ಕರ್ನಾಟಕ

karnataka

ETV Bharat / sports

ಇಂಡೋ-ಪಾಕ್​ ನಡುವಿನ ಪಂದ್ಯಕ್ಕೆ ಬಳಕೆಯಾದ ಚೆಂಡು​ ಬರೋಬ್ಬರಿ_____ಲಕ್ಷಕ್ಕೆ ಸೇಲ್​! - ಬಳಕೆಯಾದ ಬಾಲ್​

ವಿಶ್ವಕಪ್​​ನ ಲೀಗ್​​ನಲ್ಲಿ ಭಾರತ-ಪಾಕಿಸ್ತಾನ ಪಂದ್ಯಕ್ಕೆ ಬಳಸಲಾದ ಕೆಲವು ವಸ್ತುಗಳು ದಾಖಲೆಯ ಬೆಲೆಗೆ ಹರಾಜುಗೊಂಡಿವೆ ಎಂದು ತಿಳಿದು ಬಂದಿದೆ.

ಬಳಕೆಯಾದ ಚೆಂಡು

By

Published : Jul 13, 2019, 5:51 PM IST

ಹೈದರಾಬಾದ್​:ಐಸಿಸಿ ಏಕದಿನ ವಿಶ್ವಕಪ್​​ನ ಲೀಗ್​​ ಪಂದ್ಯದಲ್ಲಿ ಜೂನ್​​ 16ರಂದು ಸಾಂಪ್ರದಾಯಿಕ ಎದುರಾಳಿ ತಂಡಗಳಾದ ಭಾರತ-ಪಾಕಿಸ್ತಾನ ಮುಖಾಮುಖಿಯಾಗಿದ್ದವು. ಭಾರತ ಬ್ಯಾಟಿಂಗ್​ ನಡೆಸಿದ್ದ ವೇಳೆ ಬಳಕೆ ಮಾಡಲಾಗಿದ್ದ ಬಾಲ್​ ಇದೀಗ ದಾಖಲೆಯ ಮೊತ್ತಕ್ಕೆ ಸೇಲ್​ ಆಗಿದೆ.

ಇಂಡೋ-ಪಾಕ್​ ಫೈಟ್​

ವೆಬ್​ಸೈಟ್​​ ನೀಡಿರುವ ಮಾಹಿತಿ ಪ್ರಕಾರ, ಈ ಮ್ಯಾಚ್‌ಗೆ ಬಳಸಲಾದ ಚೆಂಡು 1.5 ಲಕ್ಷ ರೂಗೆ ಸೇಲ್​ ಆಗಿದೆ ಎಂದು ತಿಳಿದು ಬಂದಿದೆ. ಜತೆಗೆ ಇದೇ ಪಂದ್ಯದಲ್ಲಿ ಟಾಸ್​ಗಾಗಿ ಬಳಕೆ ಮಾಡಲಾಗಿದ್ದ ನಾಣ್ಯ 99,412 ರೂಗೆ ಮಾರಾಟವಾಗಿದೆ. ಇದರ ಜತೆಗೆ ಉಭಯ ತಂಡಗಳ ಸ್ಕೋರ್​ ಕಾರ್ಡ್​​ 75,416 ರೂಗಳಿಗೆ ಹರಾಜುಗೊಂಡಿದ್ದಾಗಿ ತಿಳಿದು ಬಂದಿದೆ. ಇದೇ ಪಂದ್ಯಕ್ಕೆ ಸಂಬಂಧಿಸಿದ ಒಟ್ಟು 27 ವಸ್ತುಗಳು ಸೇಲ್​ ಆಗಿವೆ ಎಂದು ತಿಳಿದು ಬಂದಿದೆ.

ಸೆಮಿಫೈನಲ್​​ನಲ್ಲಿ ಭಾರತ-ನ್ಯೂಜಿಲ್ಯಾಂಡ್​ ನಡುವಿನ ಪಂದ್ಯದ ವೇಳೆ ಬಳಕೆಯಾಗಿರುವ ಸ್ಕೋರ್​ ಕಾರ್ಡ್​, ಟಾಸ್​​ ಹಾಗೂ ಬಾಲ್​ ಹರಾಜಿಗೆ ಲಭ್ಯವಿದೆ ಎಂದು ತಿಳಿದು ಬಂದಿದೆ. ಲೀಗ್​​ ಪಂದ್ಯದಲ್ಲಿ ಪಾಕ್​ ವಿರುದ್ಧ ಭಾರತ 89ರನ್​ ಅಂತರದ ಗೆಲುವು ದಾಖಲು ಮಾಡಿದ್ದರೆ, ಸೆಮೀಸ್​​ನಲ್ಲಿ 18ರನ್​ಗಳ ಸೋಲು ಕಂಡು ಟೂರ್ನಿಯಿಂದ ಹೊರಬಿದ್ದಿದೆ.

ABOUT THE AUTHOR

...view details