚ್ಚಿನ ಪಂದ್ಯವನ್ನು ಗೆದ್ದಿದ್ದೆವು. ಆದರೆ ಒಂದು ಕೆಟ್ಟ ದಿನ, ಕೆಟ್ಟ ಆಟ ಎಲ್ಲವನ್ನೂ ನಮ್ಮಿಂದ ದೂರವಾಗಿಸಿತು ಎಂದು ರವಿ ಶಾಸ್ತ್ರಿ ಹತಾಶೆಯಿಂದ ನುಡಿದಿದ್ದಾರೆ.
ಈ ಬಾರಿಯ ವಿಶ್ವಕಪ್ ಟೂರ್ನಿಯ ನೆಚ್ಚಿನ ತಂಡವಾಗಿದ್ದ ವಿರಾಟ್ ಪಡೆ ಎಲ್ಲರ ಭರವಸೆಯನ್ನು ಉಳಿಸಿಕೊಂಡು ಏಕೈಕ ಸೋಲಿನೊಂದಿಗೆ ಸೆಮೀಸ್ ಪ್ರವೇಶಿಸಿತ್ತು. ಆದರೆ ಸೆಮೀಸ್ನಲ್ಲಿ ಮುಗ್ಗರಿಸಿ ಅಭಿಯಾನ ಅಂತ್ಯಗೊಳಿಸಿತ್ತು.