ಕರ್ನಾಟಕ

karnataka

ETV Bharat / sports

'ಭವಿಷ್ಯದಲ್ಲಿ ಪಂತ್​ರನ್ನು​ ಭಾರತದ ನಾಯಕ ಸ್ಥಾನಕ್ಕೆ ಮುಂಚೂಣಿ ಸ್ಪರ್ಧಿಯಾಗಿ ನೋಡಿದರೆ ಅಚ್ಚರಿಯಿಲ್ಲ' - ರಿಕಿ ಪಾಂಟಿಂಗ್

ಮಂಗಳವಾರ ಡೆಲ್ಲಿ ಕ್ಯಾಪಿಟಲ್ಸ್​ ಫ್ರಾಂಚೈಸಿ ಗಾಯಾಳು ಶ್ರೇಯಸ್ ಅಯ್ಯರ್​ ಬದಲಿಗೆ ರಿಷಬ್ ಪಂತ್​ರನ್ನು 2021ರ ಆವೃತ್ತಿಗೆ ನಾಯಕನನ್ನಾಗಿ ನೇಮಕ ಮಾಡಿದೆ.

ರಿಷಭ್ ಪಂತ್
ರಿಷಭ್ ಪಂತ್

By

Published : Mar 31, 2021, 9:24 PM IST

ಮುಂಬೈ:ವಿಕೆಟ್​ ಕೀಪರ್ ಬ್ಯಾಟ್ಸ್​ಮನ್​ ರಿಷಭ್ ಪಂತ್​ ಭವಿಷ್ಯದಲ್ಲಿ ಭಾರತ ತಂಡದ ನೇತೃತ್ವ ವಹಿಸುವ ಸ್ಪರ್ಧೆಯಲ್ಲಿರುವ ಮುಂಚೂಣಿ ಆಟಗಾರ ಎಂದು ಟೀಮ್ ಇಂಡಿಯಾ ಮಾಜಿ ನಾಯಕನ ಮೊಹಮ್ಮದ್ ಅಜರುದ್ದೀನ್​ ಅಭಿಪ್ರಾಯಪಟ್ಟಿದ್ದಾರೆ.

ಮಂಗಳವಾರ ಡೆಲ್ಲಿ ಕ್ಯಾಪಿಟಲ್ಸ್​ ಫ್ರಾಂಚೈಸಿ ಗಾಯಾಳು ಶ್ರೇಯಸ್ ಅಯ್ಯರ್​ ಬದಲಿಗೆ ರಿಷಭ್‌ ಪಂತ್​ರನ್ನು 2021ರ ಆವೃತ್ತಿಗೆ ನಾಯಕನನ್ನಾಗಿ ನೇಮಕ ಮಾಡಿದೆ.

ಭಾರತದ ಪರ ಅಜರುದ್ದೀನ್ 334 ಏಕದಿನ ಪಂದ್ಯ ಮತ್ತು 99 ಟೆಸ್ಟ್​ ಪಂದ್ಯಗಳನ್ನಾಡಿರುವ ಮಾಜಿ ನಾಯಕ ಅಜರುದ್ದೀನ್, ಆಯ್ಕೆ ಸಮಿತಿ ಪಂತ್​ರನ್ನು ನಾಯಕ ಸ್ಥಾನದ ಮುಂಚೂಣಿ ಸ್ಪರ್ಧಿಯೆಂದು ನೋಡಿದರೆ ಅದರಲ್ಲಿ ಆಶ್ಚರ್ಯಪಡುವ ಅಗತ್ಯವಿಲ್ಲ ಎಂದಿದ್ದಾರೆ.

