ಕರ್ನಾಟಕ

karnataka

ETV Bharat / sports

ರೋಹಿತ್​ ಹೆಸರಿಗೆ ಸೇರಿತು ಮತ್ತೊಂದು ವಿಶ್ವದಾಖಲೆ... ಹಿಟ್​​ಮ್ಯಾನ್​​ ಈಗ ಸಿಕ್ಸರ್​ ಕಿಂಗ್​!

​ರೋಹಿತ್ ಶರ್ಮಾ​ ವಿಂಡೀಸ್​ ವಿರುದ್ಧದ ಕೊನೆಯ ಟಿ20 ಪಂದ್ಯಕ್ಕೂ ಮುನ್ನ 399 ಸಿಕ್ಸರ್​ ಸಿಡಿಸಿ ಭಾರತದ ಪರ ಹೆಚ್ಚು ಸಿಕ್ಸರ್​ ಸಿಡಿಸಿದ ಬ್ಯಾಟ್ಸ್​ಮನ್​ ಎನಿಸಿಕೊಂಡಿದ್ದರು. ಇದೀಗ 400 ಸಿಕ್ಸರ್ ಸಿಡಿಸಿದ ಮೈಲಿಗಲ್ಲು ಕೂಡ ಅವರ ಹೆಸರಿಗೆ ಸೇರ್ಪಡೆಗೊಂಡಿದೆ. ರೋಹಿತ್​ ಏಕದಿನ ಕ್ರಿಕೆಟ್​ನಲ್ಲಿ 232, ಟಿ20 ಯಲ್ಲಿ 117 ಹಾಗೂ ಟೆಸ್ಟ್​ನಲ್ಲಿ 52 ಸಿಕ್ಸರ್​ ಬಾರಿಸಿದ್ದಾರೆ.

Rohit sharma most sixes
Rohit sharma most sixes

By

Published : Dec 11, 2019, 7:54 PM IST

Updated : Dec 12, 2019, 8:36 AM IST

ಮುಂಬೈ:ರೋಹಿತ್ ಶರ್ಮಾ ವಿಂಡೀಸ್​ ವಿರುದ್ಧದ ಕೊನೆಯ ಟಿ20 ಪಂದ್ಯದಲ್ಲಿ ವಿಂಡೀಸ್​ ವೇಗಿ ಕಾಟ್ರೆಲ್​ ಬೌಲ್​ಗೆ ಸಿಕ್ಸ್​ ಸಿಡಿಸುವ ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ 400 ಸಿಕ್ಸರ್​ ಸಿಡಿಸಿದ ಭಾರತದ ಮೊದಲ ಬ್ಯಾಟ್ಸ್​ಮನ್​ ಎನಿಸಿಕೊಂಡಿದ್ದಾರೆ.

​ರೋಹಿತ್​ ಈ ಪಂದ್ಯಕ್ಕೂ ಮುನ್ನ 399 ಸಿಕ್ಸರ್​ ಸಿಡಿಸಿ ಭಾರತದ ಪರ ಹೆಚ್ಚು ಸಿಕ್ಸರ್​ ಸಿಡಿಸಿದ ಬ್ಯಾಟ್ಸ್​ಮನ್​ ಎನಿಸಿಕೊಂಡಿದ್ದರು. ಇದೀಗ 400 ಸಿಕ್ಸರ್ ಸಿಡಿಸಿದ ಮೈಲಿಗಲ್ಲು ಕೂಡ ಅವರ ಹೆಸರಿಗೆ ಸೇರ್ಪಡೆಗೊಂಡಿತು. ರೋಹಿತ್​ ಏಕದಿನ ಕ್ರಿಕೆಟ್​ನಲ್ಲಿ 232, ಟಿ20 ಯಲ್ಲಿ 117 ಹಾಗೂ ಟೆಸ್ಟ್​ನಲ್ಲಿ 52 ಸಿಕ್ಸರ್​ ಬಾರಿಸಿದ್ದಾರೆ.

ಇನ್ನು, ರೋಹಿತ್​ ಶರ್ಮಾ(403*) ಹೊರತುಪಡಿಸಿದರೆ ಎಂ.ಎಸ್​.ಧೋನಿ 359, ಸಚಿನ್​ 264, ಯುವರಾಜ್​ 251, ಗಂಗೂಲಿ 247 ಸಿಕ್ಸರ್​ ಸಿಡಿಸಿದ ದಾಖಲೆ ಹೊಂದಿದ್ದಾರೆ.

ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ ವಿಂಡೀಸ್ ದಿಗ್ಗಜ ಕ್ರಿಸ್​ ಗೇಲ್​ 534, ಪಾಕಿಸ್ತಾನದ ಶಾಹಿದ್​ ಅಫ್ರಿದಿ 476 ಸಿಕ್ಸರ್​ ಸಿಡಿಸಿ ಮೊದಲೆರಡು ಸ್ಥಾನದಲ್ಲಿದ್ದಾರೆ.

Last Updated : Dec 12, 2019, 8:36 AM IST

ABOUT THE AUTHOR

...view details