ಮೆಲ್ಬೋರ್ನ್(ಆಸ್ಟ್ರೇಲಿಯಾ): ವಿಶ್ವ ಮಹಿಳಾ ದಿನಚರಣೆಯಂದು ನಡೆದ ವನಿತೆಯರ ಟಿ-20 ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಭಾರತೀಯ ವನಿತೆಯರ ತಂಡ ಮುಗ್ಗರಿಸಿದೆ. ಆಸೀಸ್ ವನಿತೆಯರು ಐದನೇ ಬಾರಿ ಟಿ20 ಕಿರೀಟ ಮುಡಿಗೇರಿಸಿಕೊಂಡಿದ್ದಾರೆ.
ಆಸೀಸ್ ವನಿತೆಯರು ನೀಡಿದ್ದ 185 ರನ್ಗಳ ಗುರಿ ಬೆನ್ನತ್ತಿದ ಟೀಂ ಇಂಡಿಯಾ ವನಿತೆಯರ ತಂಡ ಬ್ಯಾಟಿಂಗ್ ವೈಫಲ್ಯದಿಂದ 99 ರನ್ಗಳಿಗೆ ಸರ್ವ ಪತನ ಕಂಡಿದೆ. ಟೂರ್ನಿಯುದ್ದಕ್ಕೂ ಉತ್ತಮ ಪ್ರದರ್ಶನ ನೀಡಿದ್ದ ಶೆಫಾಲಿ ವರ್ಮಾ ಕೇವಲ 2 ರನ್ಗಳಿಗೆ ಔಟ್ ಆಗುವ ಮೂಲಕ ನಿರಾಸೆ ಮೂಡಿಸಿದ್ರು.
ಸ್ಮೃತಿ ಮಂಧಾನ ಕೂಡ 11 ರನ್ಗಳಿಸಿ ಪೆವಿಲಿಯನ್ ಸೇರಿಕೊಂಡ್ರು. ನಾಯಕಿ ಹರ್ಮನ್ ಪ್ರೀತ್ ಕೌರ್, ತಾನಿಯಾ ಭಾಟಿಯಾ, ರೋಡ್ರಿಗಸ್ ಕೂಡ ಬಂದಷ್ಟೇ ವೇಗವಾಗಿ ಪೆವಿಲಿಯನ್ನತ್ತ ಹೆಜ್ಜೆ ಹಾಕಿದರು. ದೀಪ್ತಿ ಶರ್ಮಾ (33), ವೇದಾ ಕೃಷ್ಣಮೂರ್ತಿ(19) ರಿಚಾ ಘೋಷ್ 18 ರನ್ ಗಳಿಸಿದ್ದು ಬಿಟ್ಟರೆ, ಯಾವೊಬ್ಬ ಆಟಗಾರ್ತಿಯರು ಕೂಡ ಆಸೀಸ್ ಬೌಲರ್ಗಳಿಗೆ ಪ್ರತಿರೋಧ ತೋರಲಿಲ್ಲ.