"ಪಂತ್ ಅದ್ಭುತವಾದ ಕೆಲವು ತಿಂಗಳುಗಳನ್ನು ಹೊಂದಿದ್ದಾರೆ. ಎಲ್ಲಾ ಸ್ವರೂಪಗಳಲ್ಲಿಯೂ ತನ್ನನ್ನು ತಾನು ಸ್ಥಾಪಿಸಿಕೊಂಡಿದ್ದಾರೆ. ಮುಂದಿನ ದಿನಗಳಲ್ಲಿ ಆಯ್ಕೆಗಾರರು ಅವರನ್ನು ಭಾರತೀಯ ನಾಯಕತ್ವಕ್ಕೆ ಮುಂಚೂಣಿಯಲ್ಲಿರುವವರಾಗಿ ನೋಡಿದರೂ ಆಶ್ಚರ್ಯವಿಲ್ಲ. ಅವರ ಆಕ್ರಮಣಕಾರಿ ಕ್ರಿಕೆಟ್ ಮುಂದಿನ ದಿನಗಳಲ್ಲಿ ಭಾರತವನ್ನು ಉತ್ತಮ ಸ್ಥಿತಿಯಲ್ಲಿರಿಸಲಿದೆ" ಎಂದು ಅಜರುದ್ದೀನ್ ಟ್ವೀಟ್ ಮೂಲಕ ಯುವ ಆಟಗಾರನ ಬಗ್ಗೆ ಗುಣಗಾನ ಮಾಡಿದ್ದಾರೆ.

ಇದನ್ನೂ ಓದಿ: ಡಿಲ್ಲಿ ಕ್ಯಾಪಿಟಲ್ಸ್​ ನಾಯಕತ್ವವು ರಿಷಬ್​ ಪಂತ್​ನನ್ನು ಅತ್ಯುತ್ತಮ ಕ್ರಿಕೆಟಿಗನಾಗಿಸುತ್ತೆ: ರಿಕಿ ಪಾಂಟಿಂಗ್ ವಿಶ್ವಾಸ

ಇವರಷ್ಟೇ ಅಲ್ಲದೆ ಕೋಚ್ ರಿಕಿ ಪಾಂಟಿಂಗ್ ಪಂತ್​ ನಾಯಕನಾಗಿ ಘೋಷಿಸಿರುವುದು ಉತ್ತಮ ಆಯ್ಕೆ ಎಂದಿದ್ದಾರೆ. ದುರದೃಷ್ಟವಶಾತ್ ಅಯ್ಯರ್​ ಟೂರ್ನಿಯನ್ನು ಮಿಸ್​ ಮಾಡಿಕೊಳ್ಳಲಿದ್ದಾರೆ, ಆದರೆ ಪಂತ್ ಈ ಅವಕಾಶವನ್ನು ಹೇಗೆ ಬಾಚಿಕೊಳ್ಳಲಿದ್ದಾರೆ ಎಂದು ನೋಡುವುದಕ್ಕೆ ಎದುರು ನೋಡುತ್ತಿದ್ದೇನೆ. ಇತ್ತೀಚಿನ ಪ್ರದರ್ಶನವನ್ನು ನೋಡಿದರೆ ಆತ ಆ ಸ್ಥಾನಕ್ಕೆ ಸೂಕ್ತರಾಗಿದ್ದಾರೆ. ಅವರು ಅತಿಯಾದ ಆತ್ಮವಿಶ್ವಾಸದಲ್ಲಿ ಬರಲಿದ್ದಾರೆ, ನಾಯಕತ್ವ ರಿಷಭ್ ಪಂತ್​ರನ್ನು ಮತ್ತಷ್ಟು ಅತ್ಯುತ್ತಮ ಆಟಗಾರನನ್ನಾಗಿ ಮಾಡಲಿದೆ ಎಂದು ನಾನು ಭಾವಿಸುತ್ತೇನೆ ಎಂದು ಟ್ವೀಟ್ ಮಾಡಿದ್ದಾರೆ.

ಇದನ್ನೂ ಓದಿ: ರಿಷಭ್ ಪಂತ್ ಮಾಂತ್ರಿಕ ನಾಯಕರಾಗಲಿದ್ದಾರೆ: ಸುರೇಶ್ ರೈನಾ ಭವಿಷ್ಯ

ABOUT THE AUTHOR

...view details