ಹೈದರಾಬಾದ್:ಭಾರತ ತಂಡದ ಅನುಭವಿ ವೇಗಿ ಆರ್.ಅಶ್ವಿನ್ 2020ರ ಐಪಿಎಲ್ನಲ್ಲೂ ಯಾವುದೇ ಬ್ಯಾಟ್ಸ್ಮನ್ ಕ್ರೀಸ್ ಬಿಟ್ಟು ಹೋದರೂ ಮಂಕಡ್ ಮಾಡಲು ಹೆದರುವುದಿಲ್ಲ ಎಂದು ಅಭಿಮಾನಿಯೊಬ್ಬ ಕೇಳಿದ ಪ್ರಶ್ನೆಗೆ ಉತ್ತರಿಸಿದ್ದಾರೆ.
ಟ್ವಿಟರ್ನಲ್ಲಿ ತಮ್ಮ ಅಭಿಮಾನಿಗಳಿಗೆ ಅವರು ಪ್ರಶ್ನೆಗಳನ್ನು ಅಹ್ವಾನಿಸಿದ್ದರು. ಈ ವೇಳೆ ಆಕಾಶ್ ಎಂಬ ಅಭಿಮಾನಿ 'ಈ ಐಪಿಎಲ್‌ನಲ್ಲಿ ನೀವು ಮಂಕಡ್ ಮಾಡಬಹುದಾದ ಸಂಭಾವ್ಯ ಬ್ಯಾಟ್ಸ್‌ಮನ್‌ಗಳು ಯಾರು?' ಎಂಬ ಪ್ರಶ್ನೆಗೆ ಉತ್ತರಿಸಿರುವ ಅವರು, 'ಕ್ರೀಸ್ ಬಿಟ್ಟು ತೆರಳುವ ಯಾವುದೇ ಬ್ಯಾಟ್ಸ್ಮನ್ ಆದರೂ' ಎಂದು ಉತ್ತರಿಸಿದ್ದಾರೆ.