ಹೈದರಾಬಾದ್ :ಬಾಲ್ ಟ್ಯಾಂಪರಿಂಗ್ ವಿವಾದಕ್ಕೆ ಸಿಲುಕಿ 1 ವರ್ಷನಿಷೇಧಕ್ಕೊಳಗಾಗಿದ್ದ ಆಸ್ಟ್ರೇಲಿಯಾದ ಸ್ಫೋಟಕ ಬ್ಯಾಟ್ಸ್ಮನ್ ಡೇವಿಡ್ ವಾರ್ನರ್ ಐಪಿಎಲ್ನಲ್ಲಿ ಮಿಂಚಲು ಸಜ್ಜಾಗಿದ್ದಾರೆ. ಸನ್ರೈಸರ್ಸ್ ಹೈದರಾಬಾದ್ ಪರ ಬ್ಯಾಟ್ ಬೀಸಲು ವಾರ್ನರ್ ಕಾತರರಾಗಿದ್ದಾರೆ.
ನನ್ ಕಣ್ಮುಂದಿದೆ ಸನ್ರೈಸರ್ಸ್, ವಿಶ್ವಕಪ್ ಅಲ್ಲ.. - ಡೇವಿಡ್ ವಾರ್ನರ್.. - ಹೈದರಾಬಾದ್
ವಿಶ್ವಕಪ್ಗಾಗಿ ಆಡಬೇಕು ಎಂಬುದು ನನ್ನ ಮನಸ್ಸಿನಲ್ಲಿ ಇಲ್ಲ. ಬದಲಿಗೆ ಸನ್ರೈಸರ್ಸ್ ಹೈದರಾಬಾದ್ ಪರ ಉತ್ತಮ ಪ್ರದರ್ಶನ ನೀಡಬೇಕು ಎಂಬ ಬಯಕೆ ಹೊಂದಿದ್ದೇನೆ ಎಂದು ವಾರ್ನರ್ ತಿಳಿಸಿದ್ದಾರೆ
ವಿಶ್ವಕಪ್‌ನಲ್ಲಿ ಆಡಲು ಆಯ್ಕೆಗೊಳ್ಳುತ್ತೇನೋ ಇಲ್ವೋ ಎಂಬುದು ಈಗ ನನ್ನ ಮನಸ್ಸಿನಲ್ಲಿಲ್ಲ. ಸನ್ರೈಸರ್ಸ್ ಹೈದರಾಬಾದ್ ಪರ ಅದ್ಭುತ ಪ್ರದರ್ಶನ ನೀಡುವುದೇ ನನ್ನ ಮುಂದಿರುವ ಗುರಿ ಎಂದು ವಾರ್ನರ್ ತಿಳಿಸಿದ್ದಾರೆ. ವೈಯಕ್ತಿಕವಾಗಿ ಹೇಳಬೇಕಾದರೆ ಈಗ ವಿಶ್ವಕಪ್ ನನ್ನ ಗಮನದಲ್ಲಿಲ್ಲ. ತಂಡಕ್ಕೆ ಆಯ್ಕೆಗೊಳ್ಳಲು ನಾನು ಕಾಯಬೇಕಾಗಿದೆ. ಆದರೆ, ಸನ್ರೈಸರ್ಸ್ ಪರ ಉತ್ತಮ ಪ್ರದರ್ಶನ ನೀಡಿ, ನನ್ನ ತಂಡಕ್ಕೆ ರನ್ ಕಾಣಿಕೆ ನೀಡುವುದೇ ನನ್ನ ಜವಾಬ್ದಾರಿ ಎಂದಿದ್ದಾರೆ ವಾರ್ನರ್.
ಸನ್ರೈಸರ್ಸ್ ತಂಡ ಸೇರಿರುವುದು ನನಗೆ ಉತ್ತಮ ಅವಕಾಶ. ಮೆಂಟರ್ ವಿವಿಎಸ್ ಲಕ್ಷ್ಮಣ್ ಉತ್ತಮ ಸಲಹೆ ನೀಡಿದ್ದಾರೆ. ತಂಡದ ಸಹದ್ಯೋಗಿಗಳು ಹಾಗೂ ತಂಡದ ಕ್ರೀಡಾಭಿಮಾನಿಗಳ ಸಪೋರ್ಟ್ ನನಗೆ ಲಭ್ಯವಾಗುತ್ತಿದೆ ಎಂದು ತಿಳಿಸಿದ್ದಾರೆ. ಐಪಿಎಲ್ 12ನೇ ಆವೃತ್ತಿಯಲ್ಲಿ ಹೈದರಾಬಾದ್ ತಂಡ ಈಡನ್ ಗಾರ್ಡನ್ ಮೈದಾನದಲ್ಲಿ ಮಾರ್ಚ್ 24ರಂದು ಕೋಲ್ಕತಾ ನೈಟ್ ರೈಡರ್ಸ್ ಜತೆ ಫೈಟ್ ನಡೆಸಲಿದೆ. ಆ ಮೂಲಕ ಈ ಆವೃತ್ತಿಯಲ್ಲಿ ತನ್ನ ಅಭಿಯಾನ ನಡೆಸಲಿದೆ.