ಮುಂಬೈ: ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಹರ್ಮನ್‌ಪ್ರೀತ್ ಕೌರ್, ಸ್ಮೃತಿ ಮಂಧಾನ ಮತ್ತು ಮಿಥಾಲಿ ರಾಜ್ ಅವರನ್ನು ಕ್ರಮವಾಗಿ ಸೂಪರ್ನೋವಾಸ್, ಟ್ರೈಲ್‌ಬ್ಲೇಜರ್ಸ್ ಮತ್ತು ವೆಲಾಸಿಟಿಯ ನಾಯಕಿಯನ್ನಾಗಿ ಘೋಷಿಸಿದೆ.
ಯುಎಇಯಲ್ಲಿ ನವೆಂಬರ್ 4 ರಿಂದ ನವೆಂಬರ್ 9 ರವರೆಗೆ ನಡೆಯಲಿರುವ ಮಹಿಳಾ ಟಿ-20 ಚಾಲೆಂಜ್‌ನಲ್ಲಿ ಈ ಮೂರು ತಂಡಗಳು ಸ್ಪರ್ಧಿಸಲಿವೆ. ನಾಲ್ಕು ಪಂದ್ಯಗಳ ಟೂರ್ನಿಯಲ್ಲಿ ಭಾರತೀಯ ಮಹಿಳಾ ಕ್ರಿಕೆಟ್ ತಂಡದ ಆಟಗಾರ್ತಿಯರು, ಇಂಗ್ಲೆಂಡ್, ದಕ್ಷಿಣ ಆಫ್ರಿಕಾ, ಶ್ರೀಲಂಕಾ, ವೆಸ್ಟ್ ಇಂಡೀಸ್, ಬಾಂಗ್ಲಾದೇಶ ಮತ್ತು ನ್ಯೂಜಿಲೆಂಡ್‌ನ ಕೆಲವು ಪ್ರಮುಖ ತಾರೆಯರು ಇರಲಿದ್ದಾರೆ.
ಮಾಜಿ ಎಡಗೈ ಸ್ಪಿನ್ನರ್ ನೀತು ಡೇವಿಡ್ ನೇತೃತ್ವದಲ್ಲಿ ಬಿಸಿಸಿಐ ಹೊಸ ಮಹಿಳಾ ಆಟಗಾರರ ಆಯ್ಕೆ ಸಮಿತಿಯನ್ನು ತಂಡವನ್ನು ಆಯ್ಕೆ ಮಾಡಿದೆ.
ಸೂಪರ್ನೋವಾಸ್: ಹರ್ಮನ್‌ಪ್ರೀತ್ ಕೌರ್ (ನಾಯಕಿ), ಜೆಮಿಮಾ ರೋಡ್ರಿಗಸ್ (ಉಪ ನಾಯಕಿ) ಚಮರಿ ಅಟಪಟ್ಟು, ಪ್ರಿಯಾ ಪುನಿಯಾ, ಅನುಜಾ ಪಾಟೀಲ್, ರಾಧಾ ಯಾದವ್, ತಾನಿಯಾ ಭಾಟಿಯಾ (ಕೀಪರ್), ಶಶಿಕಲಾ ಸಿರಿವರ್ಧನೆ, ಪೂನಮ್ ಯಾದವ್, ಶಕೇರಾ ಸೆಲ್ಮನ್, ಅರುಂಧತಿ ರೆಡ್ಡಿ, ಪೂಜಾ ವಸ್ತ್ರಕರ್, ಆಯುಶಿ ಸೋನಿ, ಅಯಬೊಂಗಾ ಖಾಕಾ, ಮುಸ್ಕನ್ ಮಲಿಕ್
ಟ್ರೈಲ್‌ಬ್ಲೇಜರ್ಸ್: ಸ್ಮೃತಿ ಮಂಧಾನ (ನಾಯಕಿ), ದೀಪ್ತಿ ಶರ್ಮಾ (ಉಪ ನಾಯಕಿ), ಪುನಮ್ ರಾವತ್, ರಿಚಾ ಘೋಷ್, ಡಿ. ಹೇಮಲತಾ, ನುಜಾತ್ ಪಾರ್ವೀನ್ (ಕೀಪರ್), ರಾಜೇಶ್ವರಿ ಗಾಯಕ್ವಾಡ್, ಹರ್ಲೀನ್ ಡಿಯೋಲ್, ಜುಲಾನ್ ಗೋಸ್ವಾಮಿ, ಸಿಮರನ್ ದಿಲ್ ಬಹದ್ದೂರ್, ಸಲ್ಮಾ ಖತುನ್, ಸೋಫಿ ಎಕ್ಲೆಸ್ಟೋನ್, ನಥಕನ್ ಚಾಂಥಮ್, ದಿಯಾಂಡ್ರಾ ದೊಟ್ಟಿನ್, ಕಾಶ್ವೀ ಗೌತಮ್
ವೆಲಾಸಿಟಿ: ಮಿಥಾಲಿ ರಾಜ್ (ನಾಯಕಿ), ವೇದ ಕೃಷ್ಣಮೂರ್ತಿ (ಉಪ ನಾಯಕಿ), ಶಫಾಲಿ ವರ್ಮಾ, ಸುಷ್ಮಾ ವರ್ಮಾ (ಕೀಪರ್), ಏಕ್ತಾ ಬಿಶ್ತ್, ಮಾನ್ಸಿ ಜೋಶಿ, ಶಿಖಾ ಪಾಂಡೆ, ದೇವಿಕಾ ವೈದ್ಯ, ಸುಶ್ರೀ ದಿಬ್ಯಾದರ್ಶಿನಿ, ಮನಾಲಿ ದಕ್ಷಿಣಿ, ಲೇ ಕಾಸ್ಪೆರೆಕ್, ಡೇನಿಯಲ್ ವ್ಯಾಟ್, ಸುನೆ ಲೂಸ್, ಜಹನಾರಾ ಅಲಂ, ಎಂ.ಅನಘಾ.
ಕಳೆದ ವರ್ಷದ ಫೈನಲಿಸ್ಟ್ಗಳಾದ ಸೂಪರ್ನೋವಾಸ್ ಮತ್ತು ವೆಲಾಸಿಟಿ ತಂಡಗಳು 2020ರ ಮಹಿಳಾ ಟಿ-20 ಚಾಲೆಂಜ್ನ ಮೊದಲ ಪಂದ್ಯದಲ್ಲಿ ಮುಖಾಮುಖಿ ಆಗಲಿವೆ