ಲಂಡನ್: ಆಸ್ಟ್ರೇಲಿಯಾ ವಿರುದ್ಧ ಕೊನೆಯ ಓವರ್ನಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆಯುವ ಮೂಲಕ ಟ್ರೆಂಟ್ ಬೌಲ್ಟ್ ವಿಶ್ವಕಪ್ನಲ್ಲಿ ಈ ಸಾಧನೆ ಮಾಡಿದ ನ್ಯೂಜಿಲ್ಯಾಂಡ್ನ ಪ್ರಥಮ ಬೌಲರ್ ಎಂಬ ಖ್ಯಾತಿಗೆ ಪಾತ್ರರಾದರು.
ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ ಇನ್ನಿಂಗ್ಸ್ನ ಕೊನೆಯ ಓವರ್ ಎಸೆದ ಬೌಲ್ಟ್ 3,4 ಮತ್ತು 5ನೇ ಎಸೆತದಲ್ಲಿ ವಿಕೆಟ್ ಪಡೆದರು. ಮೊದಲಿಗೆ 88 ರನ್ಗಳಿಸಿದ್ದ ಖವಾಜರನ್ನು ಬೌಲ್ಡ್ ಮಾಡಿದ ಬೌಲ್ಟ್, 4ನೇಎಸೆತದಲ್ಲಿ ಸ್ಟಾರ್ಕ್ರನ್ನು ಕೂಡ ಬೌಲ್ಡ್ ಮಾಡಿದರು. 5 ನೇ ಎಸೆತದಲ್ಲಿ ನೆಹ್ರೆನ್ಡ್ರಾಫ್ರನ್ನು ಎಲ್ಬಿಡಬ್ಲ್ಯೂ ಮಾಡುವ ಮೂಲಕ 2019ರ ವಿಶ್ವಕಪ್ನಲ್ಲಿ ಎರಡನೇ ಹ್ಯಾಟ್ರಿಕ್ ಹಾಗೂ ವಿಶ್ವಕಪ್ನಲ್ಲಿ ಕಿವೀಸ್ ಪರ ಮೊದಲ ಹ್ಯಾಟ್ರಿಕ್ ವಿಕೆಟ್ ಪಡೆದ ಬೌಲರ್ ಎನಿಸಿಕೊಂಡರು.
ಇದೇ ವಿಶ್ವಕಪ್ನಲ್ಲಿ ಭಾರತದ ಮೊಹಮ್ಮದ್ ಶಮಿ ಅಫ್ಘಾನಿಸ್ತಾನಸದ ವಿರುದ್ಧವೂ ಕೊನೆಯ ಓವರ್ನಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದಿದ್ದರು. ಬೌಲ್ಟ್ ವಿಶ್ವಕಪ್ನಲ್ಲಿ ಹ್ಯಾಟ್ರಿಕ್ ಪಡೆಯುವ ಮೂಲಕ ವಿಶ್ವಕಪ್ ಇತಿಹಾಸದಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ 11 ನೇ ಬೌಲರ್ ಎನಿಸಿದರು.