ಒಂಟಾರಿಯೋ: ಕಳೆದ ಬಾರಿಗಿಂತ ಹೆಚ್ಚು ಸದ್ದು ಮಾಡಿದ ಕೆನಡಾದ ಗ್ಲೋಬಲ್ ಟಿ-20 ಲೀಗ್ಗೆ ತೆರೆಬಿದ್ದಿದ್ದು ರಿಯಾದ್ ಎಮ್ರಿಟ್ ನೇತೃತ್ವದ ವಿನ್ನಿಂಗ್ ಹಾಕ್ಸ್ ಸೂಪರ್ ಓವರ್ನಲ್ಲಿ ಶೋಯಬ್ ಮಲಿಕ್ ನೇತೃತ್ವದ ವಾಂಕೋವರ್ ನೈಟ್ಸ್ ವಿರುದ್ಧ ಗೆಲುವು ದಾಖಲಿಸಿ ಚಾಂಪಿಯನ್ ಆಗಿ ಹೊರಹೊಮ್ಮಿದೆ.
2018ರ ಆವೃತ್ತಿಯಲ್ಲಿ ಕೇವಲ ವಿಂಡೀಸ್ ಆಟಗಾರರು ಸ್ಥಳೀಯ ಆಟಗಾರರು ಇದ್ದರು. ಆದರೆ, ಈ ಬಾರಿ ಭಾರತದ ಯುವರಾಜ್ ಸಿಂಗ್, ಪಾಕಿಸ್ತಾನ ಶಾಹಿದ್ ಆಫ್ರಿದಿ, ಮಲಿಕ್, ಶದಾಬ್ ಖಾನ್, ದಕ್ಷಿಣ ಆಫ್ರಿಕಾದ ಮ್ಯಾರ್ಕ್ರಮ್, ಡುಮಿನಿ, ಆಸೀಸ್ನ ಕ್ರಿಸ್ ಲಿನ್, ಕಿವೀಸ್ನ ಸೋಧಿ, ನಿಶಾಮ್ ಸೇರಿದಂತೆ ವಿಶ್ವದ ಎಲ್ಲ ತಂಡಗಳ ಪ್ರಮುಖ ಆಟಗಾರರು ಪಾಲ್ಗೊಳ್ಳುವ ಮೂಲಕ ಟೂರ್ನಿಗೆ ಮೆರುಗು ತಂದುಕೊಟ್ಟಿದ್ದರು.
17 ದಿನಗಳ ಕಾ ನಡೆದ ಟೂರ್ನಿಯಲ್ಲಿ 6 ತಂಡಗಳು ಭಾಗವಹಿಸಿದ್ದವು. ಭಾನುವಾರ ಹಾಲಿ ಚಾಂಪಿಯನ್ ವಾಂಕೋವರ್ ನೈಟ್ಸ್ ತಂಡವನ್ನು ಸೂಪರ್ ಓವರ್ನಲ್ಲಿ ವಿನ್ನಿಂಗ್ ಹಾಕ್ಸ್ ಮಣಿಸಿ ನೂತನ ಚಾಂಪಿಯನ್ ಆಗಿ ಹೊರ ಹೊಮ್ಮಿತು.