ಶಾರ್ಜಾ:ಸುದೀರ್ಘ ಸಮಯದ ನಂತರ ಭಾರತೀಯ ಮಹಿಳಾ ಕ್ರಿಕೆಟಿಗರು ಟಿ20 ಚಾಲೆಂಜ್ ಮೂಲಕ ಮತ್ತೆ ಮೈದಾನಕ್ಕೆ ಕಣಕ್ಕಿಳಿಯಲಿದ್ದಾರೆ. ಈ 4 ಪಂದ್ಯಗಳಲ್ಲಿ ಟೂರ್ನಿಯಲ್ಲಿ ಭಾರತ ತಂಡದ ಪ್ರಸಿದ್ಧ ಆಟಗಾರ್ತಿಯರು ಭಾಗವಹಿಸಲಿದ್ದಾರೆ.
ಮಹಿಳಾ ಟಿ20 ಚಾಲೆಂಜ್ ನವೆಂಬರ್ 4 ರಿಂದ 9ರವರೆಗೆ ಶಾರ್ಜಾದಲ್ಲಿ ನಡೆಯಲಿದೆ. ಈ ಟೂರ್ನಿಯಲ್ಲಿ ಟ್ರೈಲ್ಬ್ಲೇಜರ್ಸ್, ಸೂಪರ್ನೊವಾಸ್ ಹಾಗೂ ವೆಲಾಸಿಟಿ ತಂಡಗಳು ಭಾಗವಹಿಸಲಿವೆ. ಈ ತಂಡಗಳನ್ನು ಕ್ರಮವಾಗಿ ಸ್ಮೃತಿ ಮಂಧಾನ, ಹರ್ಮನ್ಪ್ರೀತ್ ಕೌರ್ ಹಾಗೂ ಮಿಥಾಲಿ ರಾಜ್ ಮುನ್ನಡೆಸಲಿದ್ದಾರೆ.
ಈ ಟೂರ್ನಮೆಂಟ್ಗೂ ಮುನ್ನ ಟೂರ್ನಿಯಲ್ಲಿ ಮಿಂಚಬಹುದಾದ ಟಾಪ್ 5 ಆಟಗಾರರನ್ನು ಇಲ್ಲಿ ನೋಡಬಹುದು.
ಮಿಥಾಲಿ ರಾಜ್(ವೆಲಾಸಿಟಿ)
ಮಹಿಳಾ ಕ್ರಿಕೆಟ್ ಜಗತ್ತಿನಲ್ಲಿ ಅತ್ಯುತ್ತಮ ಆಟಗಾರ್ತಿಯರಲ್ಲಿ ಒಬ್ಬರಾಗಿರುವ ಮಿಥಾಲಿರಾಜ್ ವೆಲಾಸಿಟಿ ತಂಡದ ನಾಯಕಿಯಾಗಿದ್ದಾರೆ. 37 ವರ್ಷದ ಆಟಗಾರ್ತಿ 2019 ಮಾರ್ಚ್ನಲ್ಲಿ ತಮ್ಮ ಕೊನೆಯ ಅಂತಾರಾಷ್ಟ್ರೀಯ ಪಂದ್ಯವನ್ನಾಡಿದ್ದರು. ಅವರು 89 ಟಿ20 ಪಂದ್ಯಗಳಲ್ಲಿ 2364 ರನ್ಗಳಿಸಿದ್ದಾರೆ. ಅವರ ಗರಿಷ್ಠ ಸ್ಕೋರ್ 87 ಆಗಿದೆ.
ಶೆಫಾಲಿ ವರ್ಮಾ(ವೆಲಾಸಿಟಿ)
ಟಿ20 ಕ್ರಿಕೆಟ್ನಲ್ಲಿ ಕ್ರಿಸ್ಗೇಲ್ ರೀತಿ ಬ್ಯಾಟಿಂಗ್ ಮಾಡುವ ಯುವ ಆಟಗಾರ್ತಿ ತಮ್ಮ ಸ್ಫೋಟಕ ಬ್ಯಾಟಿಂಗ್ಅನ್ನು ಟೂರ್ನಮೆಂಟ್ನಲ್ಲಿ ಮುಂದುವರಿಸಲಿದ್ದಾರೆ ಎಂಬ ನಿರೀಕ್ಷೆಯಿದೆ. 16 ವರ್ಷದ ಯುವ ಆಟಗಾರ್ತಿ ಭಾರತದ ಪರ ಟಿ20 ಕ್ರಿಕೆಟ್ ಆಡಿದ ಕಿರಿಯ ಆಟಗಾರ್ತಿ ಎಂಬ ದಾಖಲೆಗೆ ಪಾತ್ರರಾಗಿದ್ದರು. ಟಿ20 ವಿಶ್ವಕಪ್ನಲ್ಲಿ ಅಬ್ಬರಿಸುವ ಮೂಲಕ ಟಿ20 ಶ್ರೇಯಾಂಕದಲ್ಲಿ ನಂಬರ್ ಒನ್ ಸ್ಥಾನಕ್ಕೇರಿದ್ದರು. ಟಿ20 ವಿಶ್ವಕಪ್ನಲ್ಲಿ ಶೆಫಾಲಿ ಗರಿಷ್ಠ ಸಿಕ್ಸರ್ಗಳಿಸಿದ ಬ್ಯಾಟರ್ ಎನಿಸಿಕೊಂಡಿದ್ದರು.