ಚೆನ್ನೈ:ಭಾರತ ತಂಡದಲ್ಲಿ ಧೋನಿ ನಿವೃತ್ತಿ ಕುರಿತು ವಿವಾದ ಕೇಳಿಬರುತ್ತಿದೆ. ಆದರೆ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಧೋನಿಯೇ ನಾಯಕರಾಗಿ ಮುಂದುವರೆಯಲಿದ್ದಾರೆ ಎಂದು ಸಿಎಸ್ಕೆ ದೃಢಪಡಿಸಿದೆ.
2019ರ ವಿಶ್ವಕಪ್ ಧೋನಿ ಪಾಲಿಗೆ ಕೊನೆಯ ವಿಶ್ವಕಪ್ ಎಂದು ಈಗಾಗಲೇ ತಿಳಿದಿದೆ. ಆದರೆ ಅವರು ತಮ್ಮ ನಿವೃತ್ತಿಯ ಬಗ್ಗೆ ಇನ್ನೂ ಎಲ್ಲೂ ಬಾಯಿ ಬಿಟ್ಟಿಲ್ಲ. ಆದರೆ ಧೋನಿ ನಿವೃತ್ತಿಯ ವಿಚಾರ ಮಾತ್ರ ಎಲ್ಲಡೆ ಕೇಳಿಬರುತ್ತಿದೆ. ಕೆಲವು ದಿಗ್ಗಜರ ಅಭಿಪ್ರಾಯದಂತೆ ಧೋನಿ ಇನ್ನು ಒಂದೆರಡು ವರ್ಷ ಕ್ರಿಕೆಟ್ನಲ್ಲಿರಬೇಕು ಎಂಬುವುದಾದರೆ, ಮತ್ತೆ ಕೆಲವರು ಹೊಸಬರಿಗೆ ಅವಕಾಶ ಕೊಡುವ ದೃಷ್ಟಿಯಿಂದ ಧೋನಿ ನಿವೃತ್ತಿ ಘೋಷಿಸಬೇಕೆಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಆದರೆ ಧೋನಿ ನಾಯಕತ್ವದಲ್ಲಿ ಫೈನಲ್ ಪ್ರವೇಶಿಸಿದ್ದ ಸಿಎಸ್ಕೆ ತಂಡ ಮುಂಬೈ ವಿರುದ್ಧ ಸೋಲುವ ಮೂಲಕ ರನ್ನರ್ ಆಪ್ ಆಗಿತ್ತು. ಈ ಸಂದರ್ಭದಲ್ಲಿ ಮಾತನಾಡಿದ್ದ ಧೋನಿ ಮುಂದಿನ ವರ್ಷವೂ ನಾನು ಐಪಿಎಲ್ ಆಡುತ್ತೇನೆಂದು ತಿಳಿಸಿದ್ದರು. ಇದೀಗ ಧೋನಿ ಏನಾದರು ಕ್ರಿಕೆಟ್ಗೆ ನಿವೃತ್ತಿ ಘೋಷಿಸಿದರೆ ಐಪಿಎಲ್ನಲ್ಲಿ ಸಿಎಸ್ಕೆ ಬೇರೆ ನಾಯಕನನ್ನ ನೇಮಿಸಬೇಕಾಗುತ್ತದೆ ಎಂಬ ವಿಚಾರ ಕೇಳಿಬಂದಿದೆ.
ಇದಕ್ಕೆ ಸ್ಪಷ್ಟೀಕರಣ ನೀಡಿರುವ ಚೆನ್ನೈ ಸೂಪರ್ ಕಿಂಗ್ಸ್ ಅಧಿಕಾರಿಗಳು, ಧೋನಿ ನಿವೃತ್ತಿಯಲ್ಲಿ ಏನೇ ಊಹಾಪೋಹಾಗಳಿರಬಹುದು. ಆದರೆ 2020ರ ಆವೃತ್ತಿಯಲ್ಲೂ ಸಿಎಸ್ಕೆ ತಂಡದ ನಾಯಕರಾಗಿ ಅವರೇ ಮುಂದುವರಿಯಲಿದ್ದಾರೆ ಎಂದು ತಿಳಿಸಿದ್ದಾರೆ.
ಧೋನಿ ಐಪಿಎಲ್ ಆರಂಭದಿಂದ ಇಲ್ಲಿಯವರೆಗೆ ಸಿಎಸ್ಕೆ ಆಡಿರುವ 10 ಆವೃತ್ತಿಗಳಲ್ಲೂ ನಾಯಕರಾಗಿ ಮುಂದುವರೆದಿದ್ದರು. 2016 ಹಾಗೂ 2017ರಲ್ಲಿ ಫಿಕ್ಸಿಂಗ್ ಆರೋಪದ ಮೇಲೆ ಎರಡು ವರ್ಷ ನಿಷೇದವಾದ ಸಂದರ್ಭದಲ್ಲಿ ರೈಸಿಂಗ್ ಪುಣೆ ಜೇಂಟ್ಸ್ ತಂಡದಲ್ಲಿ ಕಾಣಿಸಿಕೊಂಡಿದ್ದರು.