ನವದೆಹಲಿ: ಕೋವಿಡ್ ನಿಯಮಗಳಿಂದಾಗಿ ಕ್ರಿಕೆಟಿಗರ ಕೈ ಕಟ್ಟಿ ಹಾಕಿದಂತಾಗಿದ್ದು, ಬಯೋ ಬಬಲ್ ನಲ್ಲಿ ಉಳಿದುಕೊಳ್ಳಲು ಕ್ರಿಕೆಟಿಗರು ಸಾಕಷ್ಟು ಹರಸಾಹಸ ಪಡಬೇಕು. ಇದು ನಿಜಕ್ಕೂ ಅವರಿಗೆ ದೊಡ್ಡ ಸವಾಲಿನ ಕೆಲಸವಾಗಿದೆ ಎಂದು ಕ್ರಿಕೆಟ್ ದಂತಕತೆ ಸಚಿನ್ ತೆಂಡೂಲ್ಕರ್ ಹೇಳಿದ್ದಾರೆ.
ಕೋವಿಡ್ ನಿಯಮಗಳಿಂದ ಕ್ರಿಕೆಟಿಗರು ಹಲವು ಸಮಸ್ಯೆಗೆ ಸಿಲುಕಿದ್ದು, ಲಾಲಾರಸ ಬಳಸುವುದನ್ನು ನಿಷೇಧಿಸಿರುವುದು ಬೌಲರ್ಗಳ ಕೈ ಕಟ್ಟಿಹಾಕಿದೆ ಎಂದಿದ್ದಾರೆ.
ಚೆಂಡಿಗೆ ಲಾಲಾರಸ ಹಾಕುವ ಮೂಲಕ ಬೌಲರ್ಗಳು ಹಿಡಿತ ಸಾಧಿಸುತ್ತಿದ್ದರು. ಆದರೆ ಲಾಲಾರಸ ಬಳಕೆಯ ನಿಷೇಧದಿಂದಾಗಿ ಚೆಂಡಿನ ಮೇಲಿನ ಹಿಡಿತ ಸಾಧಿಸಲಾಗದೇ ಬೌಲರ್ಗಳು ಪರದಾಡುತ್ತಿದ್ದಾರೆ. ಜಸ್ಪ್ರೀತ್ ಬುಮ್ರಾ ರಂತಹ ವೇಗದ ಬೌಲರ್ಗಳಿಗೆ ಅನಾನುಕೂಲವಾಗುತ್ತಿದ್ದು, ಈ ನಿಯಮ ನಿಜಕ್ಕೂ ಅವರನ್ನು ಅಂಗವಿಕಲರನ್ನಾಗಿ ಮಾಡಿದೆ ಎಂದಿದ್ದಾರೆ.
ಚೆಂಡಿಗೆ ಲಾಲಾರಸ ಹಚ್ಚುವುದರಿಂದ ಚೆಂಡಿನ ಮೇಲೆ ಹಿಡಿತ ಸಾಧಿಸಿ ಸ್ವಿಂಗ್ ಮಾಡಬಹುದು. ಆದರೆ, ನಿಷೇಧದಿಂದ ಬೌಲರ್ಗಳ ಪ್ರಮುಖ ಅಂಗವನ್ನೇ ಕಸಿದಂತಾಗಿದೆ ಎಂದಿದ್ದಾರೆ.