ಕರ್ನಾಟಕ

karnataka

ETV Bharat / sports

ದುರ್ಬಲ ಅಫ್ಘಾನ್​ ವಿರುದ್ಧ ಕೊಹ್ಲಿ ಪಡೆ ಫೈಟ್​​... ವಿಶ್ವಕಪ್​​ನಲ್ಲಿ ಇನ್ನೊಂದು ಸುಲಭ ಜಯ!? - ವಿಶ್ವಕಪ್​​

ವಿಶ್ವಕಪ್​​ನಲ್ಲಿ ಗೆಲುವಿನ ನಾಗಾಲೋಟ ಮುಂದುವರಿಸಿರುವ ಟೀಂ ಇಂಡಿಯಾ ಇಂದಿನ ಪಂದ್ಯದಲ್ಲಿ ಸುಲಭ ಗೆಲುವು ದಾಖಲು ಮಾಡುವ ನೀರಿಕ್ಷೆಯಲ್ಲಿದೆ.

ಟೀಂ ಇಂಡಿಯಾ

By

Published : Jun 22, 2019, 4:56 AM IST

ಸೌತಂಪ್ಟನ್​:ಐಸಿಸಿ ಏಕದಿನ ವಿಶ್ವಕಪ್​​ನಲ್ಲಿ ಸೋಲಿಲ್ಲದ ಸರದಾರನಾಗಿ ಮುನ್ನುಗುತ್ತಿರುವ ಟೀಂ ಇಂಡಿಯಾ ಇಂದಿನ ಪಂದ್ಯದಲ್ಲಿ ಮತ್ತೊಂದು ಸುಲಭ ಗೆಲುವು ದಾಖಲು ಮಾಡುವ ನೀರಿಕ್ಷೆಯಲ್ಲಿದೆ.

ಈಗಾಗಲೇ ಆಸ್ಟ್ರೇಲಿಯಾ,ದಕ್ಷಿಣ ಆಫ್ರಿಕಾ ಹಾಗೂ ಪಾಕಿಸ್ತಾನ ತಂಡಗಳ ವಿರುದ್ಧ ಗೆಲುವು ದಾಖಲು ಮಾಡಿರುವ ಕೊಹ್ಲಿ ಪಡೆ ಇಂದು ಸೋತು ಸುಣ್ಣವಾಗಿರುವ ಆಫ್ಘಾನಿಸ್ತಾನದ ವಿರುದ್ಧ ಸೆಣಸಾಟ ನಡೆಸಲಿದೆ. ತಾನಾಡಿರುವ ಐದು ಪಂದ್ಯಗಳಲ್ಲಿ ಸೋಲು ಕಂಡಿರುವ ಆಫ್ಘಾನಿಸ್ತಾನ ತಂಡ ಈಗಾಗಲೇ ಟೂರ್ನಿಯಿಂದ ಹೊರಬಿದ್ದಿದೆ.

ತಂಡದ ಸ್ಪಿನ್​ರಗಳಾದ ರಶೀದ್​ ಖಾನ್​, ಮೊಹಮದ್​ ನಬಿ ಹಾಗೂ ಮುಜೀಬ್​ ರೆಹಮಾನ್​ ಹೇಳಿಕೊಳ್ಳುವಂತಹ ಬೌಲಿಂಗ್​ ಪ್ರದರ್ಶನ ನೀಡುತ್ತಿಲ್ಲ. ಜತೆಗೆ ಬ್ಯಾಟಿಂಗ್​ ವಿಭಾಗ ಕೂಡ ಮುಗ್ಗರಿಸಿದ್ದು, ತಂಡದ ನಿದ್ರೆ ಕೆಡಿಸಿದೆ.

ಟೀ ಇಂಡಿಯಾ ತಂಡದ ಎಡಗೈ ಬ್ಯಾಟ್ಸ್​ಮನ್ ಶಿಖರ್​ ಧವನ್​ ಗಾಯಗೊಂಡು ತಂಡದಿಂದ ಹೊರಬಿದ್ದಾರೆ. ನೆಟ್​​ನಲ್ಲಿ ಪ್ರ್ಯಾಕ್ಟೀಸ್​ ಮಾಡುತ್ತಿದ್ದ ವೇಳೆ ಗಾಯಗೊಂಡಿರುವ ವಿಜಯ್​ ಶಂಕರ್​ ಅಲಭ್ಯತೆ ಬಗ್ಗೆ ಅನುಮಾನವಿದೆ. ಹೀಗಾಗಿ ಇಂದಿನ ಪಂದ್ಯದಲ್ಲಿ ರಿಷಭ್​ ಪಂತ್​ ಸ್ಥಾನ ಪಡೆದುಕೊಳ್ಳುವ ಸಾಧ್ಯತೆ ಇದೆ. ಇದರ ಮಧ್ಯೆ ದಿನೇಶ್​ ಕಾರ್ತಿಕ್ ಅಥವಾ ರವೀಂದ್ರ ಜಡೇಜಾ ಆಡುವ 11ರ ಬಳಗದಲ್ಲಿ ಕಾಣಿಸಿಕೊಂಡರು ಆಶ್ಚರ್ಯ ಪಡೆಬೇಕಾಗಿಲ್ಲ.

ಇನ್ನು ಗಾಯಗೊಂಡು ವಿಶ್ರಾಂತಿ ಪಡೆದುಕೊಳ್ಳುತ್ತಿರುವ ಭುವನೇಶ್ವರ್​ ಬದಲಿಗೆ ಮೊಹಮ್ಮದ್​ ಶಮಿ, ಜಸ್​ಪ್ರೀತ್​ ಬುಮ್ರಾ ಜತೆ ಬೌಲಿಂಗ್​ ವಿಭಾಗದ ಜವಾಬ್ದಾರಿ ಹೊತ್ತುಕೊಳ್ಳಲಿದ್ದಾರೆ. ಇತ್ತ ಸ್ಪಿನ್​ ವಿಭಾಗದಲ್ಲಿ ಯಜುವೇಂದ್ರ ಚಹಲ್​ ಹಾಗೂ ಕುಲ್ದೀಪ್​ ಯಾದವ್​ ತಮ್ಮ ಜವಾಬ್ದಾರಿ ನಿಭಾಯಿಸಲಿದ್ದಾರೆ.

ABOUT THE AUTHOR

...view details