ಕರ್ನಾಟಕ

karnataka

ETV Bharat / sports

ಮಹಿಳಾ ಟಿ-20 ವಿಶ್ವಕಪ್: ಥಾಯ್ಲೆಂಡ್​ ವಿರುದ್ಧ ಗೆದ್ದು ಶುಭಾರಂಭ ಮಾಡಿದ ವಿಂಡೀಸ್​​​​​​​​​​ - ವೆಸ್ಟ್ ಇಂಡೀಸ್​ - ಥಾಯ್ಲೆಂಡ್​

ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರುವ ಟಿ-20 ವಿಶ್ವಕಪ್​ನ 2ನೇ ಪಂದ್ಯದಲ್ಲಿ ವೆಸ್ಟ್​ ಇಂಡೀಸ್​ ತಂಡ ಥಾಯ್ಲೆಂಡ್​​​ ತಂಡವನ್ನು 7 ವಿಕೆಟ್​ಗಳಿಂದ ಮಣಿಸಿ ಶುಭಾರಂಭ ಮಾಡಿದೆ.

Women's T20 world cup
Women's T20 world cup

By

Published : Feb 22, 2020, 4:31 PM IST

ಪರ್ತ್​: ಮಹಿಳೆಯರ ಟಿ-20 ವಿಶ್ವಕಪ್​ನ ದ್ವಿತೀಯ ಪಂದ್ಯದಲ್ಲಿ ವೆಸ್ಟ್​ ವಿಂಡೀಸ್​ ವಿರುದ್ಧ ದಿಟ್ಟ ಹೋರಾಟ ಪ್ರದರ್ಶಿಸಿದ ಥಾಯ್ಲೆಂಡ್​ ಮಹಿಳಾ ತಂಡ 7 ವಿಕೆಟ್​ಗಳ ಸೋಲು ಕಂಡಿದೆ.

ಇದೇ ಮೊದಲ ಬಾರಿಗೆ ವಿಶ್ವಕಪ್​ಗೆ ಅರ್ಹತೆ ಗಿಟ್ಟಿಸಿಕೊಂಡಿರುವ ಥಾಯ್ಲೆಂಡ್​ ತಂಡ ಇಂದು ವಿಂಡೀಸ್​ ವಿರುದ್ಧ ಟಾಸ್​ ಗೆದ್ದು ಬ್ಯಾಟಿಂಗ್ ಆಯ್ದುಕೊಂಡಿತು. 20 ಓವರ್​ಗಳನ್ನು ಪೂರ್ತಿಗೊಳಿಸಿದ ಥಾಯ್​ ತಂಡ ಗಳಿಸಿದ್ದು ಕೇವಲ 78 ರನ್​.

ವಿಂಡೀಸ್​ ನಾಯಕಿ ಸ್ಟೆಫನಿ ಟೇಲರ್​ 13ಕ್ಕೆ 3 ವಿಕೆಟ್​ ಪಡೆದು ಮಿಂಚಿದರು. ಇವರಿಗೆ ಸಾಥ್​ ನೀಡಿದ ಅನಿಸಾ ಮೊಹಮ್ಮದ್​, ಶಮಿಲಿಯಾ ಕಾನೆಲ್​, ಚಿನೆಲ್ಲೆ ಹೆನ್ರಿ, ಹೇಲಿ ಮ್ಯಾಥ್ಯೂಸ್​ ಹಾಗೂ ಅಫಿ ಪ್ಲೆಚೆರ್​ ತಲಾ ಒಂದು ವಿಕೆಟ್​ ಪಡೆದು ಥಾಯ್ಲೆಂಡ್​ ತಂಡವನ್ನು ಅಲ್ಪ ಮೊತ್ತಕ್ಕೆ ಕಟ್ಟಿಹಾಕಿದರು.

ಕೇವಲ 79 ರನ್​ಗಳ ಟಾರ್ಗೆಟ್​ ಬೆನ್ನತ್ತಿದ ವಿಂಡೀಸ್​ 16.4 ಓವರ್​ಗಳಲ್ಲಿ 3 ವಿಕೆಟ್​ ಕಳೆದುಕೊಂಡು ಗುರಿ ತಲುಪಿತು. ನಾಯಕಿ ಟೇಲರ್​ ಔಟಾಗದೆ 26, ವಿಕೆಟ್ ಕೀಪರ್​ ಶೆಮೈನ್​ ಕ್ಯಾಂಪ್​​ಬೆಲ್​ ಔಟಾಗದೆ 25 ರನ್ ​ಗಳಿಸಿ ತಂಡವನ್ನು ಗೆಲುವಿನ ದಡ ಮುಟ್ಟಿಸಿದರು. ಮ್ಯಾಥ್ಯೂಸ್​ 16 ರನ್ ​ಗಳಿಸಿದರು.

ಪಂದ್ಯ ಸೋತರೂ ಥಾಯ್ಲೆಂಡ್​ನ ಉದಯೋನ್ಮುಖ ಬೌಲರ್​ಗಳಾದ ಸುಲೀಪಾರ್ನ್​ ಲಾವೋಮಿ 4 ಓವರ್​ಗಳಲ್ಲಿ ಒಂದು ಮೇಡನ್​ ಪಡೆದು ಕೇವಲ 14 ರನ್​ ನೀಡಿ ವಿಂಡೀಸ್​ ಬ್ಯಾಟ್ಸ್​ಮನ್​ಗಳನ್ನು ಕಾಡಿದರು. ಸೊರಾಯಾ ಲೇತ್ಹ್​ 21 ರನ್​ ನೀಡಿ 1 ವಿಕೆಟ್​ ಪಡೆದರು. ಬೌಲಿಂಗ್​ ಹಾಗೂ ಬ್ಯಾಟಿಂಗ್​ನಲ್ಲಿ ಮಿಂಚಿದ ವೆಸ್ಟ್ ಇಂಡೀಸ್​ ತಂಡದ ನಾಯಕಿ ಸ್ಟೆಫನಿ ಟೇಲರ್​ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದರು.

ABOUT THE AUTHOR

...view details