ಕರ್ನಾಟಕ

karnataka

ETV Bharat / sports

ಲಂಕಾ ವಿರುದ್ಧ ವಿಶ್ವಕಪ್​​ನಲ್ಲಿ ಆಂಗ್ಲರಿಗೆ ಸತತ 4ನೇ ಸೋಲು...  ನಂ.1 ತಂಡಕ್ಕೆ ಸಿಂಹಳೀಯರ ಭಯವೇ!? - ವಿಶ್ವಕಪ್​

ಪ್ರಸಕ್ತ ವಿಶ್ವಕಪ್​​ನಲ್ಲಿ ಟೂರ್ನಿ ಗೆಲ್ಲುವ ಪ್ರಮುಖ ತಂಡಗಳಲ್ಲಿ ಒಂದಾಗಿರುವ ಇಂಗ್ಲೆಂಡ್​ಗೆ ಶ್ರೀಲಂಕಾ ಆಘಾತ ನೀಡಿದೆ.

ಲಸಿತ್​ ಮಲಿಂಗಾ

By

Published : Jun 22, 2019, 6:17 AM IST

Updated : Jun 22, 2019, 10:03 AM IST

ಲಂಡನ್​​:ಐಸಿಸಿ ಏಕದಿನ ವಿಶ್ವಕಪ್​​ ಮಹಾ ಟೂರ್ನಿಯಲ್ಲಿ ರನ್​ ಮಳೆಗರೆದು ಗೆಲುವಿನ ದಾಖಲೆ ಬರೆಯುತ್ತಿದ್ದ ಇಂಗ್ಲೆಂಡ್​​ಗೆ ಶ್ರೀಲಂಕಾ ದಿಢೀರ್​ ಶಾಕ್​ ನೀಡಿದ್ದು, ಮಹತ್ವದ ಪಂದ್ಯದಲ್ಲಿ ಸೋಲಿನ ರುಚಿ ತೋರಿಸಿದೆ. ಇದರಿಂದ ಕ್ರಿಕೆಟ್​ ಪಂಡಿತರ ಲೆಕ್ಕಾಚಾರವೇ ತಲೆಕೆಳಗಾಗಿದೆ.

ಪ್ರಸಕ್ತ ವಿಶ್ವಕಪ್​​ನಲ್ಲಿ ಏಷ್ಯಾದ ತಂಡಗಳ ವಿರುದ್ಧ ಇಂಗ್ಲೆಂಡ್​ ಎರಡು ಸೋಲು ಕಂಡಿದೆ. ಈ ಮೊದಲು ಪಾಕ್​ ವಿರುದ್ಧ 14ರನ್​​ಗಳ ಸೋಲು ಕಂಡಿದ್ದ ಆಂಗ್ಲ ಪಡೆ, ಇದೀಗ ಶ್ರೀಲಂಕಾ ವಿರುದ್ಧ ಕೂಡ 20 ರನ್​ಗಳ ಸೋಲಿನ ರುಚಿ ಕಂಡಿದೆ. ವಿಶೇಷವೆಂದರೆ ವಿಶ್ವಕಪ್​ ಟೂರ್ನಿಯಲ್ಲಿ ಶ್ರೀಲಂಕಾ ವಿರುದ್ಧವೇ ಇಂಗ್ಲೆಂಡ್​ ಸತತ 4ನೇ ಸೋಲು ಕಂಡಿದೆ.

ಶ್ರೀಲಂಕಾ ಸಂಭ್ರಮ

ಈ ಹಿಂದೆ, 1999ರಲ್ಲಿ ಶ್ರೀಲಂಕಾ ತಂಡಕ್ಕೆ ಇಂಗ್ಲೆಂಡ್​​ 8 ವಿಕೆಟ್​ಗಳ ಸೋಲಿನ ರುಚಿ ತೋರಿಸಿತ್ತು. ಇದಾದ ಬಳಿಕ 2007, 2011, 2015 ಹಾಗೂ 2019ರಲ್ಲೂ ಶ್ರೀಲಂಕಾ ಮೆಲುಗೈ ಸಾಧಿಸಿದ್ದು, ಸತತ ನಾಲ್ಕು ಗೆಲುವು ದಾಖಲಿಸಿದೆ.

2007ರಲ್ಲಿ ಲಂಕಾ 2 ರನ್​ಗಳ ಗೆಲುವು, 2011ರಲ್ಲಿ 10 ವಿಕೆಟ್​ಗಳಿಂದ, 2015ರಲ್ಲಿ 9 ವಿಕೆಟ್​ಗಳಿಂದ ಹಾಗೂ ಇದೀಗ 20 ರನ್​ಗಳ ಗೆಲುವು ದಾಖಲಿಸಿದೆ. ಹೀಗಾಗಿ ಆಂಗ್ಲರ ತಂಡಕ್ಕೆ ಏಷ್ಯಾ ಬೌಲಿಂಗ್​ ಶಕ್ತಿ ಎದುರಿಸುವ ಶಕ್ತಿ ಇಲ್ಲವೇ ಎಂಬ ಮಾತು ಸಹ ಕೇಳಿ ಬರುತ್ತಿವೆ.

ಬಾಂಗ್ಲಾ ವಿರುದ್ಧ 386 ರನ್​ ಪೇರಿಸಿದ್ದ ಆಂಗ್ಲರು, ಅಫ್ಘಾನಿಸ್ತಾನದ ವಿರುದ್ಧ 397 ರನ್​ ಮಾಡಿ ಭರ್ಜರಿ ಗೆಲುವು ದಾಖಲು ಮಾಡಿತ್ತು. ಜತೆಗೆ ವೆಸ್ಟ್​ ಇಂಡೀಸ್​ ನೀಡಿದ್ದ 212 ರನ್​ಗಳನ್ನ ಕೇವಲ 33.1 ಓವರ್​ಗಳಲ್ಲಿ 2 ವಿಕೆಟ್​ ಕಳೆದುಕೊಂಡು ಗುರಿ ಮುಟ್ಟಿದ್ದ ಬಲಿಷ್ಠ ತಂಡ, ಶ್ರೀಲಂಕಾ ವಿರುದ್ಧ ಏಕಾಏಕಿಯಾಗಿ ಕುಸಿತ ಕಂಡಿದೆ.

ಇನ್ನು ಮುಂದಿನ ಪಂದ್ಯದಲ್ಲಿ ಟೀಂ ಇಂಡಿಯಾ ಹಾಗೂ ಇಂಗ್ಲೆಂಡ್​ ತಂಡ ಮುಖಾಮುಖಿಯಾಗುತ್ತಿದ್ದು, ಈ ಪಂದ್ಯದಲ್ಲೂ ಭಾರತ ಬೌಲಿಂಗ್​ ಶಕ್ತಿ ಎದುರು ಯಾವ ರೀತಿಯ ಪ್ರದರ್ಶನ ನೀಡಲಿದೆ ಎಂಬುದರ ಬಗ್ಗೆ ಈಗಾಗಲೇ ಕ್ರಿಕೆಟ್​ ಪಂಡಿತರು ಲೆಕ್ಕಾಚಾರ ಹಾಕಲು ಶುರು ಮಾಡಿದ್ದಾರೆ.

Last Updated : Jun 22, 2019, 10:03 AM IST

ABOUT THE AUTHOR

...view details