ನಾಟಿಂಗ್ಹ್ಯಾಮ್: ದಕ್ಷಿಣ ಆಫ್ರಿಕಾ ಹಾಗೂ ವೆಸ್ಟ್ ಇಂಡೀಸ್ ತಂಡಗಳನ್ನು ಮಣಿಸಿ ಈ ಬಾರಿಯ ವಿಶ್ವಕಪ್ನಲ್ಲಿ ಬಲಿಷ್ಠ ತಂಡಗಳಿಗೆ ಶಾಕ್ ನೀಡುತ್ತಿರುವ ಬಾಂಗ್ಲಾದೇಶ ಇಂದು ಕಾಂಗರೂ ಪಡೆಯನ್ನು ತನ್ನ 6ನೇ ಪಂದ್ಯದಲ್ಲಿ ಎದುರಿಸುತ್ತಿದೆ. ಆಡಿರುವ 5 ಪಂದ್ಯಗಳಲ್ಲಿ 2 ಗೆಲುವು, 2 ಸೋಲು ಕಂಡಿರುವ ಬಾಂಗ್ಲಾದೇಶ 5 ಅಂಕಗಳಿಂದ 5ನೇ ಸ್ಥಾನದಲ್ಲಿದೆ.
ಆಡಿದ ನಾಲ್ಕು ಪಂದ್ಯಗಳಲ್ಲಿ ಇಂಗ್ಲೆಂಡ್ ವಿರುದ್ಧ ಬಿಟ್ಟರೆ ಉತ್ತಮ ಪ್ರದರ್ಶನ ತೋರಿರುವ ಬಾಂಗ್ಲಾ ತಂಡಕ್ಕೆ ವಿಶ್ವಕಪ್ನಲ್ಲಿ ಗರಿಷ್ಠ ಸ್ಕೋರರ್ ಆಗಿರುವ ಶಕಿಬ್ ಸೇರಿದಂತೆ ಲಿಟ್ಟನ್ ದಾಸ್, ರಹೀಮ್ ಹಾಗೂ ಆರಂಭಿಕರಾದ ತಮೀಮ್-ಸೌಮ್ಯ ಸರ್ಕಾರ್ ಉತ್ತಮ ಫಾರ್ಮ್ನಲ್ಲಿದ್ದಾರೆ. ಬೌಲಿಂಗ್ನಲ್ಲಿ ಮೋರ್ತಜ, ಮುಸ್ತಫಜುರ್ ರೆಹಮಾನ್ ಅದ್ಭುತ ಪ್ರದರ್ಶನ ತೋರಿ ಎದುರಾಳಿಗಳನ್ನು ಕಟ್ಟಿ ಹಾಕಕುವ ಸಾಮರ್ಥ್ಯ ಹೊಂದಿದ್ದು, 2005ರಲ್ಲಿ ಇಂಗ್ಲೆಂಡ್ನ ಕಾರ್ಡಿಫ್ನಲ್ಲಿ ಆಸ್ಟ್ರೇಲಿಯವನ್ನು ಮಣಿಸಿದ ರೀತಿಯಲ್ಲಿ ಮತ್ತೊಂದು ಆಶ್ಚರ್ಯಕರ ಫಲಿತಾಂಶ ನೀಡಲು ಕಾಯುತ್ತಿದೆ.
ಇತ್ತ ಆಸ್ಟ್ರೇಲಿಯಾ ಆಡಿರುವ 5 ಪಂದ್ಯಗಳಲ್ಲಿ ಒಂದು ರದ್ದಾಗಿದ್ದರೆ ಒಂದು ಸೋಲು ಹಾಗೂ 4 ಗೆಲುವು ಪಡೆದು ಅಂಕಪಟ್ಟಿಯಲ್ಲಿ 3ನೇ ಸ್ಥಾನದಲ್ಲಿದೆ. ತಂಡ ಎಲ್ಲಾ ವಿಭಾಗದಲ್ಲೂ ಅತ್ಯುತ್ತಮವಾಗಿದೆ. ಫಿಂಚ್, ವಾರ್ನರ್ ಬ್ಯಾಟಿಂಗ್ ಹಾಗೂ ಸ್ಟಾರ್ಕ್- ಕಮ್ಮಿನ್ಸ್ ಬೌಲಿಂಗ್ನಲ್ಲಿ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ. ಉಳಿದ ಆಟಗಾರರು ಫಾರ್ಮ್ನಲ್ಲಿಲ್ಲದಿದ್ದರೂ ಬಾಂಗ್ಲಾ ವಿರುದ್ಧ ಆಸೀಸ್ ಗೆಲ್ಲುವ ನೆಚ್ಚಿನ ತಂಡವಾಗಿದೆ.
ಮುಖಾಮುಖಿ: