ಮುಂಬೈ: ವಿಶ್ವಕಪ್ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಇಂಗ್ಲೆಂಡ್ ಸೋಲನುಭವಿಸಿದ ಬೆನ್ನಲ್ಲೇ ಐಸಿಸಿ ರ್‍ಯಾಂಕಿಂಗ್ ಪಟ್ಟಿಯಲ್ಲಿ ಒಂದು ಸ್ಥಾನ ಕುಸಿತ ಕಂಡಿದ್ದು ಎರಡನೇ ಸ್ಥಾನದಲ್ಲಿದ್ದ ಭಾರತ ತಂಡ ಮೊದಲ ಸ್ಥಾನಕ್ಕೇರಿದೆ.
ಐಸಿಸಿ ಏಕದಿನ ರ್‍ಯಾಂಕಿಂಗ್... ಕೊಹ್ಲಿ, ಬುಮ್ರಾ ಜೊತೆಗೆ ನಂಬರ್ 1 ಸ್ಥಾನಕ್ಕೇರಿದ ಟೀಮ್ ಇಂಡಿಯಾ! - ಟೀಮ್ ಇಂಡಿಯಾ.ಇಂಗ್ಲೆಂಡ್
ವಿಶ್ವಕಪ್ನಲ್ಲಿ ಸೋಲಿಲ್ಲದ ಸರದಾರ ಎನಿಸಿರುವ ಭಾರತ ತಂಡ ಏಕದಿನ ಕ್ರಿಕೆಟ್ನಲ್ಲಿ ಮೊದಲ ಸ್ಥಾನಕ್ಕೇರಿದ್ದು, ಸತತ ಎರಡು ಪಂದ್ಯಗಳಲ್ಲಿ ಸೋಲನುಭವಿಸಿರುವ ಇಂಗ್ಲೆಂಡ್ ಎರಡನೇ ಸ್ಥಾನಕ್ಕೆ ಕುಸಿದಿದೆ.
ವಿಶ್ವಕಪ್ನಲ್ಲಿ ಅದ್ದೂರಿ ಪ್ರದರ್ಶನ ತೋರುತ್ತಿರುವ ಕೊಹ್ಲಿಪಡೆ ಒಂದೂ ಪಂದ್ಯ ಸೋಲದೇ ಆಡಿರುವ 4 ಪಂದ್ಯಗಳಲ್ಲೂ ಜಯ ಸಾಧಿಸಿದೆ. 124 ಅಂಕಗಳೊಂದಿಗೆ ಮೊದಲ ಸ್ಥಾನದಲ್ಲಿದ್ದ ಇಂಗ್ಲೆಂಡ್ ಸತತ ಎರಡು ಪಂದ್ಯಗಳಲ್ಲಿ ಸೋಲನುಭವಿಸಿದ ಬೆನ್ನಲ್ಲೇ ಎರಡು ಅಂಕ ಕಳೆದುಕೊಂಡು 122 ಅಂಕ ತಲುಪಿದೆ. 123 ಅಂಕವಿದ್ದ ಕೊಹ್ಲಿಪಡೆ ಮೊದಲ ಸ್ಥಾನಕ್ಕೇರಿದೆ.
ಟೀಮ್ ಇಂಡಿಯಾ ಈಗಾಗಲೇ ಐಸಿಸಿ ಟೆಸ್ಟ್ ಶ್ರೇಯಾಂಕದಲ್ಲಿ ಮೊದಲ ಸ್ಥಾನದಲ್ಲಿದೆ. ಇದೀಗ ಏಕದಿನ ಶ್ರೇಯಾಂಕದಲ್ಲೂ ಮೊದಲ ಸ್ಥಾನಕ್ಕೇರಿದೆ. ಇದರ ಜೊತೆಗೆ ನಾಯಕ ಕೊಹ್ಲಿ ಟೆಸ್ಟ್ ಹಾಗೂ ಏಕದಿನ ಬ್ಯಾಟಿಂಗ್ ರ್ಯಾಂಕ್ನಲ್ಲೂ ಮೊದಲ ಸ್ಥಾನದಲ್ಲಿದ್ದಾರೆ. ಬುಮ್ರಾ ಸಹ ಏಕದಿನ ಬೌಲಿಂಗ್ ರ್ಯಾಂಕ್ನಲ್ಲಿ ಮೊದಲ ಸ್ಥಾನದಲ್ಲೇ ಮುಂದುವರಿದಿದ್ದಾರೆ.