ಕ್ರೈಸ್ಟ್ಚರ್ಚ್:ನಾಯಕ ಕೇನ್ ವಿಲಿಯಮ್ಸನ್ ಹಾಗೂ ಹೆನ್ರಿ ನಿಕೋಲ್ಸ್ ಅವರ ಭರ್ಜರಿ ಶತಕದ ನೆರವಿನಿಂದ ಪಾಕಿಸ್ತಾನ ವಿರುದ್ಧದ ಎರಡನೇ ಟೆಸ್ಟ್ನಲ್ಲೂ ಅತಿಥೇಯ ನ್ಯೂಜಿಲ್ಯಾಂಡ್ ಪ್ರಾಬಲ್ಯ ಸಾಧಿಸಿದೆ.
ಎರಡನೇ ದಿನ 3 ವಿಕೆಟ್ ಕಳೆದುಕೊಂಡು 283 ರನ್ಗಳಿಸಿದ್ದ ನ್ಯೂಜಿಲ್ಯಾಂಡ್ 3ನೇ ದಿನ 6 ಕಳೆದುಕೊಂಡು 659 ರನ್ಗಳಿಸಿ ಡಿಕ್ಲೇರ್ ಘೋಷಿಸಿಕೊಂಡಿತು. ಸೋಮವಾರ 112 ರನ್ಗಳಿಸಿದ್ದ ವಿಲಿಯಮ್ಸನ್ ಇಂದು 238 ರನ್ ಸಿಡಿಸಿ ಟೆಸ್ಟ್ ಕ್ರಿಕೆಟ್ನಲ್ಲಿ ಮೆಕಲಮ್ ಜೊತೆ ಗರಿಷ್ಠ ದ್ವಿಶತಕ ಸಿಡಿಸಿದ ಕಿವೀಸ್ ಬ್ಯಾಟ್ಸ್ಮನ್ ಎಂಬ ದಾಖಲೆಗೆ ಪಾತ್ರರಾದರು.
ಇವರಿಗೆ ಸಾಥ್ ನೀಡಿದ ಹೆನ್ರಿ ನಿಕೋಲ್ಸ್ 157 , ಡೆರಿಲ್ ಮಿಚೆಲ್ ಅಜೇಯ 102 ಹಾಗೂ ಕೈಲ್ ಜೆಮೀಸನ್ ಅಜೇಯ 30 ರನ್ಗಳಿಸಿ ಬೃಹತ್ ಮೊತ್ತಕ್ಕೆ ಕಾರಣರಾದರು. ಕಿವೀಸ್ ತಂಡ 362 ರನ್ಗಳ ಬೃಹತ್ ಮೊದಲ ಇನ್ನಿಂಗ್ಸ್ ಮುನ್ನಡೆ ಪಡೆದುಕೊಂಡಿದೆ.
ಮೊದಲ ಇನ್ನಿಂಗ್ಸ್ನಲ್ಲಿ 297 ರನ್ಗಳಿಸಿದ್ದ ಪಾಕ್ 362 ರನ್ಗಳ ಇನ್ನಿಂಗ್ಸ್ ಹಿನ್ನಡೆಯೊಂದಿಗೆ ಎರಡನೇ ಇನ್ನಿಂಗ್ಸ್ ಆರಂಭಿಸಿದ್ದು ಆರಂಭಿಕ ಶಾನ್ ಮಸೂದ್ ವಿಕೆಟ್ ಕಳೆದುಕೊಂಡಿದೆ. ಪ್ರಸ್ತುತ ಅಬೀದ್ ಅಲಿ 7 ಮತ್ತು ಮೊಹಮ್ಮದ್ ಅಬ್ಬಾಸ್ 1 ರನ್ಗಳಿಸಿ ಕ್ರೀಸ್ನಲ್ಲಿದ್ದಾರೆ. ಇನ್ನು ಎರಡು ದಿನಗಳ ಆಟ ಬಾಕಿಯುಳಿದಿದ್ದು ಪಾಕಿಸ್ತಾನಕ್ಕೆ ಇನ್ನಿಂಗ್ಸ್ ಸೋಲು ತಪ್ಪಿಸಿಕೊಳ್ಳುವುದೊಂದೆ ದಾರಿಯಾಗಿದೆ.
ಇದನ್ನು ಓದಿ: ಪಾಕ್ ವಿರುದ್ಧ 2ನೇ ದ್ವಿಶತಕ ಸಿಡಿಸಿದ ಕೇನ್ : ನ್ಯೂಜಿಲ್ಯಾಂಡ್ ಪರ ಮತ್ತೊಂದು ದಾಖಲೆ ಬರೆದ ವಿಲಿಯಮ್ಸನ್