ಕರ್ನಾಟಕ

karnataka

ETV Bharat / sports

ಮಹಿಳಾ ಟಿ20 ವಿಶ್ವಕಪ್​: ಸತತ ಎರಡನೇ ಬಾರಿ ಸೆಮಿಫೈನಲ್​ನಲ್ಲಿ ಭಾರತಕ್ಕೆ ಇಂಗ್ಲೆಂಡ್ ಎದುರಾಳಿ - women's world cup2020

ಮಹಿಳಾ ಟಿ20 ವಿಶ್ವಕಪ್​ ಸಮರದ ಸೆಮಿಫೈನಲ್​ ಪಂದ್ಯಾಟ ದಕ್ಷಿಣ ಆಫ್ರಿಕಾ vs ಆಸ್ಟ್ರೇಲಿಯಾ, ಭಾರತ vs ಇಂಗ್ಲೆಂಡ್​ ತಂಡಗಳ ನಡುವೆ ನಡೆಯಲಿದೆ.

womens t20 world-cup
ಮಹಿಳಾ ಟಿ20 ವಿಶ್ವಕಪ್

By

Published : Mar 3, 2020, 4:53 PM IST

ಸಿಡ್ನಿ(ಆಸ್ಟ್ರೇಲಿಯಾ): ಮಂಗಳವಾರ ನಡೆಯಬೇಕಿದ್ದ ಎರಡು ಲೀಗ್​ ಪಂದ್ಯಗಳು ಮಳೆಗೆ ಆಹುತಿಯಾಗಿವೆ. ಹಾಗಾಗಿ ದಕ್ಷಿಣ ಆಫ್ರಿಕಾ ತಂಡ ಬಿ ಗುಂಪಿನಲ್ಲಿ ಮುಂಚೂಣಿ ಸ್ಥಾನ ಪಡೆದು ಸೆಮಿಫೈನಲ್​ನಲ್ಲಿ ಆಸ್ಟ್ರೇಲಿಯಾ ತಂಡವನ್ನು ಎದುರಿಸಲಿದೆ. ಇನ್ನೊಂದೆಡೆ ಎ ಗುಂಪಿನ ಅಗ್ರತಂಡ ಭಾರತ, ಇಂಗ್ಲೆಂಡ್​ ಜೊತೆ ಸೆಣಸಲಿದೆ.

ಲೀಗ್​ ಹಂತದಲ್ಲಿ ಮೂರು ಪಂದ್ಯಗಳನ್ನು ಗೆದ್ದಿರುವ ದಕ್ಷಿಣ ಆಫ್ರಿಕಾ ಕೊನೆಯ ಲೀಗ್​ ಪಂದ್ಯದಲ್ಲಿ ವಿಂಡೀಸ್ ತಂಡವನ್ನು ಎದುರಿಸಬೇಕಾಗಿತ್ತು. ಈ ಪಂದ್ಯ ಅಷ್ಟೇನೂ ಮಹತ್ವವಿಲ್ಲದಿದ್ದರೂ, ಸೆಮಿಯಲ್ಲಿ ಯಾವ ತಂಡವನ್ನು ಎದುರಿಸಬೇಕು ಎಂಬುದನ್ನು ಈ ಪಂದ್ಯದ ಫಲಿತಾಂಶವೇ ನಿರ್ದರಿಸಬೇಕಿತ್ತು. ಆದರೆ ಪಂದ್ಯ ರದ್ದಾದ ನಂತರ 4 ಪಂದ್ಯಗಳಲ್ಲಿ 7 ಅಂಕ ಪಡೆದ ದ.ಆಫ್ರಿಕಾ ಬಿ ಗುಂಪಿನ ಅಗ್ರಸ್ಥಾನಿಯಾಗಿ ಲೀಗ್​ನಿಂದ ತೇರ್ಗಡೆಯಾಯಿತು. ಇನ್ನು ಇಂಗ್ಲೆಂಡ್​ ದ್ವಿತೀಯ ಸ್ಥಾನ ಪಡೆಯಿತು.

ಐಸಿಸಿ ವೇಳಾಪಟ್ಟಿಯಂತೆ ಎ ಗುಂಪಿನಲ್ಲಿ ಮೊದಲ ಸ್ಥಾನ ಪಡೆದ ತಂಡ ಬಿ ಗುಂಪಿನ ದ್ವಿತೀಯ ಸ್ಥಾನಿಯನ್ನು, ಬಿ ಗುಂಪಿನ ಅಗ್ರಸ್ಥಾನಿ ಎ ಗುಂಪಿನ ದ್ವಿತೀಯ ಸ್ಥಾನ ಪಡೆದ ತಂಡವನ್ನು ಎದುರಿಸಬೇಕು. ಇದರಂತೆ ಗುರುವಾರ ನಡೆಯಲಿರುವ ಮೊದಲ ಸೆಮಿಫೈನಲ್​ ಪಂದ್ಯದಲ್ಲಿ ಭಾರತ ತಂಡವನ್ನು ಇಂಗ್ಲೆಂಡ್​ ತಂಡವೂ, ಎರಡನೇ ಪಂದ್ಯದಲ್ಲಿ ದ.ಆಫ್ರಿಕಾ ತಂಡ ಆಸೀಸ್​ ಮಹಿಳೆಯರ ಸವಾಲನ್ನು ಎದುರಿಸಲಿದೆ.

ಭಾರತಕ್ಕೆಮತ್ತೆಇಂಗ್ಲೆಂಡ್​ ಸವಾಲು!

2018ರಲ್ಲೂ ಭಾರತ ತಂಡ ಎ ಗುಂಪಿನಲ್ಲಿ ಪ್ರಥಮ ಪಡೆದು ಸೆಮಿಫೈನಲ್​ ಪ್ರವೇಶಿಸಿತ್ತು. ದುರಾದೃಷ್ಟ ಅಂದ್ರೆ, ಬಲಿಷ್ಠ ಇಂಗ್ಲೆಂಡ್​ ಎದುರು ಬ್ಯಾಟಿಂಗ್ ವೈಫಲ್ಯ ಅನುಭವಿಸಿ ಸೋಲು ಕಂಡಿತ್ತು. ಇದೀಗ 2020ರಲ್ಲೂ ಭಾರತ ಅಜೇಯ ತಂಡವಾಗಿ ಸೆಮಿಫೈನಲ್ ಪ್ರವೇಶಿಸಿದ್ದು ಮತ್ತೆ ಇಂಗ್ಲೆಂಡ್ ವಿರುದ್ಧವೇ ಸ್ಪರ್ಧಿಸಬೇಕಾದ ಪರಿಸ್ಥಿತಿಗೆ ತಲುಪಿದೆ. ಆದರೆ ಕಳೆದ ಬಾರಿಯ ತಂಡಕ್ಕಿಂತ ಭಾರತ ತಂಡ ಈ ಬಾರಿ ಬಲಿಷ್ಠವಾಗಿದ್ದು ಚೊಚ್ಚಲ ವಿಶ್ವಕಪ್​ ಗೆಲ್ಲುವ ಕನಸು ಕಾಣುತ್ತಿದೆ.

ABOUT THE AUTHOR

...view details