ಕರ್ನಾಟಕ

karnataka

ETV Bharat / sports

ಪೂಜಾರ ಮತ್ತೊಮ್ಮೆ ದ್ವಿಶತಕ ಬಾರಿಸಲಿ; ಅಮಿತ್ ಶಾ ಹಾರೈಕೆ - ಇಂಗ್ಲೆಂಡ್ vs ಭಾರತ ಟೆಸ್ಟ್​ ಸರಣಿ

ಪೂಜಾರ ಕೊನೆಯ ಬಾರಿ ಇಂಗ್ಲೆಂಡ್ ವಿರುದ್ಧ ಅಹ್ಮದಾಬಾದ್​ನಲ್ಲಿ ಆಡಿದ ಸಂದರ್ಭದಲ್ಲಿ ಪೂಜಾರ ದ್ವಿಶತಕ ಸಿಡಿಸಿದ್ದರು. ಇದೀಗ ಅಮಿತ್ ಶಾ ಬಲಗೈ ಬ್ಯಾಟ್ಸ್​ಮನ್​ಗೆ ಮತ್ತೆ ಅದೇ ಸಾಧನೆಯನ್ನು ಮರುಕಳಿಸಬೇಕೆಂದು ಶುಭಕೋರಿದ್ದಾರೆ.

ಚೇತೇಶ್ವರ್ ಪೂಜಾರ
ಚೇತೇಶ್ವರ್ ಪೂಜಾರ

By

Published : Feb 24, 2021, 4:52 PM IST

ಅಹ್ಮದಾಬಾದ್: ಇಲ್ಲಿನ ನರೇಂದ್ರ ಮೋದಿ ಸ್ಟೇಡಿಯಂ ನಲ್ಲಿ ಇಂಗ್ಲೆಂಡ್ ವಿರುದ್ಧದ ಪಿಂಕ್​ ಬಾಲ್​ ಟೆಸ್ಟ್​ ಪಂದ್ಯದಲ್ಲಿ ಚೇತೇಶ್ವರ್​ ಪೂಜಾರ ದ್ವಿಶತಕ ಬಾರಿಸಿ ಭಾರತದ ಗೆಲುವಿಗೆ ನೆರವಾಗುವುದನ್ನು ನೋಡಲು ಆಶಿಸುತ್ತೇನೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ತಿಳಿಸಿದ್ದಾರೆ.

ನರೇಂದ್ರ ಮೋದಿ ಸ್ಟೇಡಿಯಂ ಉದ್ಘಾಟನೆ ಸಮಾರಂಭದಲ್ಲಿ ಮಾತನಾಡಿದ ಅಮಿತ್ ಶಾ

"ಈ ಕ್ರೀಡಾಂಗಣ ಜಾವಗಲ್ ಶ್ರೀನಾಥ್​ ಅವರಿಗೆ ತುಂಬಾ ಸ್ಮರಣೀಯವಾದದ್ದು. ಅವರು ಇಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ 6 ವಿಕೆಟ್ ತೆಗೆದುಕೊಂಡಿದ್ದರು. ಇದೇ ಕ್ರೀಡಾಂಗಣದಲ್ಲಿ ಕಪಿಲ್​ ದೇವ್,​ ರಿಚರ್ಡ್​ ಹ್ಯಾಡ್ಲಿ ಅವರ ಗರಿಷ್ಠ ವಿಕೆಟ್​ ದಾಖಲೆಯನ್ನು ಸರಿಗಟ್ಟಿದ್ದರು. ಇದೇ ಮೈದಾನದಲ್ಲಿ ಸುನೀಲ್​ ಗವಾಸ್ಕರ್​ ಟೆಸ್ಟ್​ ಕ್ರಿಕೆಟ್​ನಲ್ಲಿ 10,000 ರನ್​ ಮೈಲುಗಲ್ಲನ್ನು ಸ್ಥಾಪಿಸಿದ್ದರು. ಇದೇ ಮೈದಾನದಲ್ಲಿ ಸಚಿನ್​ ತೆಂಡೂಲ್ಕರ್​ ಏಕದಿನ ಕ್ರಿಕೆಟ್​ನಲ್ಲಿ 18,000 ರನ್ ಮತ್ತು ಕ್ರಿಕೆಟ್​ನಲ್ಲಿ 20 ವರ್ಷ ಪೂರೈಸಿದ್ದರು. ಹಾಗಾಗಿ ಪೂಜಾರ ದ್ವಿಶತ ಸಿಡಿಸಿ ಇಂಗ್ಲೆಂಡ್​ ವಿರುದ್ಧ ಭಾರತ ಗೆಲ್ಲಲು ನೆರವಾಗಬೇಕೆಂದು ನಾನು ಆಶಿಸುತ್ತೇನೆ" ಎಂದು ಅಮಿತ್ ಶಾ ನರೇಂದ್ರ ಮೋದಿ ಸ್ಟೇಡಿಯಂ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡುತ್ತ ತಿಳಿಸಿದ್ದಾರೆ.

ಕೊನೆಯ ಬಾರಿ ಇಂಗ್ಲೆಂಡ್ ವಿರುದ್ಧ ಅಹ್ಮದಾಬಾದ್​ನಲ್ಲಿ ಆಡಿದ ಸಂದರ್ಭದಲ್ಲಿ ಪೂಜಾರ ದ್ವಿಶತಕ ಸಿಡಿಸಿದ್ದರು. ಇದೀಗ ಅಮಿತ್ ಶಾ ಬಲಗೈ ಬ್ಯಾಟ್ಸ್​ಮನ್​ಗೆ ಮತ್ತೆ ಅದೇ ಸಾಧನೆಯನ್ನು ಮರುಕಳಿಸಬೇಕೆಂದು ಶುಭಕೋರಿದ್ದಾರೆ.

ಬುಧವಾರ ನವೀಕರಣಗೊಂಡ ಮೊಟೆರಾ ಸ್ಟೇಡಿಯಂ ಅನ್ನು ನರೇಂದ್ರ ಮೋದಿ ಸ್ಟೇಡಿಯಂ ಎಂದು ಮರು ನಾಮಕರಣ ಮಾಡಲಾಗಿತ್ತು. ರಾಷ್ಟ್ರಪತಿ ರಾಮನಾಥ್ ಕೋವಿಂದ್ ಭಾರತ ಮತ್ತು ಇಂಗ್ಲೆಂಡ್​ ನಡುವಿನ ಡೇ ಅಂಡ್ ನೈಟ್ ಟೆಸ್ಟ್​ಗೂ ಮುನ್ನ​ ಈ ಸ್ಟೇಡಿಯಂ ಉದ್ಘಾಟನೆ ಮಾಡಿದ್ದರು. ಕ್ರೀಡಾ ಸಚಿವ ಕಿರಣ್ ರಿಜಿಜು, ಬಿಸಿಸಿಐ ಕಾರ್ಯದರ್ಶಿ ಜಯ್ ಶಾ, ಖಜಾಂಚಿ ಅರುಣ್ ಧುಮಾಲ್, ಬಿಸಿಸಿಐ ಉಪಾಧ್ಯಕ್ಷ ರಾಜೀವ್ ಶುಕ್ಲಾ ಉಪಸ್ಥಿತರಿದ್ದರು.

ABOUT THE AUTHOR

...view details