ಕರ್ನಾಟಕ

karnataka

By

Published : Jan 16, 2021, 4:06 PM IST

ETV Bharat / sports

ರಿಷಭ್​ ಪಂತ್ ಜೊತೆ ಕಾದಾಟಕ್ಕೆ ಕಾಯುತ್ತಿರುವೆ: ನಾಥನ್​ ಲಿಯಾನ್​

ಪ್ರಸ್ತುತ ಬಾರ್ಡರ್​ ಗವಾಸ್ಕರ್​ ಟ್ರೋಫಿಯ 4ನೇ ಪಂದ್ಯ ನಾಥನ್ ಲಿಯಾನ್ ಪಾಲಿನ 100 ಟೆಸ್ಟ್​ ಪಂದ್ಯವಾಗಿದೆ. ಸರಣಿ ನಿರ್ಣಾಯಕವಾದ ಈ ಮಹತ್ವದ ಪಂದ್ಯದಲ್ಲಿ​ ಲಿಯಾನ್​ ತಮ್ಮ 397ನೇ ವಿಕೆಟ್​ ಆಗಿ ಭಾರತದ ಆರಂಭಿಕ ಬ್ಯಾಟ್ಸ್​ಮನ್​ ರೋಹಿತ್ ಶರ್ಮಾ ಅವರನ್ನು ಔಟ್​ ಮಾಡಿದರು.

ನಾಥನ್ ಲಿಯಾನ್ vs  ಪಂತ್
ನಾಥನ್ ಲಿಯಾನ್ vs ಪಂತ್

ಬ್ರಿಸ್ಬೇನ್​: ಭಾರತ ತಂಡದ ವಿಕೆಟ್​ ಕೀಪರ್​, ಬ್ಯಾಟ್ಸ್​ಮನ್​ ರಿಷಭ್​ ಅವರೊಂದಿಗಿನ ಕಾಳಗಕ್ಕಾಗಿ ನಾನು ಎದುರು ನೋಡುತ್ತಿದ್ದೇನೆ ಎಂದು ಆಸೀಸ್​ ಸ್ಪಿನ್ನರ್​ ನಾಥನ್ ಲಿಯಾನ್ ತಿಳಿಸಿದ್ದಾರೆ.

ಪ್ರಸ್ತುತ ಬಾರ್ಡರ್​ ಗವಾಸ್ಕರ್​ ಟ್ರೋಫಿಯ 4ನೇ ಪಂದ್ಯ ನಾಥನ್ ಲಿಯಾನ್ ಪಾಲಿನ 100ನೇ ಟೆಸ್ಟ್​ ಪಂದ್ಯವಾಗಿದೆ. ಸರಣಿ ನಿರ್ಣಾಯಕವಾದ ಈ ಮಹತ್ವದ ಪಂದ್ಯದಲ್ಲಿ​ ಲಿಯಾನ್​ ತಮ್ಮ 397ನೇ ವಿಕೆಟ್​ ಆಗಿ ಭಾರತದ ಆರಂಭಿಕ ಬ್ಯಾಟ್ಸ್​ಮನ್​ ರೋಹಿತ್ ಶರ್ಮಾ ಅವರನ್ನು ಔಟ್​ ಮಾಡಿದರು.

"ಈದಿನ ಮತ್ತು ನಿನ್ನೆ 3ನೇ ದಿನದ ವಿಕೆಟ್​ನಂತೆಯೇ ಇತ್ತು. ಆಫ್​ ಸ್ಟಂಪ್​ನ ಹೊರಗೆ ಉತ್ತಮ ಬಿರುಕಿದ್ದು, ನಾನು ಅದನ್ನು ಗುರಿಯಾಗಿಸಿ ಬೌಲಿಂಗ್ ಮಾಡಲು ಪ್ರಯತ್ನಿಸುತ್ತಿದ್ದೇನೆ. ನನ್ನ ನೈಸರ್ಗಿಕ ಬೌಲಿಂಗ್ ಪೇನ್​ನ ಬಲಗೈ ಗ್ಲೌಸ್​ ಆಗಿದ್ದು, ಅದು ಆಫ್​ ಸ್ಟಂಪ್​ನ ಹೊರಗೆ ಒಂದು ಅಡಿಯಲ್ಲಿದೆ. ಪಿಚ್​ನಲ್ಲಿ ಸ್ವಲ್ಪ ಬಿರುಕಿರುವುದು ನನಗೆ ಸಂತೋಷವಾಗಿದೆ. ಇದರಿಂದ ನನಗೇನಾದರೂ ಅನುಕೂಲವಾಗಬಹುದು ಎಂಬ ಆಶಾವಾದದಲ್ಲಿದ್ದೇನೆ" ಎಂದು ಲಿಯಾನ್​ ವರ್ಚುವಲ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಇದೇ ಸಂದರ್ಭದಲ್ಲಿ ಮೂರನೇ ಟೆಸ್ಟ್​ನಲ್ಲಿ ಸಿಕ್ಕ ಒಂದೆರಡು ಜೀವದಾನಗಳನ್ನು ಸದುಪಯೋಗಪಡಿಸಿಕೊಂಡು ತಮ್ಮ ಬೌಲಿಂಗ್​ಗೆ ಹಿಗ್ಗಾಮುಗ್ಗ ಬಾರಿಸಿದ್ದ ರಿಷಭ್​ ಪಂತ್​ ಬಗ್ಗೆಯೂ ಮಾತನಾಡಿದ್ದು ಅವರ ಜೊತೆಗಿನ ಹೋರಾಟಕ್ಕಾಗಿ ಎದುರು ನೋಡುತ್ತಿರುವುದಾಗಿ ತಿಳಿಸಿದ್ದಾರೆ.

"ರಿಷಭ್​ ಯಾವಾಗಲೂ ನನ್ನ ಬೌಲಿಂಗ್ ದಂಡಿಸಲು ಪ್ರಯತ್ನಿಸುತ್ತಾರೆ, ಅವರಿಗೆ ಬೌಲಿಂಗ್ ಮಾಡುವುದಕ್ಕೆ ಕಾಯುತ್ತಿದ್ದೇನೆ. ಅವರೊಂದಿಗಿನ ಕಾದಾಟ ನಿಜಕ್ಕೂ ಅದ್ಭುತವಾಗಿರುತ್ತದೆ." ಎಂದು ಲಿಯಾನ್ ಹೇಳಿದ್ದಾರೆ.

ಇದನ್ನು ಓದಿ:ಅನಗತ್ಯ ಹೊಡೆತಕ್ಕೆ ಮುಂದಾಗಿ ವಿಕೆಟ್ ಒಪ್ಪಿಸಿದ ರೋಹಿತ್: ಸುನೀಲ್ ಗವಾಸ್ಕರ್ ಆಕ್ರೋಶ

ABOUT THE AUTHOR

...view details